ಜಿಲ್ಲೆಯ ೬ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ೨೩ ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ; ಅಂತಿಮವಾಗಿ ೭೨ ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ- ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ


ಕೋಲಾರ, ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ೨೦೨೩ ಕ್ಕೆ ಸಂಬoಧಿಸಿದoತೆ, ಇಂದು (ಏ.೨೪) ಕ್ರಮಬದ್ಧವಾಗಿದ್ದ ತಮ್ಮ ನಾಮಪತ್ರಗಳನ್ನು ಆಸಕ್ತ ಅಭ್ಯರ್ಥಿಗಳು ಹಿಂಪಡೆಯಲು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ, ಜಿಲ್ಲೆಯ ೬ ವಿಧಾನಸಭಾ ಮತಕ್ಷೇತ್ರಗಳ ಒಟ್ಟು ೨೩ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು ಮತ್ತು ಒಟ್ಟು ೭೨ ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋಲಾರ ಜಿಲ್ಲೆಯ ೬ ವಿಧಾನಸಭಾ ಮತಕ್ಷೇತ್ರಗಳಿಗೆ ಒಟ್ಟು ೧೫೧ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಏ.೨೧ ರಂದು ನಾಮಪತ್ರ ಪರಿಶೀಲನೆಯ ನಂತರ ಅದರಲ್ಲಿನ ೧೫ ನಾಮಪತ್ರಗಳು ತಿರಸ್ಕೃತಗೊಂಡು, ೧೩೬ ನಾಮಪತ್ರಗಳು ಕ್ರಮಬದ್ಧವಾಗಿ ಹಾಗೂ ೯೫ ಅಭ್ಯರ್ಥಿಗಳು ಉಳಿದಿದ್ದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು (ಏ.೨೪) ಬೆಳಿಗ್ಗೆ ೧೧ ಗಂಟೆಯಿoದ ಮಧ್ಯಾಹ್ನ ೩ ಗಂಟೆಯವರೆಗೆ ಆಸಕ್ತ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಅದರಂತೆ, ಒಟ್ಟು ೨೩ ನಾಮಪತ್ರಗಳನ್ನು ಹಿಂಪಡೆಯಲಾಗಿದ್ದು ಅಂತಿಮವಾಗಿ ೭೨ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

೧೪೪-ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಆರ್.ನಾರಾಯಣಸ್ವಾಮಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದಿಂದ(ಕಮಲ) ಜಿ ಆರ್ ಶ್ರೀನಿವಾಸರೆಡ್ಡಿ, ಆಮ್ ಆದ್ಮಿ ಪಕ್ಷದ ವೈ ವಿ ವೆಂಕಟಾಚಲ(ಪೊರಕೆ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಕೆ ಆರ್ ರಮೇಶ್ ಕುಮಾರ್(ಕೈ), ಜನತಾದಳ (ಜಾತ್ಯತೀತ) ಪಕ್ಷದಿಂದ ಜಿ. ಕೆ ವೆಂಕಟಶಿವಾರೆಡ್ಡಿ(ತೆನೆಹೊತ್ತಮಹಿಳೆ), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆನಂದ ಜಿ. ಕೆ., ಪಕ್ಷೇತರ ಅಭ್ಯರ್ಥಿ, ಎನ್ ಎಸ್ ರಮೇಶ್ ಕುಮಾರ್, ಎಸ್. ರಮೇಶ್ ಕುಮಾರ್, ವೆಂಕಟಶಿವಾರೆಡ್ಡಿ, ಟಿ.ಎನ್ ವೆಂಕಟಶಿವಾರೆಡ್ಡಿ ಸೇರಿ ಒಟ್ಟು ೦೯ ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.
.
೧೪೫-ಮುಳಬಾಗಿಲು ವಿಧಾನಸಭಾ ಮತಕ್ಷೇತ್ರದ ಚುನಾವಣೆಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಾರಾಯಣಸ್ವಾಮಿ.ಎಂಎಸ್, ಗೋಪಾಲ್.ಸಿ.ವಿ., ವೆಂಕಟೇಶಪ್ಪ.ಎo, ಕೃಷ್ಣಪ್ಪ .ಎನ್, ವೆಂಕಟರಮಣ.ಎo, ಶ್ರೀನಿವಾಸ ಮಾರಪ್ಪ.ವಿ, ವೆಂಕಟೇಶಪ್ಪ. ಪಿ, ಚಂದ್ರಪ್ಪ.ಇ., ವೆಂಕಟರವಣ, ಗೋಪಾಲ್,ಎಂ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಸುಂದರ್ ರಾಜ್ .ಕೆ(ಕಮಲ), ಆಮ್ ಆದ್ಮಿ ಪಕ್ಷದ ವಿಜಯಕುಮಾರ್ ಎನ್(ಪೊರಕೆ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆದಿನಾರಾಯಣ .ವಿ(ಕೈ), ಜನತಾದಳ (ಜಾತ್ಯತೀತ) ಪಕ್ಷದಿಂದ ಮಂಜುನಾಥ್(ತೆನೆಹೊತ್ತಮಹಿಳೆ), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆನಂದ ಕುಮಾರ್ ಎಂ., ಸಾರ್ವಜನಿಕ ಆದರ್ಶ ಸೇನಾ ಪಕ್ಷದಿಂದ ಮೂರ್ತಿ ಕೆ.ವಿ. ಪಕ್ಷೇತರ ಅಭ್ಯರ್ಥಿ, ಗೋವಿಂದಪ್ಪ .ಜಿ.ಎಂ,ಗೋವಿoದು.ಆರ್, ನಾಗರಾಜ್.ಕೆ, ರಾಮಪ್ಪ.ಜಿ.ಸಿ, ವೆಂಕಟೇಶಪ್ಪ, ಶ್ರೀಧರ್, ಆರ್, ಸೇರಿ ಒಟ್ಟು ೧೨ ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.
೧೪೬-ಕೆ ಜಿ ಎಫ್ ವಿಧಾನಸಭಾ ಮತಕ್ಷೇತ್ರದ ಚುನಾವಣೆಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುತ್ತುಮಾಣಿಕ್ಯಂ.ಎ,ಆನoದರಾಜ್.ಎ,ಸುರೇಶ್‌ಕುಮಾರ್.ಬಿ, ಮತ್ತು ಸುರೇಶ.ಬಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಅಶ್ವಿನಿ ಸಂಪoಗಿ(ಕಮಲ), ಆಮ್ ಆದ್ಮಿ ಪಕ್ಷದ ಗಗ್ಗನ ಸುಕನ್ಯ ಆರ್(ಪೊರಕೆ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ರೂಪಕಲಾ.ಎಂ(ಕೈ), ಜನತಾದಳ (ಜಾತ್ಯತೀತ) ಪಕ್ಷದಿಂದ ಡಾ.ರಮೇಶಬಾಬು.ವಿ ಎಂ(ತೆನೆಹೊತ್ತಮಹಿಳೆ), ಬಹುಜನ ಸಮಾಜ ಪಕ್ಷದಿಂದ ಕೋದಂಡ. ಆರ್(ಆನೆ), ಸಿ ಪಿ ಐ(ಎಂ) ಪಕ್ಷದಿಂದ ತಂಗರಾಜ್.(ಸುತ್ತಿಗೆ ಮತ್ತು ಕುಡುಗೋಲು), ಸಿಪಿಐ ಪಕ್ಷದಿಂದ ಜೋತಿಬಾಸ್.ಆರ್(ಜೋಳದ ತೆನೆ ಮತ್ತು ಕುಡುಗೋಲು), ಆರ್ಪಿಐ ಪಕ್ಷದಿಂದ ರಾಜೇಂದ್ರನ್.ಎಸ್(ಪ್ರಷರ್ ಕುಕ್ಕರ್). ಪಕ್ಷೇತರ ಅಭ್ಯರ್ಥಿ ಕಲಾವತಿ.ವಿ(ಹೆಲಿಕಾಪ್ಟರ್). ಡಾ. ಜೋಶ್ವ ಎಂ ಇ ರಾಜನ್(ಆಟೋರಿಕ್ಷಾ), ಸೇರಿ ಒಟ್ಟು ೧೦ ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.
೧೪೭-ಬಂಗಾರಪೇಟೆ ವಿಧಾನಸಭಾ ಮತಕ್ಷೇತ್ರದ ಚುನಾವಣೆಗಾಗಿ ಒಟ್ಟು ೮ ಜನ ಸ್ಪರ್ದಿಸುತ್ತಿದ್ದು, ಯಾವುದೇ ನಾಮಪತ್ರ ವಾಪಸ್ ಪಡೆದಿರುವುದಿಲ್ಲ ಮತ್ತು ಭಾರತೀಯ ಜನತಾ ಪಕ್ಷ(ಕಮಲ)ದಿಂದ ಎಂ.ನಾರಾಯಣಸ್ವಾಮಿ, ಆಮ್ ಆದ್ಮಿ ಪಕ್ಷದ(ಪೊರಕೆ) ಹರಿಕೃಷ್ಣ.ಆರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ(ಕೈ) ಎಸ್ ಎನ್ ನಾರಾಯಣಸ್ವಾಮಿ.ಕೆ.ಎಂ, ಜನತಾದಳ (ಜಾತ್ಯತೀತ) ಪಕ್ಷ(ತೆನೆಹೊತ್ತ ಮಹಿಳೆ)ದಿಂದ ಎಂ.ಮಲ್ಲೇಶಬಾಬು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ(ಬ್ಯಾಟರಿ ಟಾರ್ಚ್) ರಾಜಾ. ಎಂ., ಬಹುಜನ ಸಮಾಜ ಪಕ್ಷದಿಂz(ಆನೆ) ಕೆ.ಎನ್ ನಾರಾಯಣಸ್ವಾಮಿ . ಪಕ್ಷೇತರ ಅಭ್ಯರ್ಥಿ ಜ್ಯೋತೀಶ ಕೋಲಾg(ಡಿಶ್ ಆಂಟೆನಾ), ಎಸ್ ಎನ್ ನಾರಾಯಣಸ್ವಾಮಿ. ವಿ(ಕರಣೆ) ಸೇರಿ ಒಟ್ಟು ೮ ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.
೧೪೮-ಕೋಲಾರ ವಿಧಾನಸಭಾ ಮತಕ್ಷೇತ್ರದ ಚುನಾವಣೆಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಿ.ಆರ್ ಹರೀಶ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಆರ್.ವರ್ತೂರು ಪ್ರಕಾಶ್(ಕಮಲ), ಆಮ್ ಆದ್ಮಿ ಪಕ್ಷದ ಜಮೀರ್ ಅಹಮದ್.ಎನ್(ಪೊರಕೆ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಜಿ.ಮಂಜುನಾಥ(ಕೈ), ಜನತಾದಳ (ಜಾತ್ಯತೀತ) ಪಕ್ಷದಿಂದ ಸಿ.ಆರ್.ಶ್ರೀನಾಥ್(ತೆನೆಹೊತ್ತಮಹಿಳೆ), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಇಂದಿರಾ ಎ., ಬಹುಜನ ಸಮಾಜ ಪಕ್ಷದಿಂದ ಸುರೇಶ.ಎಸ್ ಬಿ(ಆನೆ). ಸಮಾಜವಾದಿ ಪಕ್ಷದಿಂದ ಸಿ.ತಮ್ಮಪ್ಪ (sಸೈಕಲ್), ಆರ್ಪಿಐ ಪಕ್ಷದಿಂದ ಎಂ.ಎಸ್.ಬದ್ರಿನಾರಾಯಣ ಪಕ್ಷೇತರ ಅಭ್ಯರ್ಥಿ ಅರವಿಂದ್.ಜಿ.ಆರ್, ಕೆ.ಎಸ್. ಆರಿಫ್, ಅಮ್ಜದ್ ಪಾಷಾ, ದೇವಕುಮಾರ್.ಹೆಚ್.ಎ, ಪ್ರಕಾಶ, ಬೈರೆಡ್ಡಿ .ಟಿ, ಡಿ.ವಿ. ಮಂಜುನಾಥ, ಎಂ. ರಮೇಶ , ಜಿ. ವೆಂಕಟಾಚಲಪತಿ, ಎಸ್ ಸತೀಶ ಹಾಗೂ ಸೇರಿ ಒಟ್ಟು ೧೮ ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.

೧೪೯-ಮಾಲೂರು ವಿಧಾನಸಭಾ ಮತಕ್ಷೇತ್ರದ ಚುನಾವಣೆಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಡಿ.ವಿ.ಮಂಜುನಾಥಗೌಡ ರಶ್ಮಿ.ಎಸ್, ವಿಜಯಕುಮಾರ್, ವಿಜಯ್ಕುಮಾರ್.ಎಂ, ಶಶಿಕುಮಾರ್.ಎಸ್, ಶ್ವೇತಾ ವಿಜಯಕುಮಾರ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಕೆ.ಎಸ್.ಮಂಜುನಾಥ ಗೌಡ (ಕಮಲ), ಆಮ್ ಆದ್ಮಿ ಪಕ್ಷದ ರವಿಶಂಕರ್.ಎo(ಪೊರಕೆ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಕೆ.ವೈ.ನಂಜೇಗೌಡ(ಕೈ), ಜನತಾದಳ (ಜಾತ್ಯತೀತ) ಪಕ್ಷದಿಂದ ಜಿ.ಈ.ರಾಮೇಗೌಡ (ತೆನೆ ಹೊತ್ತ ಮಹಿಳೆ), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಹೇಶ.ಎ.ವಿ(ಬ್ಯಾಟರಿ ಟಾರ್ಚ್), ಬಹುಜನ ಸಮಾಜ ಪಕ್ಷದಿಂದ ಎನ್.ರಮೇಶ(ಆನೆ) . ಸನ್ಯುಕ್ತ್ ವಿಕಾಸ್ ಪಕ್ಷದಿಂದ ವೆಂಕಟೇಶಗೌಡ.ಬಿ.ಜಿ(ಹೆಲ್ಮೆಟ್) ಪಕ್ಷೇತರ ಅಭ್ಯರ್ಥಿ ಜಯಮ್ಮ(ನಗಾರಿ), ಎನ್. ದೇವಾನಂದಬಾಬು(ಪ್ರೆಷರ್‌ಕುಕ್ಕರ್), ಕೆ ನಾಗೇಶ್(ಬ್ಯಾಟ್), ನಾರಾಯಣಮ್ಮ(ತೆಂಗಿನಮರ), ಹೆಚ್.ಆರ್.ರಾಮೇಗೌq(ಬ್ಯಾಟ್ಸಾö್ಮö್ಯನ್), ಹೆಚ್.ಎಂ. ವಿಜಯಕುಮಾರ್(ಆಟೋ ರಿಕ್ಷಾ), ಎಂ,ವಿಜಯಕುಮಾರ್(ರೋಡ್ ರೋಲರ್), ಮತ್ತು ಸುರೇಶ್.ಕೆ(ಕಹಳೆ ಊದುತ್ತಿರುವ ಮನುಷ್ಯ). ಸೇರಿ ಒಟ್ಟು ೧೫ ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *