ಜಿಲ್ಲಾಡಳಿತ, ಸಂಸದರ ನೇತೃತ್ವದಲ್ಲಿ ಅ.೨ ಬೃಹತ್ ರಕ್ತದಾನ ಶಿಬಿರದಲ್ಲಿ ನೌಕರರು ರಕ್ತದಾನ ಮಾಡಿ ಸಾಮಾಜಿಕ ಬದ್ದತೆ ತೋರೋಣ-ಸುರೇಶ್‌ಬಾಬು

ಕೋಲಾರ:- ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಅ.೨ ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಾಳಜಿಯೊಂದಿಗೆ ನಡೆಸುತ್ತಿರುವ ಈ ಶಿಬಿರದಲ್ಲಿ ಜೀವದಾನವಾದ ರಕ್ತದಾನ ಮಾಡುವಂತೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮನವಿ ಮಾಡಿದರು.
ಜಿಲ್ಲಾಡಳಿತ ಭವನದಲ್ಲಿನ ವಿವಿಧ ಕಚೇರಿಗಳಿಗೆ ನೌಕರರ ಸಂಘದ ಪದಾಧಿಕಾರಿಗಳ ತಂಡದೊoದಿಗೆ ಭೇಟಿ ನೀಡಿದ ಅವರು, ರಕ್ತದಾನ ಶಿಬಿರಕ್ಕೆ ಆಹ್ವಾನ ನೀಡಿ, ಶಿಬಿರದ ಮಹತ್ವ, ರಾಜ್ಯದಲ್ಲೇ ಕೋಲಾರ ಜಿಲೆಯಲ್ಲಿ ಬೃಹತ್ ಶಿಬಿರ ನಡೆಸುವ ಮೂಲಕ ದಾಖಲೆ ನಿರ್ಮಿಸುವ ಸಂಸದರ ಪ್ರಯತ್ನಕ್ಕೆ ಎಲ್ಲಾ ನೌಕರರು ಕೈಜೋಡಿಸೋಣ ಎಂದು ತಿಳಿಸಿದರು.
ಜಿಲ್ಲಾಡಳಿತದ ಆಶ್ರಯದಲ್ಲಿ ಈ ಶಿಬಿರವನ್ನು ಆಯೋಜಿಸಿದ್ದು, ಜಿಲ್ಲೆಯ ನೌಕರರ ಸಂಘದ ಸಹಕಾರವನ್ನು ಕೋರಲಾಗಿದೆ ಈ ಹಿನ್ನಲೆಯಲ್ಲಿ ಎಲ್ಲಾ ನೌಕರರು ಅ.೨ ರಂದು ಶಿಬಿರದಲ್ಲಿ ಪಾಲ್ಗೊಳ್ಳೋಣ, ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ನೀಡುವ ಮೂಲಕ ನಮ್ಮ ಸಂಘಟನೆಯ ಸಾಮಾಜಿಕ ಬದ್ದತೆಯನ್ನು ತೋರೋಣ ಎಂದರು.
ಪ್ರತಿ ಇಲಾಖೆಯಿಂದ ರಕ್ತದಾನ ಮಾಡುವ ನೌಕರರ ಪಟ್ಟಿಯನ್ನು ಇಂದೇ ಸಿದ್ದಪಡಿಸಿ ನಾಳೆ ಸಂಜೆಯೊಳಗೆ ನೀಡುವಂತೆ ಸೂಚಿಸಿದ ಸುರೇಶ್ ಬಾಬು, ರಕ್ತ ನೀಡುವವರ ಹೆಸರು,ಇಲಾಖೆ,ಹುದ್ದೆ, ವಯಸ್ಸು, ದೂರವಾಣಿ ಸಂಖ್ಯೆಯನ್ನು ಸಂಘಕ್ಕೆ ತಲುಪಿಸಲು ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘವೇ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಆಲೋಚನೆ ಮಾಡಿತ್ತು, ಕಳೆದ ಕೋವಿಡ್ ನಂತರ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ನೀಗಿಸಲು ನೌಕರರು ಪ್ರಯತ್ನಿಸುವ ಉದ್ದೇಶವಿತ್ತು. ಆದರೆ ಇದೀಗ ಜಿಲ್ಲಾಡಳಿತದಿಂದಲೇ ಸಂಸದರ ನೇತೃತ್ವದಲ್ಲಿ ಶಿಬಿರ ಆಯೋಜಿಸಿದ್ದು, ನಾವೆಲ್ಲಾ ಪಾಲ್ಗೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಡಳಿತ ಭವನದಲ್ಲಿನ ಸರ್ವೇ ಇಲಾಖೆ,ಆಹಾರ,ಖಜಾನೆ, ಜಿಲ್ಲಾಧಿಕಾರಿಗಳ ಕಚೇರಿ, ಕಂದಾಯ-೧, ಕಂದಾಯ-೨ ವಿಭಾಗ ಮುಜರಾಯಿ, ಪಿಆರ್‌ಇಡಿ ಉಪವಿಭಾಗ,ಮಾನವ ಹಕ್ಕುಗಳ ವಿಭಾಗ, ಗ್ರಾಮೀಣ ನೀರು ಸರಬರಾಜು, ಕೆಜಿಐಡಿ, ಖಾದಿಗ್ರಾಮೋದ್ಯೋಗ, ಕೌಶಲ್ಯ ಅಭಿವೃದ್ದಿ ಇಲಾಖೆ, ಭೋವಿ ನಿಗಮ,ಗಣಿ ಭೂವಿಜ್ಞಾನ,ಡಿಡಿಪಿಯು, ಅಂಬೇಡ್ಕರ್ ಅಭಿವೃದ್ದಿ ನಿಗಮ, ಪ್ರವಾಸೋದ್ಯಮ, ನಗರದ ವಿವಿಧೆಡೆ ಇರುವ ಸಮಾಜ ಕಲ್ಯಾಣ, ತಾಲ್ಲೂಕು ಕಚೇರಿ, ಅಬಕಾರಿ ಇಲಾಖೆ,ಸಾರಿಗೆ ಸಂಸ್ಥೆ, ಲೋಕೋಪಯೋಗಿ ಇಲಾಖೆ, ನಗರಸಭೆ,ಎಸಿ ಕಚೇರಿ, ತಾಲ್ಲೂಕು ಕಚೇರಿ, ಜಿಲ್ಲಾಶಸ್ತ ಚಿಕಿತ್ಸಕರ ಕಚೇರಿ, ಜಿಲ್ಲಾ ಮೀಸಲು ಪಡೆ ಕಚೇರಿ ಸೇರಿದಂತೆ ಎಲ್ಲಾ ಜಿಲ್ಲಾ ಕಚೇರಿಗಳಿಗೂ ನೌಕರರ ಸಂಘದ ತಂಡ ಭೇಟಿ ನೀಡಿ ರಕ್ತದಾನದ ಕುರಿತು ಅರಿವು ಮೂಡಿಸಿತು.
ನೌಕರರ ತಂಡದಲ್ಲಿ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸರೆಡ್ದಿ,ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷ ಮಂಜುನಾಥ್, ಸಂಸದರ ಆಪ್ತ ಸಹಾಯಕ ಸಂದೀಪ್, ಅರಣ್ಯ ಇಲಾಖೆಯ ಆನಂದ್‌ಕುಮಾರ್, ಸರ್ವೇ ಇಲಾಖೆಯ ಸುಭಾಷ್,ವಿಜಯ್‌ಕುಮಾರ್ ಮತ್ತಿತರರು ಹಾಜರಿದ್ದು, ವಿವಿಧ ವೃಂದ ಇಲಾಖೆಗಳಿಗೆ ಭೇಟಿ ನೀಡಿ ನೌಕರರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.

Leave a Reply

Your email address will not be published. Required fields are marked *