ರಾಯಲ್ಪಾಡು : ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿಯ ಜನಸ್ನೇಹಿ ಯೋಜನೆಗಳಲ್ಲಿ ಒಂದಾಗಿದ್ದು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗಂಡು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಕೆಇಬಿ ಸಬ್ ಸೆಷ್ಟೇಷನ್ ಜೆಇ ಆರ್.ಕೆ.ಬಾಬು ಹೇಳಿದರು.
ಕೂರಿಗೇಪಲ್ಲಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಗ್ರಾಮವಿದ್ಯುತ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಬೇಕು ಹಾಗೂ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸರ್ಕಾರದಿಂದ ಎಸ್ಸಿ, ಎಸ್ಟಿ ಸಮುದಾಯದವರು ತಮ್ಮ ಮನೆಗಳಿಗೆ ಭಾಗ್ಯಜ್ಯೋತಿ ಹಾಗು ಇತರೆ ವಿದ್ಯುತ್ ಸಂಪರ್ಕವನ್ನು ಪಡೆದವರಿಗೆ ೭೫% ಯುನಿಟ್ ಉಚಿತವಾಗಿ ನೀಡಲಿದ್ದು, ತಮ್ಮ ಮನೆಯ ದಾಖಲೆಗಳನ್ನು ನೀಡಿದಾಗ ಈ ಸೌಲಭ್ಯಗಳನ್ನು ಪಡೆಯಬಹುದು ಎಂದರು.
೨೬ ಮೌಖಿಕವಾಗಿ, ೯ಲಿಖಿತ ಅರ್ಜಿಗಳನ್ನು ಗ್ರಾಹಕರು ನೀಡಿದ್ದಾರೆ. ಅಲ್ಲದೆ ತಮ್ಮ ಗ್ರಾಮಗಳಲ್ಲಿನ ಶಿಥಿಲವಾದ ವಿದ್ಯುತ್ ಕಂಬಗಳನ್ನು ತೆಗೆಯುವಂತೆ ಹಾಗೂ ವಸತಿಯೋಜನೆಯಲ್ಲಿ ನಿರ್ಮಿಸಿಕೊಳ್ಳಲಾದ ಮನೆಗಳಿಗೆ ಅತಿಶೀಘ್ರವಾಗಿ ಸಂಪರ್ಕಗಳನ್ನು ಕಲ್ಪಿಸಿಕೊಡುವಂತೆ ಗ್ರಾಹಕರು ಮನವಿ ಮಾಡಿದರು.
ಎಇಇ ರಾಜೇಶ್, ಗೌನಿಪಲ್ಲಿ ಕೆಇಬಿ ಸಬ್ ಸೆಷ್ಟೇಷನ್ ಜೆಇ ಆನಂದ್, ಗ್ರಾ.ಪಂ. ಅಧ್ಯಕ್ಷ ವಿಶ್ವನಾಥರೆಡ್ಡಿ, ಪಿಡಿಒ ಏಜಾಜ್ ಪಾಷ, ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ದೊರಸ್ವಾಮಿರೆಡ್ಡಿ ಹಾಗೂ ಗ್ರಾಮಪಂಚಾಯಿತಿ ಸದಸ್ಯರು , ಗ್ರಾಹಕರು ಇದ್ದರು.