ಚುನಾವಣೆಗೆ ಸಂಬoಧಿಸಿದ ದೂರು ದಾಖಾಲಿಸಲು ಸಾಮಾನ್ಯ ವೀಕ್ಷಕರು ಮತ್ತು ಪೋಲಿಸ್ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರ ನೇಮಕ

ಕೋಲಾರ, ವಿಧಾನಸಭೆ ಸಾವ್ರತ್ರಿಕ ಚುನಾವಣೆ ೨೦೨೩ರ ಸಂಬoಧ ಕೋಲಾರ ಜಿಲ್ಲೆಯ ಸಾಮಾನ್ಯ ವೀಕ್ಷಕರಾಗಿ,೧೪೪ ಶ್ರೀನಿವಾಸಪುರ, ಹಾಗೂ ೧೪೫ ಮುಳಬಾಗಿಲು ವಿಧಾನಸಭಾ ಮತ ಕ್ಷೇತ್ರಗಳಿಗೆ ಡಾ|| ರಾಜ್ ಕ್ರಿಶನ್ ಪೃಥಿ ಭಾ.ಆ.ಸೇ – ೯೧೪೧೦೩೫೨೧೪, ೧೪೬ ಕೆ ಜಿ ಎಫ್ ಹಾಗೂ ೧೪೭ ಬಂಗಾರಪೇಟೆ ವಿಧಾನಸಭಾ ಮತ ಕ್ಷೇತ್ರಗಳಿಗೆ ಶ್ರೀ ಸುಧಾಂಶು ಮೋಹನ್ ಸಮಲ್ ಭಾ.ಆ.ಸೇ – ೯೧೪೧೦೩೫೨೧೫, ೧೪೮ ಕೋಲಾರ ಹಾಗೂ ೧೪೯ ಮತ್ತು ಮಾಲೂರು ವಿಧಾನಸಭಾ ಮತ ಕ್ಷೇತ್ರಗಳಿಗೆ ಶ್ರೀ ಮನೋಜ್ ಕುಮಾರ್ ಭಾ.ಆ.ಸೇ-೯೧೪೧೦೩೫೨೧೬, ಮತ್ತು ಎಲ್ಲಾ ಆರೂ ಮತ ಕ್ಷೇತ್ರಗಳಿಗೆ ಪೋಲಿಸ್ ವೀಕ್ಷಕರಾಗಿ ಶ್ರೀ ರಾಜೇಶ್ ಕುಮಾರ್ -೯೧೪೧೦೩೫೨೧೭, ಹಾಗೂ ವೆಚ್ಚ ವೀಕ್ಷಕರಾಗಿ ಶ್ರೀ ಅಮೀತ್ ಕುಮಾರ್ ಐಆರ್‌ಎಸ್- ೧೪೪ ಶ್ರೀನಿವಾಸಪುರ-೯೧೪೧೦೩೫೨೧೦, ಶ್ರೀ ಜಿ ಅಜಯ್ ರಾಬಿನ್ ಸಿಂಗ್ ಐ ಆರ್ ಎಸ್. ೧೪೫-ಮುಳಬಾಗಲು ೧೪೬- ಕೆಜಿಎಫ್,- ೯೧೪೧೦೩೫೨೧೧, ಶ್ರೀ ತಗಡಿ ಮಂಜುನಾಥ್, ಐಆರೆಸ್. ೧೪೮- ಕೋಲಾರ-೯೧೪೧೦೩೫೨೧೨, ಶ್ರೀ ಶಿವನಾರಾಯಣ್ ಐ ಆರ್ ಎಸ್.-೧೪೭-ಬಂಗಾರಪೇಟೆ, ೧೪೯- ಮಾಲೂರು -೯೧೪೧೦೩೫೨೧೩ ರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಸಾರ್ವಜನಿಕರು ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದ ಸಲಹೆ ಮತ್ತು ದೂರುಗಳನ್ನು ಇವರಿಗೆ ದೂರವಾಣಿ ಮುಖಾಂತರ ಅಥವ ಖುದ್ದಾಗಿ ಸಲ್ಲಿಸಬಹುದೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾರವರು ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಒಟ್ಟು ೧೫೯೭ ಮತಗಟ್ಟೆಗಳನ್ನು ಸರ್ಕಾರಿ ಶಾಲಾಕಟ್ಟಡಗಳಲ್ಲಿ ಸುಸಜ್ಜಿತಗೊಳಿಸಲಾಗಿದ್ದು ಇವುಗಳಲ್ಲಿ ೭ ಮತಗಟ್ಟೆಗಳನ್ನು ಸರ್ಕಾರಿ ಶಾಲೆಯ ಸಮೀಪದ ಸರ್ಕಾರಿ ಕಟ್ಟಡದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ೧೨೭೦೭೧೮ ಮತದಾರರು ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ ಮಹಿಳಾ ಮತದಾರರ ಸಂಖ್ಯೆ ೬೩೯೪೦೮ ಹಾಗೂ ಪುರುಷ ಮತದಾರರ ಸಂಖ್ಯೆ ೬೩೧೧೪೭ ಇರುತ್ತದೆ ಹಾಗೂ ೧೬೩ ಜನ ಇತರೆ ಮತದಾರರು ನೋಂದಾಯಿಸಿಕೊoಡಿರುತ್ತಾರೆ ಎಂದರು.
ಈಲ್ಲೆಯ ಎಲ್ಲ ಮತಕ್ಷೇತ್ರಗಳಲ್ಲಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದ್ದು ಜಿಲ್ಲಾ ಕೇಂದ್ರ-೦೮೧೫೨-೨೪೩೫೦೭, ೧೪೪-ಶ್ರೀನಿವಾಸಪುರ -೦೮೧೫೭-೨೪೬೨೨೨, ೧೪೫ ಮುಳಬಾಗಿಲು-೦೮೧೫೯-೨೪೨೦೪೯, ೧೪೬-ಕೆಜಿಎಫ್-೦೮೧೫೩-೨೭೦೪೦೪, ೧೪೭ಬಂಗಾರಪೇಟೆ- ೦೮೧೫೩-೨೫೫೨೬೩, ೧೪೮ ಕೋಲಾರ-೦೮೧೫೨-೨೨೨೦೫೬,೧೪೯ ಮಾಲೂರು ೦೮೧೫೧-೨೩೨೬೯೯ ಹಾಗೂ ರಾಜ್ಯ ಟೋಲ್ ಫ್ರೀ ಸಂಖ್ಯೆ ೧೯೫೦ಗೆ ಸಹ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದಾಗಿದೆ ಎಂದರು.
ಈಲ್ಲೆಯಲ್ಲಿ ಒಟ್ಟು ೧೮ ವಿಎಸ್‌ಟಿ, ೬ವಿವಿಟಿ,೪೨ ಫ್ಲೆಯಿಂಗ್ ಸ್ಕಾ÷್ವಡ್, ೨೯ ಚೆಕ್‌ಪೋಸ್ಟ್, ೮೭ ಎಸ್‌ಎಸ್‌ಟಿ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.ಇವುಗಳಲ್ಲಿ ೧೮ ಅಂತರರಾಜ್ಯ ಚೆಕ್‌ಪೋಸ್ಟ್, ೮ಅಂತರಜಿಲ್ಲಾ ಹಾಗೂ ೩ಜಿಲ್ಲೆಯೊಳಗಿನ ಚೆಕ್‌ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸಲು ನಿಯತಗೊಳಿಸಲಾಗಿದೆ ಎಂದರು.

ಮೇಲಿನ ಚೆಕ್‌ಪೋಸ್ಟ್ಗಳಲ್ಲಿ ಒಟ್ಟಾರೆ ೨೫ ಪ್ರಕರಣಗಳಲ್ಲಿ ರೂ ೨೭೬೭೬೮೨೦/-ಗಳಷ್ಟು ಮೊತ್ತದ ಹಣ, ೨೩ ಪ್ರಕರಣಗಳಲ್ಲಿ ರೂ.೯೧೩೯೬.೧೪/- ಮೊತ್ತದ ೨೩೦.೫೨ ಲೀ ನಷ್ಟು ಮದ್ಯ, ೧೩ ಪ್ರಕರಣಗಳಲ್ಲಿ ರೂ. ೨೩೦೬೫೦೦/- ಮೊತ್ತದ ೩೨.೬೩ ಕೆ ಜಿ ತೂಕದ ಮಾದಕ ದ್ರವ್ಯಗಳು, ೧ಪ್ರಕರಣದಲ್ಲಿ ರೂ.೩೦೦೦೦೦/- ಮೊತ್ತದ ೪.೯ಕೆಜಿ ತೂಕದ ಮೌಲ್ಯಯುತ ಲೋಹಗಳು, ೨೨ಪ್ರಕರಣಗಳಲ್ಲಿ ೨೦೬೮೩೫೩.೨೦/- ಮೌಲ್ಯದ ಆಮಿಷದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಎಂ ನಾರಾಯಣ್ ರವರು ಮಾತನಾಡಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ನಿರ್ಭೀತ, ಶಾಂತ ಹಾಗೂ ಸುವ್ಯವಸ್ಥಿತ ಚುನಾವಣೆಗಳನ್ನು ನಡೆಸುವುದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ನ ಗುರಿ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ೬೨೦ ರೌಡಿಶೀಟರ್‌ಗಳಮೇಲೆ ನಿಗಾ ಇಡಲಾಗಿದ್ದು, ಇವರಲ್ಲಿ ನೀತಿಸಂಹಿತೆ ಜಾರಿಯಾದಾಗಿನಿಂದ ೭೩ ಜನ ಹೊಸಬರನ್ನು ಗುರುತಿಸಲಾಗಿದೆ. ಇವರೆಲ್ಲರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ೨೬೯ ಜನರಿಗೆ ಬೇಲ್ ರಹಿತ ವಾರೆಂಟ್ ನೀಡಲಾಗಿದೆ. ಜಿಲ್ಲೆಯಲ್ಲಿ ೧೬೪೮ ಶಸ್ತಾಸ್ತಗಳಿಗೆ ಅನುಮತಿ ನೀಡಲಾಗಿದ್ದು, ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲ ಶಸ್ತಾಸ್ತಗಳನ್ನು ಪೊಲೀಸ್ ಸುಪರ್ದಿಗೆ ಒಪ್ಪಿಸುವಂತೆ ಈಗಾಗಲೇ ಆದೇಶಿಸಲಾಗಿದೆ.ಅದರಂತೆ ಶೇ.೮೯ರಷ್ಟು ಶಸ್ತಾಸ್ತಗಳನ್ನು ಪೊಲೀಸ್ ಸುಪರ್ದಿಗೆ ಪಡೆಯಲಾಗಿದೆ. ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ೪ ಜನರನ್ನು ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಹೆಚ್ಚುವರಿಯಾಗಿ ೪  ಚೆಕ್‌ಪೋಸ್ಟ್ಗ ತೆರೆಯಲಾಗಿದೆ. ಎಲ್ಲ ಚೆಕ್‌ಪೋಸ್ಟ್ಗಳಲ್ಲಿ  ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಚೆಕ್‌ಪೋಸ್ಟ್ಗಳಲ್ಲಿ ಯಾವುದೇ ಮಹಿಳೆಯರನ್ನು ನಿಯೋಜಿಸಿರುವುದಿಲ್ಲ. ಎಲ್ಲ  ಚೆಕ್‌ಪೋಸ್ಟ್ಗಳಲ್ಲಿ  ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಕಂಟ್ರೋಲ್ ರೂಂಗಳಲ್ಲಿ ದಿನದ ೨೪ ಗಂಟೆಯೂ ಕಣ್ಗಾವಲು ಪಡೆ ನಿಗಾ ವಹಿಸುತ್ತಿದ್ದಾರೆ. ಕಣ್ಗಾವಲು ದೃಷ್ಯಾವಳಿಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ಬಿತ್ತರಗೊಳಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇಟ್ಟು ನಿಗಾ ವಹಿಸಲಾಗುತ್ತಿದ್ದು, ಈಗಾಗಲೇ ಅನುಮತಿ ಪಡೆಯದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವ ೯ ಅಭ್ಯರ್ಥಿಗಳಿಗೆ ನೋಟೀಸು ನೀಡಲಾಗಿದೆ. ಯಾವುದೇ ವ್ಯಕ್ತಿಯು ತನ್ನ ಇಚ್ಛಾನುಸಾರ ಯೂಟ್ಯೂಬ್‌ಗಳಲ್ಲಿ ಸುದ್ದಿ ಪ್ರಸಾರ ಮಾಡುವುದನ್ನು ಜಿಲ್ಲೆಯಲ್ಲಿ ಖಡ್ಡಾಯವಾಗಿ ನಿಷೇಧಿಸಲಾಗಿದ್ದು, ಯೂಟ್ಯೂಬ್ ಸಂಸ್ಥೆಯಿAದ ಅಧಿಕೃತವಾಗಿ ಸುದ್ದಿ ಬಿತ್ತರಿಸಲು ಅನುಮತಿ ಪಡೆದಿರಬೇಕಾಗಿರುತ್ತದೆ. ಜಿಲ್ಲೆಯ ಯಾವುದೇ ಯೂಟ್ಯೂಬರ್ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದು ಕಂಡುಬoದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಕೇಬಲ್ ಚಾನೆಲ್‌ಗಳು ಕೇಬಲ್‌ಟವಿ ಆಕ್ಟ್ನ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ನಿಯಮಾವಳಿಗಳನ್ನು ಮೀರಿದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬoದಲ್ಲಿ ಸಂಬoಧಿತ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು, ಸಾಮಾನ್ಯ ವೀಕ್ಷಕರು ಅಥವಾ ಸಿವಿಜಲ್ ಆಪ್ ಮುಖಾಂತರ ದೂರು ದಾಖಲಿಸಬಹುದಾಗಿರುತ್ತದೆ. ದೂರುದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ ೨೭೬ ಸೂಕ್ಷ ಮತಗಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ ೧೦೮೦ ಬಿ ಎಸ್ ಎಫ್ ಯೋಧರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ೧೯ ರ‍್ಯಾಲಿಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಮುಕ್ತ, ಶಾಂತಿಯುತ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ಬೇಕಾದ ವಾತಾವರಣವನ್ನು ಸೃಜಿಸಲಾಗಿದೆ. ಇನ್ನು ಸಾರ್ವಜನಿಕರು ತಮ್ಮ ಕರ್ತವ್ಯವಾದ ಮತ ಚಲಾಯಿಸುವ ಕಾರ್ಯವನ್ನು ಶೇ ೧೦೦% ರಷ್ಟು ಮಾಡಿದಲ್ಲಿ ಚುನಾವಣಾ ಆಯೋಗದ ಇಷ್ಟೆಲ್ಲ ಶ್ರಮವು ಸಾರ್ಥಕವಾಗುವುದು ಎಂದು ಅಭಿಪ್ರಾಯಪಟ್ಟರು.

ಸುದ್ದಿಘೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಶಂಕರ್ ವಣಿಕ್ಯಾಳ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *