ಚುನಾವಣಾ ಹಬ್ಬಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜು- ಜಿಲ್ಲಾ ಚುನಾವಣಾಧಿಕಾರಿ ವೆಂಕಟ್‌ರಾಜಾಕೋಲಾರ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳು ೨೦೨೩ರ ಚುನಾವಣಾ ಪ್ರಕ್ರಿಯೆಗೆ ಜಿಲ್ಲಾಡಳಿತ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟ್‌ರಾಜಾ ರವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಘೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಒಟ್ಟು ೧೫೯೭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೭೬೮೪ ಅಧಿಕಾರಿ/ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ೨೬೪ ಅಧಿಕಾರಿಗಳನ್ನು ಮತ ಎಣಿಕೆ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧೪ ಸಖಿ ಪಿಂಕ್ ಮತಗಟ್ಟೆಗಳನ್ನು, ೬ ವಿಶೇಷಚೇತನಸ್ನೇಹಿ ಮತಗಟ್ಟೆ ಹಾಗೂ ೧ ಯುವ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದರು.
ಶ್ರೀನಿವಾಸಪುರ ಮತಕ್ಷೇತ್ರದಲ್ಲಿ ೨೮೯, ಮುಳಬಾಗಿಲು ಮತಕ್ಷೇತ್ರದಲ್ಲಿ ೨೭೮, ಕೆಜಿಎಫ್ ಮತಕ್ಷೇತ್ರದಲ್ಲಿ ೨೩೨, ಬಂಗಾರಪೇಟೆ ಮತಕ್ಷೇತ್ರದಲ್ಲಿ ೨೫೯, ಕೋಲಾರ ಮತಕ್ಷೇತ್ರದಲ್ಲಿ ೨೮೭ ಹಾಗೂ ಮಾಲೂರು ಮತಕ್ಷೇತ್ರದಲ್ಲಿ ೨೫೨ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ ೫೩ ದುರ್ಬಲವರ್ಗ ಪ್ರದೇಶಗಳ ಮತಗಟ್ಟೆಗಳು, ೩೯೨ ಸೂಕ್ಶö್ಮ ಮತಗಟ್ಟೆಗಳು, ೧೫೭ ರಾಜ್ಯ ಮತ್ತು ಜಿಲ್ಲಾ ಗಡಿ ಭಾಗಗಳಲ್ಲಿನ ಮತಗಟ್ಟೆಗಳನ್ನು ಗುರುತಿಸಲಾಗಿದೆ. ೭೯೭ ಮತಗಟ್ಟೆಗಳಿಂದ ಮತದಾನ ಪ್ರಕ್ರಿಯೆ ನೇರಪ್ರಸಾರವಾಗಲಿದೆ ಎಂದರು.
ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ತಲಾ ೧೪ ರಂತೆ ಒಟ್ಟು ೮೪ ಇವಿಎಂ ಮತೆಣಿಕೆ ಕೇಂದ್ರಗಳು ಹಾಗೂ ತಲಾ ೪ ರಂತೆ ಒಟ್ಟು ೨೪ ಪೋಸ್ಟಲ್ ಬ್ಯಾಲೆಟ್ ಎಣಿಕೆ ಕೇಂದ್ರಗಳನ್ನು ಸರ್ಕಾರಿ ಬಾಲಕರ  ಪ್ರಥಮದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಈವರೆಗೆ ರೂ೭,೧೦,೩೮,೪೨೦/-ಗಳ ಮೊತ್ತದ ನಗದು, ೮೫,೫೯೬.೭೭೫ಲೀಟರ್ ರೂ೨,೨೫,೮೫,೨೭೪/-ಗಳ ಮೊತ್ತದ ಅಕ್ರಮ ಮದ್ಯ, ೪೩.೩೦೭ ಕಿಲೋ ತೂಕದ ರೂ.೩೮,೦೧,೫೦೦/-ಗಳ ಮೊತ್ತದ ಅಕ್ರಮ ಮಾದಕ ವಸ್ತುಗಳು,೦.೧೩೩೭೫ ಕಿಲೋ ತೂಕದ ೬,೬೮,೭೫೦/-ಗಳಮೊತ್ತದ ಚಿನ್ನ, ೪.೯ ಕಿಲೋ ತೂಕದ ೩,೦೦,೦೦೦/-ಮೊತ್ತದ ಬೆಳ್ಳಿ ಹಾಗೂ ೫೨೭೪ ಸಂಖ್ಯೆಯ ರೂ.೨೪,೧೯,೨೮೮/-ಗಳ ಮೊತ್ತದ ಆಮಿಷದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ೧೩೫ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಸ್ ಎಸ್ ಟಿ ತಂಡದಿAದ ಈವರೆಗೆ ೧,೯೦,೫೨,೧೧೦/- ಮೊತ್ತದ ನಗದು ಹಾಗೂ ೧,೪೦,೦೦೦ ಮೊತ್ತದ ಆಮಿಷದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂದರು.
ಜಿಲ್ಲೆಯಲ್ಲಿ ಒಟ್ಟು ೧೨೭೦೭೧೮ ಅರ್ಹ ಮತದಾರರಿದ್ದು, ಅವರಲ್ಲಿ ೬೩೧೧೪೭ ಪುರುಷ, ೬೩೯೪೦೮ ಮಹಿಳೆ ಹಾಗೂ ೧೬೩ ಇತರೆ ಮತದಾರರು ಪ್ರಸ್ತುತ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ ಇವರಲ್ಲಿ ಶ್ರೀನಿವಾಸಪುರ ಮತಕ್ಷೇತ್ರದಲ್ಲಿ ೨೧೬೭೬೩, ಮುಳಬಾಗಿಲು ಮತಕ್ಷೇತ್ರದಲ್ಲಿ ೨೧೬೫೬೩, ಕೆಜಿಎಫ್ ಮತಕ್ಷೇತ್ರದಲ್ಲಿ ೧೯೯೨೭೦,ಬಂಗಾರಪೇಟೆ ಮತಕ್ಷೇತ್ರದಲ್ಲಿ ೨೦೫೦೭೦, ಕೋಲಾರ ಮತಕ್ಷೇತ್ರದಲ್ಲಿ ೨೪೦೩೭೮,ಹಾಗೂ ಮೂಲೂರು ಮತಕ್ಷೇತ್ರದಲ್ಲಿ ೧೯೨೬೭೪ ಮತದಾರರು ಚುನಾವಣೆಯಲ್ಲಿ ಮತದಾನ ಮಾಡಲು ಸಿದ್ಧರಾಗಿದಾರೆ. ಇವರಲ್ಲಿ ೩೬೮೧೧ ಯುವ ಮತದಾರರು,೧೩೯೭೯ ವಿಶೇಷಚೇತನ ಮತದಾರರು, ೨೯೩೬೭ ಜನ ೮೦ ವರ್ಷದ ಮೇಲ್ಪಟ್ಟ ಮತದಾರರು ಹಾಗೂ ೧೨೬೬ ಸೇವಾ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.

ಮೇ 10ರಂದು ನಮ್ಮ ಹಕ್ಕು ನಮ್ಮಮತ ಮತ ಚಲಾಯಿಸಿ ಪ್ರತಿಯೊಬ್ಬರು ಬೆಳಿಗ್ಗೆ 7ರಿಂದ ಸಂಜೆ 6 ರವರೆಗೆ ತಪ್ಪದೇ ಮತ ಚಲಾಯಿಸಿ ಇದು ಜನಪರವಾಣಿ ಕಳಕಳಿ

Leave a Reply

Your email address will not be published. Required fields are marked *