ಶ್ರೀನಿವಾಸಪುರ:- ದೇಶವನ್ನು ಕಟ್ಟಿರೀ ಎಂದರೆ ಜಾತಿಗಳ ಮಧ್ಯೆ ಗೋಡೆ ಕಟ್ಟುತ್ತಿದ್ದಾರೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು.
ತಾಲೂಕಿನ ಗೌನಿಪಲ್ಲಿಯಲ್ಲಿ ಬುಧವಾರ ನಡೆದ ಭಾರತ್ ಜೋಡ್ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ಬಡವರ ಅನ್ನಾಕ್ಕಾಗಲಿ, ಉದ್ಯೋಗಕ್ಕಾಗಲಿ, ರೈತ ಬಗ್ಗೆ ಆಗಲಿ ಹಾಗು ರೈತರ ಬೆಳೆ ಬಗ್ಗೆ ಆಗಲಿ ಎಂದು ಚಕಾರವೆತ್ತಿಲ್ಲ. ಇಂದು ದೇಶಕ್ಕೆ ಒಂದು ದರಿದ್ರ ಸರ್ಕಾರ ಆಡಳಿತ ನಡೆಸುತ್ತಿದ್ದೆ. ಇದರಲ್ಲಿ ಪ್ರದಾನ ಮಂತ್ರಿ ನರೇಂದ್ರಮೋದಿ, ಗೃಹಮಂತ್ರಿ ಇಬ್ಬರೂ ದೇಶಕ್ಕೆ ಹಿಡದ ಶನೇಶ್ಚರರು.
೭೫ ವರ್ಷಗಳು ಆಗಿದೆ ದೇಶಕ್ಕೆ ಸ್ವಾತಂತ್ರ ಬಂದು ಇಷ್ಟು ಅನ್ಯಾಯವಾದ ದಿನಗಳನ್ನೇ ನೋಡಿಯೇ ಇಲ್ಲ. ಇಂದು ಆರ್‌ಎಸ್‌ಎಸ್ ಬೇರೆ ಅಲ್ಲ, ಇಂದಿನ ಬಿಜೆಪಿ ಸರ್ಕಾರ ಬೇರೆ ಅಲ್ಲ. ಈ ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟವರನ್ನು ಕೊಲ್ಲಿಸಿದವರ ಕೈಗೆ ನಾವು ಸರ್ಕಾರವನ್ನು ಕೊಟ್ಟಿದ್ದೇವೆ . ಆದ್ದಿರಿಂದ ನಾವೆಲ್ಲರೂ ಸೇರಿ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವನ್ನು ಕಿತ್ತು ಒಗೆಯಬೇಕು ಎಂದರು.
ಇನ್ನು ಜೆಡಿಎಸ್ , ಬಿಜೆಪಿ ಪಕ್ಷಗಳ ಬಗ್ಗೆ ಮಾತನಾಡುವುದು ಟೈಮ್ ವೇಸ್ಟ್ ಎಂದರು.
ರಾಹುಲ್‌ಗಾಂದಿ ಯಾವುತ್ತೂ ಪ್ರದಾನ ಮಂತ್ರಿ ಆಗಬೇಕು ಎಂದು ಆಸೆ ಪಟ್ಟವರಲ್ಲ. ಇತ್ತೀಚಿನ ದಿನಗಳಲ್ಲಿ ಕೇಂದ್ರ, ರಾಜ್ಯದಲ್ಲಿ ಅನೇಕ ಮತೀಯ ಗಲಾಟೆಗಳು ನಡೆಯಿತು. ಜಾತಿ ಮತದಲ್ಲಿ ಬಿರುಕು ಬಿಟ್ಟಿದ್ದು ಅದನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಿದು ಎಂದರು. ರಾಹುಲ್‌ಗಾಂದಿಯವರು ಭಾರತ್ ಜೋಡೋ ಯಾತ್ರೆಯ ಮೂಲಕ ಜ್ಯೋತಿ ಬೆಳಗಿಸಿದ್ದು, ಆ ಜ್ಯೋತಿಯನ್ನ ಆರದೆ ಕಾಪಾಡಬೇಕಾಗಿದೆ.
ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿ ಯಾರು ಆದರೂ ಪರವಾಗಿಲ್ಲ ನಮಗೆ. ರಾಜ್ಯದ ಜನತೆ ಸಿದ್ದರಾಮಯ್ಯ ಆಗಬೇಕು ಎನ್ನುತ್ತಿದ್ದಾರೆ ಕಾರಣ ಸಿದ್ದರಾಮಯ್ಯರವರು ಮುಖ್ಯ ಮಂತ್ರಿಯಾಗಿದ್ದಾಗ ಬಡ ಜನತೆ ಅನ್ನವನ್ನು ನೀಡಿದ್ದಾರೆ. ಮಕ್ಕಳಿಗೆ ಹಾಲು ನೀಡಿದ್ದಾರೆ. ರೈತರ ಹಾಲಿಗೆ ೫ ರೂ ಪ್ರೋತ್ಸಾಹ ಧನ ನೀಡಿದ್ದಾರೆ. ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಿದ್ದಾರೆ, ವಸತಿ ಹೀನರಿಗೆ ವಸತಿಯನ್ನು ನೀಡಿದ್ದಾರೆ ಎನ್ನುವ ದೃಷ್ಟಿಯಿಂದ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಬೇಕು ಎಂದು ಕನಸುಕಾಣುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ನವರು ಸಹ ನಮ್ಮ ಪಕ್ಕದ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತಿದ್ದಾರೆ . ನನ್ನನ್ನು ತಲ್ಲಬೇಕು (ಚುನಾವಣೆಯಲ್ಲಿ ಸೋಲಿಸ ಬೇಕು) ಎಂದು ಕೆಲವರು ಆಲೋಚನೆ ಮಾಡುತ್ತಿದ್ದಾರೆ . ನನ್ನನ್ನು ಅವರು ತಲ್ಲಲು ಸಾಧ್ಯವಿಲ್ಲ. ನೀವು ಎಲ್ಲರೂ ಸೇರಿ ಡಬ್ಬದ ಮೂಲಕ ಮುಂದೆ ತಲ್ಲುತ್ತಿದ್ದೇರಿ ಎಂದರು.
ನಾನು ಯಾರಿಗೂ ಭಯಪಡಬೇಕಾಗಿಲ್ಲ. ಯಾರಿಗೂ ತಲೆಬಾಗಬೇಕಾಗಿಲ್ಲ. ನಾನು ತಲೆ ಬಾಗಬೇಕಿರುವುದು ಬಡವರಿಗೆ ಮಾತ್ರ. ಸೈನಿಕರು ಲೇಟ್ ಆಗಿ ಬರಹುದು ಆದರೆ ಇಂದಿನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಕ್ಷೇತ್ರಾದ್ಯಂತ ಅಭಿಮಾನದಿಂದ ಸಂತಸ ತಂದಿದೆ ಎಂದರು.
ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್‌ಅಹಮ್ಮದ್ ಮಾತನಾಡಿ ದೇವಗೌಡರ ರಾಜಕೀಯ ಬೇರೆ , ಕುಮಾರಸ್ವಾಮಿ ರಾಜಕೀಯ ಬೇರೆ ಕುಮಾರಸ್ವಾಮಿ ಯವರಿಂದ ೨೦೧೮ ರಲ್ಲಿ ಬಿಜೆಪಿ ಸರ್ಕಾರ ಬರಲು ಸಾಧ್ಯವಾಯಿತು.
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುತ್ತದೆ. ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗುತ್ತಾರೆ. ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಉತ್ತಮ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂದರು.
ಜೆಡಿಎಸ್ ಪಕ್ಷಕ್ಕೆ ಓಟು ಹಾಕಿದರೆ ಬಿಜೆಪಿ ಪಕ್ಷಕ್ಕೆ ಹಾಕಿದಂತೆ. ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಪಕ್ಷ ಬಿ ಟೀಂ ಆಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆ ರಮೇಶ್‌ಕುಮಾರ್‌ರವರನ್ನ ಗೆಲ್ಲಸಿ ಹ್ಯಾಟ್ರಿಕ್ ಮಾಡಬೇಕು ಎಂದು ಮನವಿ ಮಾಡಿದರು.
ಎಂಎಲ್‌ಸಿ ಅನಿಲ್‌ಕುಮಾರ್ ಮಾತನಾಡಿ ಭಾರತ್ ಜೋಡೋ ಯಾತ್ರೆಯು ಒಂದು ರೀತಿಯಲ್ಲಿ ಜಾತಿ ಧರ್ಮವನ್ನು ಒಗ್ಗೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ೪ಸಾವಿರ ಕಾಲ್ನಡಿಗೆ ಪಾದಯಾತ್ರೆ ನಡೆಸಿ ರಾಷ್ಟçದಲ್ಲಿ ಸಾಮಜಿಕ ನ್ಯಾಯ, ಸಮಾನತೆ, ಪ್ರೀತಿ , ವಿಶ್ವಾಸವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಹಮ್ಮಿಕೊಂಡಿದ್ದರು. ಅವರ ಯೋಜನೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ.
ರಮೇಶ್‌ಕುಮಾರ್ ರವರು ಮಾತನಾಡಿದರೇ ವಿಧಾನಸಭೆಯಲ್ಲಿನ ಎಲ್ಲಾ ಸದಸ್ಯರು ಖಾತುರವಾಗಿ ಕೇಳಲು ಇಚ್ಚಿಸುತ್ತಾರೆ. ಅಲ್ಲದೆ ರಾಜ್ಯದ ಮೂಲೆ ಮೂಲೆಯಲ್ಲಿ ರಮೇಶ್‌ಕಮಾರ್ ಬಗ್ಗೆ ಹೆಚ್ಚಿನಗೌರವಿದ್ದು, ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಸೇರಿ ಮೊತ್ತೊಮ್ಮೆ ಗೆಲ್ಲಿಸಬೇಕು ಎಂದರು.
ಎoಎಲ್‌ಸಿ ನಸೀರ್‌ಅಹಮ್ಮದ್ ಮಾತನಾಡಿ ಪ್ರಧಾನ ಮಂತ್ರಿಗಳು , ಗೃಹಮಂತ್ರಿಗಳು ರಾಜ್ಯಕ್ಕೆ ಎರಡು ಎರಡು ಭಾರಿ ಬರುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷ ಆಡಳಿತಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ಪಕ್ಷಕ್ಕೆ ಆಂದ್ರ, ತೆಲಾಂಗಣ, ತಮಿಳುನಾಡು, ಕೇರಳ ಈ ರಾಜ್ಯಗಳಲ್ಲಿ ಆಡಳಿತ ತರಲು ಸಾಧ್ಯವಿಲ್ಲ. ಈ ಒಂದು ದೃಷ್ಟಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ಪ್ರಯತ್ನಿಸುತ್ತಿದೆ ಎಂದರು.
ನಿಮ್ಮ ಕ್ಷೇತ್ರಕ್ಕೆ ಒಳ್ಳೇಯ ಶಾಸಕರಿದ್ದು, ರಾಜ್ಯದಲ್ಲಿ ರಮೇಶ್‌ಕುಮಾರ್ ರವರು ರಾಜ್ಯದಲ್ಲಿ ಸುತ್ತಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಇನ್ನು ಹತ್ತಾರು ಸೀಟ್ ಬರಲು ಸಾಧ್ಯ ಎಂದರು.
ಬಕ್ಸು ನೇತೃತ್ವದಲ್ಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಹಲವು ಕುಟುಂಬಗಳು ಸೇರ್ಪಡೆ ಗೊಂಡರು. ಗೌನಿಪಲ್ಲಿಯ ದರ್ಗಾಗೆ ಬೇಟಿ ಮಾಡಿ ಪ್ರಾರ್ಥನೆ ಸಿಲ್ಲಿಸಿದರು. ಹಾಗೂ ಕಾರ್ಯಕರ್ತರು ರಮೇಶ್‌ಕುಮಾರ್, ಹರ್ಷ ಬುಜದ ಮೇಲೆ ಹೊತ್ತು ಮೆರವಣಿಗೆ ನಡೆಸಿದರು.
ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಜಿ.ಪಂ.ಮಾಜಿ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ಮುಖಂಡರಾದ ಸಿ.ಎಂ.ಮುನಿಯಪ್ಪ, ಸಂಜಯ್‌ರೆಡ್ಡಿ, ಮುನಿಸ್ವಾಮಿ, ಪಿಚ್ಚಹಳ್ಳಿ ಶ್ರೀನಿವಾಸ್, ಗೊಳ್ಳಹಳ್ಳಿ ಶಿವಪ್ರಸಾದ್, ಮಾಜಿ ಶಾಸಕ ಬಾಲು, ಬೆಂಗಳೂರು ಕಾರ್ಪರೇಟ್ ಡಿ.ಸಿ.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್, ಎಸ್. ಎನ್.ವೇಮನ್ನ ಹಾಗು ಹಲವಾರು ಕಾರ್ಯಕರ್ತರು ಇದ್ದರು.