ಮಾಲೂರು, ಇತ್ತೀಚೆಗೆ ಕ್ರಷರ್ ಮತ್ತು ಕಲ್ಲು ಕೊರೆಗಳಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುತಿದ್ದು ಪರಿವಾನಿಗೆ ಇರುವ ಕ್ರಷರ್ ಮಾಲೀಕರಿಗೆ ಗಣಿ ಮತ್ತು ಭೂ ಇಲಾಖೆ ನೀಡಿರುವ ನಿಯಮಗಳನ್ನು ಪಾಲಿಸದಿದ್ದರೆ ಕ್ರಷರ್ ಗಳನ್ನು ತಕ್ಷಣ ನಿಲ್ಲಿಸಿ ಕಾನೂನು ರೀತಿ ಕ್ರಮ ಕೈ ಗೊಳ್ಳುವುದಾಗಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಲೂರು ಹೊಸೂರು ಮುಖ್ಯ ರಸ್ತೆಯಲ್ಲಿರುವ ಆರ್ ಜಿ ಕನ್ವೆಷನ್ ಹಾಲ್ ಸಭಾಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕಿನ ಕ್ರಷರ್ ಮಾಲೀಕರು, ಕಲ್ಲು ಕೋರಿ ಮಾಲೀಕರು, ಕಲ್ಲು ಚಪ್ಪಡಿ ಮತ್ತು ಕಲ್ಲು ಒಡೆಯುವ ಮಾಲಿಕರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ದೇಶದ ಸಂಪತ್ತಿನ ಸಂಪನ್ಮೂಲಗಳು ಬೆಟ್ಟ ಗುಡ್ಡ ಸರ್ಕಾರಿ ಜಮೀನುಗಳಾಗಿದ್ದು ತಾಲೂಕಿನಲ್ಲಿ ಅತಿ ಹೆಚ್ಚಾಗಿ ಜಲ್ಲಿ ಕ್ರಷರ್ ಕಲ್ಲು ಕೊರೆ ಗಳಿದ್ದು ಇತ್ತೀಚಿಗೆ ಸ್ಪೋಟಕ ಅವಘಡಗಳು ಹೆಚ್ಚಾಗುತ್ತಿದ್ದು ಅವುಗಳನ್ನು ತಡೆಯಲು ಮಾಲೀಕರು ಮತ್ತು ಕಾರ್ಮಿಕರಿಗೆ ಸುರಕ್ಷತಾ ಕ್ರಮಗಳನ್ನು ವಹಿಸುವ ಉದ್ದೇಶದಿಂದ ಈ ಸಭೆಯನ್ನ ಕರೆಯಲಾಗಿದೆ ವಿನಹ ಯಾವುದೇ ರಾಜಕೀಯ ವ್ಯಕ್ತಿಯ ಒತ್ತಡ ಮತ್ತು ಆದೇಶದಿಂದಲ್ಲ ಎಂದರು. ಇಡೀ ಜಿಲ್ಲೆಯಲ್ಲಿ ಮಾಲೂರು ತಾಲೂಕಿನಲ್ಲಿ ಹೆಚ್ಚು ಜಲ್ಲಿ ಕ್ರಷರ್ ಮತ್ತು ಕಲ್ಲು ಕೋರೆಗಳು ಇವೆ ಕೆಲವು ಸರ್ಕಾರದ ಪರವಾನಿಗೆ ಇಲ್ಲದೆ ನಡಿತಿವೆ ಇನ್ನು ಕೆಲವು ಸರ್ಕಾರದ ಪರವಾನಿಗೆ ಪಡೆದಿದ್ದರು ನಿಯಮವನ್ನ ಪಾಲಿಸದೆ ನಿಯಮದ ಎಲ್ಲೇ ಮೀರಿ ಕೆಲಸ ಮಾಡುತ್ತಿರುವುದರಿಂದ ಹಾಗೂ ಅಜಾಗರುಕತೆಯಿಂದ ಸ್ಪೋಟಕ ಮತ್ತು ಅಪಘಾತಗಳು ಸಂಭವಿಸುತ್ತವೆ ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಜಾಗೃತಿ ಸಭೆಗಳನ್ನು ಮಾಡಲಾಗುತ್ತಿದೆ, ತಾಲೂಕಿನ ಎಲ್ಲಾ ಜಲ್ಲಿ ಕ್ರಷರ್ ಮತ್ತು ಕಲ್ಲು ಕೋರೆ ಮಾಲೀಕರಿಗೆ ಸಭೆಯ ಕರೆ ನೀಡಿ ಈ ದಿನ ಸಭೆ ಮಾಡಲಾಗುತ್ತಿದೆ ಕೆಲವರು ಸಭೆಗೆ ಗೈರು ರಾಜರಾಗಿರುತ್ತಾರೆ ಆ ಕ್ರಷರ್ ಮಾಲೀಕರು ಕೂಡಲೇ ಜಿಲ್ಲಾ ಪೊಲೀಸ್ ಕಚೇರಿಗೆ ಬಂದು ಮಾಹಿತಿ ನೀಡಬೇಕು ಅದುವರಿಗೂ ಕೆಲಸ ನಿಲ್ಲಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಸೂಚನೆ ನೀಡಿದರು. ಇನ್ನೂ ಮುಂದೆ ಕ್ರಷರ್ ಮತ್ತು ಕೋರೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಲಾರಿ ಮಾಲೀಕರು ಚಾಲಕರ ಆಧಾರ ಕಾರ್ಡ್, ಐಡಿ ಕಾರ್ಡ್ ಫೋಟೋ ಸಮೇತ ಸ್ಥಳೀಯ ಪೋಲಿಸ್ ಠಾಣೆಗೆ ನೀಡಬೇಕು, ಪ್ರತಿ ವಾರಕ್ಕೊಂದು ಬಾರಿ ಕೃಷಿನಲ್ಲಿ ಬ್ಲಾಸ್ಟಿಂಗ್ ಮಾಡುವ ಬಗ್ಗೆ ಅಲ್ಲಿನ ವ್ಯವಸ್ಥೆ ಮತ್ತು ವ್ಯವಸ್ಥಾಪಕರ ಬಗ್ಗೆ ಎಲ್ಲಾ ವಿಚಾರಗಳನ್ನು ಲಿಖಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ ಅನುಮತಿ ಪಡೆಯಬೇಕು ಅದರಂತೆ ಕಾರ್ಯ ನಡೆಯಬೇಕು ಪರವಾನಗಿಯ ಮೂಲ ದಾಖಲೆಗಳನ್ನು ಕೂಡಲೇ ಜಿಲ್ಲಾ ಪೊಲೀಸ್ ಕಚೇರಿಗೆ ನೀಡಬೇಕು, ಟ್ರಿಪ್ಪರ್ ಮತ್ತು ಲಾರಿಗಳಲ್ಲಿ ಸವಾರಿ ಲೋಡ್ ಹಾಕಿಕೊಂಡು ಹೋಗುವುದು ಕಂಡುಬoದಲ್ಲಿ ಅಂತ ಲಾರಿ ಮತ್ತು ಟಿಪ್ಪರ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಪ್ರತಿ ತಿಂಗಳಿಗೊಮ್ಮೆ ಪೋಲಿಸ್ ಇಲಾಖೆ ಕಂದಾಯ ಇಲಾಖೆ ಆರ್ ಟಿ ಓ ಜೊತೆಗೂಡಿ ಸಭೆಯನ್ನು ಕರೆದು ಕುಂದು ಕೊರತೆಗಳ ಸಭೆಯಲ್ಲೆ ಬಗೆಹರಿಸಲಾಗುವುದು ಯಾವುದೇ ರೀತಿ ಅಕ್ರಮ ಅವೈಜ್ಞಾನಿಕ ಕ್ರಷರ್ ಗಳು ಕೋರೆಗಳು ನಡೆಯುತ್ತಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ನಾಳೆಯಿಂದಲೇ ಇಲಾಖಾಧಿಕಾರಿಗಳ ಜೊತೆ ನಮ್ಮ ಪೊಲೀಸ್ ಸಿಬ್ಬಂದಿ ಪ್ರತಿಯೊಂದು ಕ್ರಷರ್ ಗಳರ ಬಳಿ ಹೋಗಿ ಪರಿಶೀಲಿಸಿ ಫೋಟೋ ಜಿ ಪಿ ಆರ್ ಎಸ್ ಮೂಲಕ ಮಾಹಿತಿ ಸಂಗ್ರಹಣೆಗೆ ಬರುತ್ತಿದ್ದು ಎಲ್ಲಾ ಮಾಲೀಕರು ಲೀಸ್ ವೊಲ್ಡರ್ ಗಳು ಸಹಕಾರ ನೀಡಬೇಕು ಮಾಲೂರು ತಾಲ್ಲೂಕಿನ ರಸ್ತೆಗಳು ಜಲ್ಲಿ ಕ್ರಷರ್ ಗಳ ಟ್ರಿಪ್ಪರ್ ಲಾರಿಗಳಿಂದ ಹದಗೆಟ್ಟಿದ್ದು ಕೃಷರ್ ಮಾಲೀಕರು ಮತ್ತು ಶಾಸಕರು ಅದು ಹದಗೆಟ್ಟ ರಸ್ತೆಗಳಿಗೆ ಜಲ್ಲಿ ಹಾಕಿ ಸರಿಪಡಿಸಬೇಕೆಂದು ತಿಳಿಸಿದರು .ಕಾರ್ಮಿಕ ಇಲಾಖೆಯವರು ಕೂಡಲೇ ಜಲ್ಲಿ ಕ್ರಷರ್ ಮತ್ತು ಕೋರೆಗಳ ಬಳಿ ಭೇಟಿ ನೀಡಿ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಬಗ್ಗೆ ಮತ್ತು ವಯಸ್ಸಿನ ಆಧಾರದ ಮೇಲೆ ಕೆಲಸ ಮಾಡುವರ ಬಗ್ಗೆ ಬಾಲಕಾರ್ಮಿಕರ ಬಗ್ಗೆ ಮಾಹಿತಿಯನ್ನ ಪಡೆಯಬೇಕು ಎಂದು ತಿಳಿಸಿದರು ಟೇಕಲ್ ಹೋಬಳಿ ಉಳ್ಳೇರಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕಲ್ಲು ಹೊಡೆಯುವುದು ಚಪ್ಪಡಿ ಕೂಚಗಳನ್ನು ತೆಗೆಯುವುದು ಮಾಡುತ್ತಿದ್ದು ಕೆಲವರು ಕುಲಿ ಕೆಲಸವೆಂದು ಕಮರ್ಷಿಯಲ್ ದಂದೆಗೆ ಹೋಗಿದ್ದಾರೆ ಮತ್ತೆ ಕೆಲವರು ರಾಯಲ್ಟಿ ರೂಪದಲ್ಲಿ ಹಣ ಸಂಗ್ರಹಣೆ ಮಾಡಿ ಅಲ್ಲಿನ ಕಾರ್ಮಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಅವರು ಯಾರು ಎಂಬುದು ನಮಗೆ ಮಾಹಿತಿ ಬಂದಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಮಾಲೀಕರು ಗಣಿ ಮತ್ತು ಭೂ ಇಲಾಖೆ ವತಿಯಿಂದ ಪರವಾನಿಗೆ ಪಡೆದು ಕಾನೂನು ರೀತಿ ಕೆಲಸವನ್ನು ಮಾಡಬೇಕು ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅವರನ್ನು ಸಭೆ ಕರೆದು ಕಾನೂನು ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಜೈ ಶಂಕರ್ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಾದರ್, ಮಾಸ್ತಿಸಬ್ ಇನ್ಸ್ ಪೆಕ್ಟರ್ ರಾಜೇಂದ್ರ, ಎಸಿ ಕಚೇರಿ ಅಧಿಕಾರಿ ಸುಜಾತ, ಭೂ ಮತ್ತು ಗಣಿ ಇಲಾಖೆಯ ಅಧಿಕಾರಿ ಚೊಕ್ಕ ರೆಡ್ಡಿ, ಆರ್ ಟಿ ಓ ಇಲಾಖೆಯ ಆನಂದ್,ಕೃಷರ್ ಮಾಲೀಕರ ಸಂಘದ ಅಧ್ಯಕ್ಷ ಕ್ಷೇತ್ರನಹಳ್ಳಿ ವೆಂಕಟೇಶ್, ಶ್ಯಾಮಶೆಟ್ಟಿ ಹಳ್ಳಿ ನಾಗರಾಜ್ ,ಹಾಗೂ ತಾಲೂಕಿನ ಕ್ರಷರ್ ಮಾಲೀಕರು ವ್ಯವಸ್ಥಾಪಕರು ಉಪಸ್ಥಿತರಿದ್ದರು.