ಕೋಲಾರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ ಬೊಮ್ಮಾಯಿ ಹಾಗೂ ಯಡಿಯೂರಪ್ಪ

ಬೆಂಗಳೂರಿನ ಮಲ್ಲೇಶ್ವರಂ ನ ಬಿಜೆಪಿ ಪಾರ್ಟಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಶ್ರೀನಿವಾಸಪುರ ತಾಲೂಕಿನ ಗುಂಜೂರು ಶ್ರೀನಿವಾಸ್ ರೆಡ್ಡಿ ರವರಿಗೆ ಬಿಜೆಪಿ ಪಕ್ಷದ ಬಿ ಫಾರಂ ಅನ್ನು ಪಕ್ಷದ ಕಚೇರಿಯಲ್ಲಿ ಕೋಲಾರ್ ಜಿಲ್ಲಾಧ್ಯಕ್ಷರಾದ ಡಾ. ವೇಣುಗೋಪಾಲ್ , ಲೋಕಸಭಾ ಸದಸ್ಯರು ಎಸ್. ಮುನಿಸ್ವಾಮಿ, ಬಿಜೆಪಿ ಮುಖಂಡರು ರೋಣೂರು ಚಂದ್ರಶೇಖರ್, ಅವರ ಜೊತೆ ಸ್ವೀಕರಿಸಲಾಯಿತು.
ಕೋಲಾರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ನಂತರ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರನ್ನು ಬೇಟಿ ಮಾಡಿದ ಸಂದರ್ಭ. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಡಾ. ವೇಣುಗೋ ಪಾಲ್, ಲೋಕಸಭಾ ಸದಸ್ಯರು ಮುನಿಸ್ವಾಮಿ, ವರ್ತೂರು ಪ್ರಕಾಶ್, ಮಂಜುನಾಥ್ ಗೌಡ, ಸಂಪoಗಿ, ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಬಿಜೆಪಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಗುಂಜೂರು ಶ್ರೀನಿವಾಸ್ ರೆಡ್ಡಿ ರವರು ಶ್ರೀನಿವಾಸಪುರದ ಪಟ್ಟಣದ ಪವನ್ ಆಸ್ಪತ್ರೆಗೆ ತೆರಳಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ. ವೇಣುಗೋಪಾಲ್ ರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ರೋಣೂರು ಚಂದ್ರಶೇಖರ್ ರವರು, ನಾಗಭೂಷಣ್ ರವರು, ರಾಜು ರವರು, ನಾಗರಾಜ್ ರೆಡ್ಡಿ ರವರು, ಕುಮಾರ್ ರವರು, ಸಂತೋಷ್ ರವರು, ನಿಶಾಂತ್ ರೆಡ್ಡಿ ರವರು, ಶಶಿ ರವರು, ರಾಜಶೇಖರ್ ರೆಡ್ಡಿ ರವರು, ಪೆದ್ದ ರೆಡ್ಡಿ ರವರು, ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *