ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕಾರ್ಮಿಕ ಇಲಾಖೆಯ ಆಯುಕ್ತರಾಗಿದ್ದ ಅಕ್ರಂಪಾಷ ಐಎಎಸ್

ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕಾರ್ಮಿಕ ಇಲಾಖೆಯ ಆಯುಕ್ತರಾಗಿದ್ದ ಅಕ್ರಂಪಾಷ ಐಎಎಸ್ ಅವರನ್ನು ನೇಮಕ ಮಾಡಲಾಗಿದೆ ಎಂದು ಆದೇಶಿಸಲಾಗಿದೆ ಕೊಡಗು ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲೆಯ ಹಾಲಿ ಜಿಲ್ಲಾಧಿಕಾರಿಯಾಗಿದ್ದ ವೆಂಕಟರಾಜು ರವರನ್ನು ವರ್ಗಾಯಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.
ಅಕ್ಕಂಪಾಷ ಐಎಎಸ್ ರವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ನಿವಾಸಿಯಾಗಿದ್ದು ಇವರು ಎಂ ಎ,ಎಂಪಿಲ್ ಹಾಗೂ ಪೊಲಿಟಿಕಲ್ ಸೈನ್ಸ್ ಓದಿಕೊಂಡು ಮೊದಲ ಬಾರಿಗೆ ಗೋರ್ಮೆಂಟ್ ಫಸ್ಟ್ ಗ್ರೇಡ್ ಕಾಲೇಜಿನ ಉಪನ್ಯಾಸಕರಾಗಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ,ಗೌರಿಬಿದನೂರು, 1998 ರಿಂದ 2005 ರವರೆಗೆ ಕರ್ತವ್ಯವನ್ನು ನಿರ್ವಹಿಸಿದ್ದರು.
ಅನಂತರ ಪ್ರೊಫೆಷನರಿ ಕೆಎಎಸ್ ಅಧಿಕಾರಿಯಾಗಿ ಮೈಸೂರು ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ 2005 ರಿಂದ 2007 ರವರೆಗೆ ಕರ್ತವ್ಯ ನಿರ್ವಹಿಸಿದ್ದರು.
ಅಸಿಸ್ಟೆಂಟ್ ಕಮಿಷನರ್ ಆಗಿ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಡೆಪ್ಯೂಟಿ ಕಮಿಷನರ್ ಆಗಿ ಕೊಡಗು ಜಿಲ್ಲಾ ಕಚೇರಿಯಲ್ಲಿ ಕರ್ತವ್ಯ 2007 ರಿಂದ 2009ರವರೆಗೆ ಕರ್ತವ್ಯ ನಿರ್ವಹಿಸಿದ್ದರು.
ಪ್ರಾಜೆಕ್ಟ್ ಡೈರೆಕ್ಟ್ ಡಿಸ್ಟಿಕ್ ಅರ್ಬನ್ ಡೆವಲಪ್ಮೆಂಟ್ ಅಧಿಕಾರಿಯಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕಛೇರಿಯಲ್ಲಿ 2009 ರಿಂದ 2010ರವರೆಗೆ ಕರ್ತವ್ಯ ನಿರ್ವಹಿಸಿದ್ದರು.
ಪಿ ಎಸ್ ಮಿನಿಸ್ಟರ್ ಪರ್ ಹಜ್ ವಕ್ ಮಂಡಳಿ ಮೈನಾರಿಟಿ ವೆಲ್ಫೇರ್ ಕಚೇರಿ ಎಲ್ಲಿ 2010 ರಿಂದ 2011ರವರೆಗೆ ಜಾಯಿಂಟ್ ಡೈರೆಕ್ಟರ್ ಕರ್ನಾಟಕ ಸರ್ಕಾರ 2011 ರಿಂದ 2013 ರವರೆಗೆ ಕರ್ತವ್ಯವನ್ನು ನಿರ್ವಹಿಸಿದ್ದರು.
ಡೈರೆಕ್ಟರ್ ಆಫ್ ಮೈನಾರಿಟಿ ವಿವಿ ಟವರ್ ಬೆಂಗಳೂರು ಕಚೇರಿಯಲ್ಲಿ 2014 ರಿಂದ 2018 ರವರೆಗೆ ಕರ್ತವ್ಯ ನಿರ್ವಹಿಸಿದ ನಂತರ ಆರ್ ಡಿ ಪಿ ಆರ್ ಕಮಿಷನರ್ ಆಯುಕ್ತರಾಗಿ, ಆನಂತರ ಎಂಎಸ್ ಬಿಲ್ಡಿಂಗ್ ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು ಈಗ ಹಾಲಿ ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.

Leave a Reply

Your email address will not be published. Required fields are marked *