ಕೋಲಾರದಲ್ಲಿ ನಟ ಚಿರಂಜೀವಿ ಹುಟ್ಟುಹಬ್ಬ ಆಚರಣೆಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು

ಕೋಲಾರ:- ನಗರದ ಗಾಂಧಿವನದಲ್ಲಿ ಮೆಘಾಸ್ಟಾರ್ ಚಿರಂಜೀವಿ ಅವರ ಭಾವಚಿತ್ರದ ಮುಂದೆ ಅವರ ಅಭಿಮಾನಿಗಳ ಬಳಗದಿಂದ ಮಂಗಳವಾರ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಬಳಗದ ಸದಸ್ಯರು ಮಾತನಾಡಿ, ಚಿತ್ರಪ್ರೇಮಿಗಳ ಹೃದಯ ಗೆದ್ದಿರುವ ಚಿರಂಜೀವಿ ನರ‍್ಕಾಲ ಬಾಳಲಿ, ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸಿದ್ದು, ಈ ಬಾರಿ ನಟ ಬಾಲಕೃಷ್ಣ ಅಭಿಮಾನಿಗಳು ಸಹಾ ಒಟ್ಟಾಗಿ ಸೇರಿ ಚಿರಂಜೀವಿ ಹುಟ್ಟು ಹಬ್ಬ ಆಚರಿಸುವ ಮೂಲಕ ಸೌಹಾರ್ದತೆ ಮೆರೆದರು.
ತಮ್ಮ ನೂರಾರು ಚಲನಚಿತ್ರಗಳಲ್ಲಿನ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ಚಿರಂಜೀವಿ ಅವರ ಮತ್ತಷ್ಟು ಚಿತ್ರಗಳು ತೆರೆಗೆಬರಲಿ ಎಂದು ಆಶಿಸಿದ ಅಭಿಮಾನಿಗಳು, ಅವರಿಗೆ ಜೈಕಾರ ಕೂಗಿದರು.
ಚಿರಂಜೀವಿ ಮತ್ತುಅವರ ಅಭಿಮಾನಿಗಳ ಸಾಮಾಜಿಕ ಸೇವೆ ಶ್ಲಾಘನೀಯವಾಗಿದ್ದು, ರಕ್ತದಾನ, ಅಂಗಾoಗ ದಾನದ ಮೂಲಕ ದೇಶದಲ್ಲೇ ಹೆಸರು ಪಡೆದಿದ್ದಾರೆ, ಚಿರಂಜೀವಿ ಕೇವಲ ನಟ ಮಾತ್ರವಲ್ಲ, ಅವರ ಸಾಮಾಜಿಕ ಕಾಳಜಿ, ಬಡವರ ಬಗೆಗಿನ ಪ್ರೀತಿ ಮೆಚ್ಚುವಂತದ್ದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಜಿಲ್ಲಾ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಅಭಿಮಾನಿಗಳಾದ ಶ್ರೀನಿವಾಸಮೂರ್ತಿ, ನಾಗೇಶ್, ಕೋ.ನಾ.ಮಂಜುನಾಥ್, ಚಂದ್ರು, ಸಪ್ರೋಜ್, ಅಭಿಮಾನಿಗಳಾದ ಮುನಿವೆಂಕಟಯಾದವ್, ಚಲಪತಿ, ಮಣಿ, ಕ್ಯಾಪ್ಟನ್ ಮಂಜುನಾಥ್, ಡೆಕೋರೇಷನ್ ಕೃಷ್ಣ, ಏಜಾಜ್, ಪ್ಯಾರೇಜಾನ್‌ಸೇರಿದಂತೆ ಹಲವಾರು ಮಂದಿ ಹಾಜರಿದ್ದು ಸಿಹಿ ಹಂಚಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *