ಶ್ರೀನಿವಾಸಪುರ :- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ನವರಿಗೆ ತಾಲ್ಲೂಕಿನ ಸಮಾನ ಮನಸ್ಕರ ಸಾಂಸ್ಕೃತಿ ವೇದಿಕೆವತಿಯಿಂದ ಅದ್ದೂರಿ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ತಾಲೂಕು ಕಛೇರಿ ಮುಂಭಾಗ ತಾಲೂಕಿನ ಸಮಾನ ಮನಸ್ಕರ ಸಾಂಸ್ಕೃತಿಕ ವೇದಿಕೆ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರನ್ನು ಮುಳಬಾಗಿಲು ವೃತ್ತದಿಂದ ಪಟ್ಟಣದ ಎಂ.ಜಿ. ರಸ್ತೆಯ ಮೂಲಕ ತಮಟೆ ವಾದ್ಯಗಳೊಂದಿಗೆ ಬೆಳ್ಳಿ ರಥದಲ್ಲಿ ಮೆರವವಣಿಗೆಯ ಮುಖಾಂತರ ವೇದಿಕೆಗೆ ಕರೆತಂದು ಅದ್ದೂರಿಯಾಗಿ ಸನ್ಮಾನಿಸಿ ಅಭಿನಂದಿಸಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ ಮನುಷ್ಯನಲ್ಲಿ ಪ್ರತಿಭೆಗೆ ಜಾತಿ ಅಡ್ಡಿ ಬರುವುದಿಲ್ಲ, ಧರ್ಮ ಅಡ್ಡಿ ಬರುವುದಿಲ್ಲ, ಪ್ರತಿ ಮನುಷ್ಯನಲ್ಲಿಯೂ ಅಘಾದವಾದ ಶಕ್ತಿ ಇದೆ ಅದನ್ನು ನಿರಂತರ ಅಭ್ಯಾಸದೊಂದಿಗೆ ಸದುಉಪಯೋಗಪಡಿಸಿಕೊಂಡು ಕೇಂದ್ರದ ಪದ್ಮಶ್ರೀ ಪುರಸ್ಕೃತ ಪ್ರಶಸ್ತಿ ಬಂದಿರುವುದು ತುಂಬ ಸಂತಸವಾಗಿದೆ. ಇವರೊಬ್ಬ ಬಡ ಕುಟುಂಬದಲ್ಲಿ ಜನಿಸಿ ಒಬ್ಬ ತಳ ಸಮುದಾಯದ ವ್ಯಕ್ತಿಗೆ ಸಿಕ್ಕಿರುವುದು ಸಾಮಾನ್ಯ ವಿಚಾರವಲ್ಲ ಇಂತಹ ಪ್ರತಿಭೆಗಳನ್ನು ಹುಟ್ಟುಹಾಕಿ ಬೆಳೆಸಿ ಉಳಿಸಬೇಕಾಗಿದೆ ಎಂದರು.
ಕಲೆ ಅನ್ನುವುದು ಯಾರ ಸತ್ತು ಅಲ್ಲ, ವಿದ್ಯೆ ಎಂಬುದು ಯಾವ ಕುಲಕ್ಕೂ ಸಮೀತವಾಗಿಲ್ಲ. ಒಂದು ಸಂದರ್ಭದಲ್ಲಿ ಕಲೆಗೆ ಯಾವರೀತಿಯಲ್ಲಿ ಗೌರವ ಕೊಡಬೇಕಾಗುತ್ತದೋ ಆ ರೀತಿಯಾದ ಗೌರವ ಕೊಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ತಮಟೆ ವಾದ್ಯವನ್ನು ಶುಭ, ಅಶುಭ ಕಾರ್ಯಗಳಿಗೆ ಬಳಸಲಾಗುವುದು ಅಷ್ಟೆ, ಎಂದು ಒಂದು ಕಾಲದಲ್ಲಿ ತಮಟೆ ವಾದ್ಯವೆಂದರೆ ಉದಾಸೀನವಿತ್ತು, ಆದರೆ ಇಂದು ಮುನಿವೆಂಕಟಪ್ಪನವರು ತಮ್ಮ ಪ್ರತಿಭೆಯ ಮೂಲಕ ತಮಟೆ ವಾದ್ಯಕ್ಕೆ ಒಂದು ರೀತಿಯಾದ ಗೌರವನ್ನು ತಂದುಕೊಟ್ಟಿದ್ದಾರೆ. ಈ ಹಿಂದೆ ಭರತನಾಟ್ಯ, ವೀಣಾವಾದ್ಯಕ್ಕೆ ಹಾಗು ಇತರೆ ಕಲೆಗಳಿಗೆ ಸೀಮತವಾಗಿದ್ದ ಈ ಪ್ರಶಸ್ತಿಯು ಇಂದು ತಮಟೆ ವಾದ್ಯಕ್ಕೂ ಪದ್ಮಶ್ರೀ ಪ್ರಶಸ್ತಿ ಬಂದಿರುವುದು, ದೇಶಕ್ಕೆ ಹಾಗೂ ದೇಶದ ಸಂವಿದಾನಕ್ಕೆ ಸಿಕ್ಕ ಜಯವಾಗಿದೆ. .
ಕೇಂದ್ರ ಸರ್ಕಾರ ರಾಷ್ಟ್ರಪತಿ ಭವನದಲ್ಲಿ ತಮಟೆ ವಾದ್ಯ ಮುನಿವೆಂಕಟಪ್ಪ ರವರನ್ನ ಸನ್ಮಾನಿಸಿ ಗೌರವಿಸಬೇಕು ಇಡಿ ದೇಶಕ್ಕೆ ತಮಟೆ ವಾದ್ಯದ ಮಹತ್ವದ ಸಾದನೆ ಈ ದೇಶಕ್ಕೆ ಗೊತ್ತಾಗುತ್ತದೆ. ನಾವೆಲ್ಲರೂ ಸೇರಿ ಮುನಿವೆಂಕಟಪ್ಪನವರಿಗೆ ಬೇಕಾದ ಮೂಲ ಭೂತ ಸೌಲಭ್ಯಗಳನ್ನು ಕೊಡಿಸುವತ್ತ ಕೈಜೋಡಿಸಬೇಕು. ಮುನಿವೆಂಕಟಪ್ಪ ನಮೆಗಲ್ಲರಿಗೂ ಆಸ್ತಿ. ಇವರನ್ನ ನಾವೆಲ್ಲರೂ ಕಾಪಾಡಿಕೊಳ್ಳಬೇಕು ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದ ಇವರು ಭಗವಂತ ಇವರಿಗೆ, ಇವರ ಕುಟುಂಬಕ್ಕೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಲಿ ಇಂತಹ ಪ್ರತಿಭೆಗಳು ಇನ್ನೂ ಹೆಚ್ಚಿನದಾಗಿ ಹುಟ್ಟಿ ಬರಲಿ ಈ ದಿನ ಹಮ್ಮಿಕೊಂಡಿರುವ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆಯಿತು ಇದಕ್ಕೆ ಶ್ರಮಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು ನಾನು ಈ ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಇವರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕಾರ್ಯಕ್ರಮ ಎಲ್ಲಾ ಸಮುದಾಯದ ಜನರು ಬಂದು ಮುನಿವೆಂಕಟಪ್ಪನವರಿಗೆ ಸನ್ಮಾನ ಮಾಡಿರುವುದು ಸಂತಸವಾಗಿದೆ ಎಂದರು.
ಇದೇ ಕಾರ್ಯಮದಲ್ಲಿ ಪದ್ಮಶ್ರೀ ಪುರಸ್ಕೃತ ತಮಟೆ ಕಲಾವಿದ ಮುನಿವೆಂಕಟಪ್ಪನವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ೧ ಲಕ್ಷ ರೂಗಳ ಚೆಕ್ನ್ನು ನೀಡಿದರು ಹಾಗೆಯೇ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ನಾರಾಯಣ, ೫ ಸಾವಿರ ರೂಗಳನ್ನು ನೀಡಿ ಗೌರವಿಸಿದರು.
ಈ ವೇದಿಕೆಯಲ್ಲಿ ತಾಲೂಕಿನ ಎಲ್ಲಾ ಸಮುದಾಯದ ಮುಖಂಡರು ಪದ್ಮಶ್ರೀ ಪುರಸ್ಕೃತ ಮುನಿವೆಂಕಟಪ್ಪರವರಿಗೆ ಸನ್ಮಾನಿಸಿ, ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾರಾಯಣ, ಪುರಸಭೆ ಅಧ್ಯಕ್ಷಣಿ ಲಲಿತ ಶ್ರೀನಿವಾಸ್, ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ರಾಯಲ್ಪಾಡು ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಸಂಜಯ್ರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಆರ್.ಜಿ.ನರಸಿಂಹಯ್ಯ, ಕೆ.ಕೆ.ಮಂಜುನಾಥ್, ಕೊರಗೇಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಪುರಸಭಾ ಸದಸ್ಯರಾದ ಉನಿಕಿಲಿ ಎನ್.ಎನ್.ಆರ್ ನಾಗರಾಜ್ ಮುನಿರಾಜ್, ಅಡವಿಬೈರಗಾನಪಲ್ಲಿ ಜೆಸಿಪಿ ಶಂಕರ್, ಪೆದ್ದೂರು ನಾಗರಾಜ್, ದಲಿತ ಸಂಘಟನೆಯ ಹಿರಿಯ ಮುಖಂಡರಾದ ಕೊಪ್ಪವಾರಿಪಲ್ಲಿ ಮುನಿಸ್ವಾಮಿ ಸಿ.ಎಂ.ಮುನಿಯಪ್ಪ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಪಿಚ್ಚಹಳ್ಳಿ ಶ್ರೀನಿವಾಸ್, ಚಿಂತಾಮಣಿ ಎನ್.ವೆಂಕಟೇಶ್, ಚಲ್ದಿಗಾನಹಳ್ಳಿ ಗ್ರಾಮದ ಮುನಿವೆಂಕಟಪ್ಪ, ವೆಂಕಟೇಶ್, ದೊಡ್ಡಬಂರ್ಲಾಪಲ್ಲಿ ಮುನಿಯಪ್ಪ, ಉಪ್ಪರಪಲ್ಲಿ ತಿಮಯ್ಯ, ರಾಮಾಂಜಮ್ಮ, ಮುದಿಮಡಗು ವಾಸು, ಆಂಬೇಡ್ಕರ್ ಪಾಳ್ಯದ ನರಸಿಂಹಮೂರ್ತಿ, ದಳಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷಣಿ ಸರಸ್ವತಮ್ಮ, ಕೊಡಿಚೆರವು ಉಮಾದೇವಿ, ದೊಡಮಲದೊಡ್ಡಿ ಶ್ರೀನಿವಾಸ್, ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ಕುಟುಂಬದವರು, ಇನ್ನೂ ಅನೇಕ ದಲಿತ ಸಂಘಟನೆಯ ಮುಖಂಡರು ಹಾಗು ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.