ಕೆಜಿಎಫ್ ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾ.ಪಂ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ ಕ್ಷೇತ್ರದ ಅಭಿವೃದ್ದಿಗೆ ಸಂಕಲ್ಪದಿoದ ಕೆಲಸ ಮಾಡುತ್ತಿರುವ ನನ್ನ ಪ್ರಯತ್ನಕ್ಕೆ ಕೈಜೋಡಿಸಿ – ಶಾಸಕಿ ರೂಪಕಲಾ ಕರೆ

ಕೋಲಾರ:- ಕೆಜಿಎಫ್ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕಂಕಣತೊಟ್ಟು ದುಡಿಯುತ್ತಿದ್ದೇನೆ, ಮತ ನೀಡಿದ ಜನರ ಋಣ ತೀರಿಸುವ ಸಂಕಲ್ಪದೊoದಿಗೆ ಕೆಲಸ ಮಾಡುತ್ತಿರುವ ನನ್ನ ಪ್ರಯತ್ನಕ್ಕೆ ಶಕ್ತಿ ತುಂಬಿ, ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯಾಗಿಸೋಣ ಎಂದು ಶಾಸಕಿ ರೂಪಕಲಾ ಎಂ.ಶಶಿಧರ್ ಮನವಿ ಮಾಡಿದರು.
ಬುಧವಾರ ಕೆಜಿಎಫ್ ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಹಿನ್ನಲೆಯಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡುತ್ತಿದ್ದರು.
ರಸ್ತೆಗಳ ಅಭಿವೃದ್ದಿ, ಮಿನಿ ವಿಧಾನಸೌಧ, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಕೆಜಿಎಫ್ ತಾಲ್ಲೂಕಿನ ಸಮಗ್ರ ಅಭಿವೃದ್ದಿಯೇ ನನ್ನ ಕನಸಾಗಿದೆ, ಸದನದ ಒಳಗೆ ಹಾಗೂ ಹೊರಗೆ ಮತದಾರರ ಋಣ ತೀರಿಸಲು ಶಕ್ತಿ ಮೀರಿ ಶ್ರಮಿಸಿದ್ದೇನೆ, ಹೋರಾಡಿದ್ದೇನೆ ಎಂದ ಅವರು, ನನ್ನ ಈ ಹಲವಾರು ಪ್ರಯತ್ನಗಳ ಯಶಸ್ಸಿಗೆ ನನಗೆ ಮತ ನೀಡಿದ ಜನರ ಆಶೀರ್ವಾದವೇ ಕಾರಣ ಎಂದರು.
ನಾನು ಯಾರನ್ನೂ ಬಲವಂತವಾಗಿ, ಒತ್ತಡ ಹಾಕಿ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ, ನಾನು ಮಾಡಿರುವ ಅಭಿವೃದ್ದಿ ಕಾರ್ಯಗಳಿಗೆ ಮನ್ನಣೆ ನೀಡಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಖಂಡರು ಬರುತ್ತಿದ್ದಾರೆ ಎಂದ ಅವರು, ಚುನಾವಣೆ ಹತ್ತಿರವಾಗುತ್ತಿದೆ ಎಂದು ನಾನು ಯಾವುದೇ ಕೆಲಸ ಮಾಡಿಲ್ಲ, ಇಡೀ ಐದುವರ್ಷವೂ ಕ್ಷೇತ್ರದ ಅಭಿವೃದ್ದಿಗಾಗಿ, ಇಲ್ಲಿನ ಬಡ ಮಹಿಳೆಯರು, ಯುವಕರ ಬದುಕು ಹಸನಾಗಲು ಕೆಲಸ ಮಾಡಿದ್ದೇನೆ ಎಂಬ ಆತ್ಮತೃಪ್ತಿ ಇದೆ ಎಂದು ತಿಳಿಸಿದರು.
ಕೆಜಿಎಫ್ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಒಟ್ಟಾಗಿ ನನ್ನೊಂದಿಗೆ ಬನ್ನಿ, ಎಲ್ಲರೂ ಸೇರಿ ಕ್ಷೇತ್ರವನ್ನು ಮುನ್ನಡೆಸೋಣ, ನನಗೆ ಶಾಸಕಿ ಎಂಬ ಅಹಂ ಇಲ್ಲ, ನಾನು ನಿಮ್ಮ ಸೇವಕಿ ಎಂದೇ ತಿಳಿದು ಕೆಲಸ ಮಾಡಿಕೊಂಡು ಬಂದಿದ್ದೇನೆ, ಇಲ್ಲಿನ ಬಡ ಜನರ ಸೇವೆಯನ್ನು ಮತ್ತಷ್ಟು ಮಾಡೋಣ ಕೈಜೋಡಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ ಅದರ ಶಕ್ತಿ ಅಗಾಧ, ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಬಲಿಷ್ಟವಾಗಲಿದೆ ಅದಕ್ಕೆ ನಿದರ್ಶನ ಇವತ್ತಿನ ಕಾರ್ಯಕ್ರಮವೇ ಸಾಕ್ಷಿ ಎಂದು ತಿಳಿಸಿದರು.
ಗ್ರಾ.ಪಂ ಮಾಜಿ ಅಧ್ಯಕ್ಷರೂ ಸೇರ್ಪಡೆ
ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೌಡಪ್ಪ, ಹಾಲಿ ಸದಸ್ಯರಾದ ಮುನಿವೆಂಕಟಪ್ಪ ಗ್ರಾಮ ಪಂಚಾಯತಿ ಸದಸ್ಯರು ತಿಮ್ಮಸಂದ್ರ, ವೆಂಕಟರಾಮ್ ಗ್ರಾಮ ಪಂಚಾಯತಿ ಸದಸ್ಯರು ಟಿ.ಗೊಲ್ಲಹಳ್ಳಿ ಹಾಗೂ ಮುಖಂಡರಾದ ನಾಗಪ್ಪ, ಕೃಷ್ಣಪ್ಪ ಮತ್ತು ಮದ್ದಿನಾಯಕನಹಳ್ಳಿಯ ಗವರ್ನಮೆಂಟ್ ನಾರಾಯಣಸ್ವಾಮಿ ಮತ್ತಿತರರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಚೌಡಪ್ಪ ಮತ್ತಿತರರ ಮುಖಂಡರು, ಶಾಸಕರಾದ ರೂಪಕಲಾ ಎಂ ಶಶಿಧರ್ ರವರು ತಮ್ಮ ಅಧಿಕಾರಾವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಅದನ್ನು ಮನಗಂಡಿರುವ ನಾವೂ, ನಮ್ಮ ಗ್ರಾಮ, ನಮ್ಮ ಇಡೀ ಪಂಚಾಯತಿ ಹಾಗೂ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಶಾಸಕರ ಕೈ ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವುದಾಗಿ ತಿಳಿಸಿ, ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಷಯದಲ್ಲಿ ಯಾವುದೇ ಒತ್ತಡ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಗ್ರಾಮಗಳ ಸಮಗ್ರ ಅಭಿವೃದ್ದಿಯೇ ನಮ್ಮ ಧ್ಯೇಯವೆಂದು ಪರಿಗಣಿಸಿ ಬಂದಿದ್ದೇವೆ ಎಂದು ತಿಳಿಸಿ, ಶಾಸಕರಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಘೋಷಿಸಿದರು.
ಈ ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷಿö್ಮನಾರಾಯಣ, ಗ್ರಾ.ಪಂ ಅಧ್ಯಕ್ಷೆ ಪವಿತ್ರಗೋಪಾಲ್, ಉಪಾಧ್ಯಕ್ಷ ಶ್ರೀರಾಮಪ್ಪ, ಸದಸ್ಯ ಮಂಜುನಾಥ್, ಪಾಪಣ್ಣ, ಮಾಜಿ ಮುಖಂಡರಾದ ಬ್ಯಾಟೇಗೌಡ, ಸುರೇಂದ್ರಗೌಡ, ಒಬಿಸಿ ಮುನಿಸ್ವಾಮಿ, ವೆಂಕಟಾಚಲಪತಿ, ನಾರಾಯಣಸ್ವಾಮಿ, ಶಂಕರ್, ವೆಂಕಟೇಶರೆಡ್ಡಿ, ಮುನೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *