ಶ್ರೀನಿವಾಸಪುರ ತಾಲೂಕಿನ ಮುತ್ತಕ ಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಿಪಲ್ಲಿ ಗ್ರಾಮದಲ್ಲಿ ಸುಮಾರು 25 ವರ್ಷಗಳಿಂದಲೂ ಸಹ ಯಾವುದೇ ರೀತಿಯ ಮನೆಗಳು ಬಡವರಿಗೆ ನೀರಿಲ್ಲ ಎಂಬುದು ಎಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಇಲ್ಲಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೇವಲ ಈ ಗ್ರಾಮವನ್ನು ದಾಖಲೆಗಳಲ್ಲಿ ಮಾತ್ರ ಉಳಿಸಿಕೊಂಡು ಚುನಾವಣೆಯಲ್ಲಿ ಮಾತ್ರ ಗ್ರಾಮದ ಉಪಯೋಗ ಪಡೆಯುತ್ತಾರೆ ಇಲ್ಲಿನ ಜನಪ್ರತಿನಿಧಿಗಳು.
ರಾಜಕಾರಣಿಗಳು ಚುನಾವಣೆ ವೇಳೆ ಸುತ್ತಮುತ್ತಲ ಹಳ್ಳಿಗಳಿಗೆ ಬಂದು ಭೇಟಿ ನೀಡಿ ಹೋಗುತ್ತಾರೆ ವಿನಹ ನಮ್ಮ ಗ್ರಾಮಕ್ಕೆ ಇಂದಿಗೂ ಸಹ ಭೇಟಿ ನೀಡಿಲ್ಲ ಚುನಾವಣೆ ಸಮಯದಲ್ಲಿ ಪಕ್ಕದ ಹಳ್ಳಿಗಳಾದ ಬೊಮ್ಮನೂರು,ಮುತ್ತ ಕಪಲ್ಲಿ, ಮಹಮ್ಮದ್ ಪುರ, ಗ್ರಾಮಗಳಿಗೆ ಮಾತ್ರ ಭೇಟಿ ನೀಡುತ್ತಾರೆ ನಮ್ಮ ಗ್ರಾಮಗಳಿಗೆ ಭೇಟಿ ನೀಡುವುದು ಇಲ್ಲ ಭೇಟಿನೀಡಿ ಇಲ್ಲ.
ಹಾಲಿ ಶಾಸಕರು ಮಾಜಿ ಶಾಸಕರು ಸಹ ನಮ್ಮ ಗ್ರಾಮಕ್ಕೆ ಸುಮಾರು 20 ವರ್ಷಗಳಿಂದಲೂ ಸಹ ಭೇಟಿ ನೀಡಿಲ್ಲ ಎಂದು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಹಲವಾರು ಬಾರಿ ಗ್ರಾಮಪಂಚಾಯಿತಿ ಮುತಕಪಲ್ಲಿ ಕೇಂದ್ರದಲ್ಲಿ ಹೋಗಿ ಮನೆ ಮಂಜೂರು ಮಾಡುವಂತೆ ದಾಖಲೆಗಳನ್ನು ನೀಡಿದ್ದರೂ ಸಹ ಇದುವರೆಗೂ ಗ್ರಾಮ ಪಂಚಾಯಿತಿಯಿಂದ ಒಂದು ಮನೆಯನ್ನು ಸಹ ನಿರ್ಮಿಸಲು ಮುಂದಾಗದೇ ಇರುವುದು ಇಲ್ಲಿನ ಪಿಡಿಒಗಳ ಕರ್ತವ್ಯ ನಿರ್ಲಕ್ಷ ಎದ್ದುಕಾಣುತ್ತದೆ.
ಸ್ಥಳೀಯ ಶಾಸಕ ಕೆ ಆರ್ ರಮೇಶ್ ಕುಮಾರ್ ರವರು ಶ್ರೀನಿವಾಸಪುರ ತಾಲೂಕನ್ನು ಕರ್ನಾಟಕ ರಾಜ್ಯದಲ್ಲಿ ಗುಡಿಸಲು ಮುಕ್ತ ತಾಲೂಕನ್ನಾಗಿ ಪರಿಣಾಮಿಸಬೇಕು ಎಂದು ಪಣತೊಟ್ಟಿದ್ದಾರೆ.
ಈ ಗುಡಿಸಲು ಮುಕ್ತ ತಾಲೂಕು ಕೇವಲ ನೆಪಮಾತ್ರಕ್ಕೆ ಹೇಳಿಕೆಗೆ ಮಾತ್ರ ಸೀಮಿತವಾಗಿದೆಯೇ ಎಂಬುದು ಇಲ್ಲಿ ಪ್ರಶ್ನಾರ್ಹ ಸಂಗತಿಯಾಗಿದೆ
ಶಾಸಕ ಕೆ ಆರ್ ರಮೇಶ್ ಕುಮಾರ್ ರವರು ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮನೆಗಳನ್ನು ಶ್ರೀನಿವಾಸಪುರ ತಾಲೂಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಆದರೆ ಇಲ್ಲಿನ ಸ್ಥಳೀಯ ಪಿಡಿಒಗಳು ಮಾತ್ರ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ.
ಮುತ್ತ ಕಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮ ನೂರು ಹಾಗೂ ಮುತಕಪಲ್ಲಿ ಕೇಂದ್ರ ಸ್ಥಾನದಲ್ಲಿರುವ ಗ್ರಾಮಗಳಲ್ಲಿ ಮನೆಗಳು ಹೊಂದಿರುವವರಿಗೆ ಮರಳಿ ಮನೆಗಳನ್ನು ಮಂಜೂರು ಮಾಡುವಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ತಮ್ಮ ಕೈಚಳಕವನ್ನು ತೋರಿಸಿ ಉಳ್ಳವರಿಗೆ ಮನೆಗಳನ್ನು ಮಂಜೂರು ಮಾಡುವ ಕರ್ತವ್ಯದಲ್ಲಿ ಅತ್ಯಂತ ನಿಪುಣರಾಗಿದ್ದಾರೆ.
ಆದರೆ ಈ ಕೊಡಿಪಲ್ಲಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದಲೂ ಸಹ ಮನೆಗಳು ಇಲ್ಲದೆ ಬಡಬಗ್ಗರು ಕೂಲಿನಾಲಿ ಮಾಡುವ ಜನರಿಗೆ ಮಾತ್ರ ಮನೆಗಳನ್ನು ನೀಡುವಲ್ಲಿ ಮೀನಮೇಷ ಎಣಿಸಿ ಕರ್ತವ್ಯವನ್ನು ಬರುತ್ತಿರುವುದಂತೂ ಸತ್ಯ ಸಂಗತಿಯಾಗಿದೆ.
ಈ ಗ್ರಾಮದಲ್ಲಿ ಸುಮಾರು 22ಕ್ಕೂ ಹೆಚ್ಚು ಮನೆಗಳು ಇದ್ದು ಗ್ರಾಮದಲ್ಲಿ ಮುಸ್ಲಿಂ ಜನಾಂಗದ ಎಲ್ಲಮ್ಮನ ಗಳು ಇವೆ ಮನೆಗಳಲ್ಲಿ ವಾಸಿಸುವ ಎಲ್ಲಾ ಜನರು ಕೂಲಿನಾಲಿ ಯಿಂದಲೇ ಜೀವನ ಮಾಡಬೇಕಾಗಿದೆ.
ಈ ಗ್ರಾಮದಲ್ಲಿ ಹಲವಾರು ಬಾರಿ ಪಂಚಾಯಿತಿ ಕೇಂದ್ರಕ್ಕೆ ಭೇಟಿ ನೀಡಿ ನಮಗೆ ಮನೆಗಳನ್ನು ಮಂಜೂರು ಮಾಡಿ ಎಂದು ಹೇಳಿದರೂ ಸಹ ಮನೆಗಳನ್ನು ಮಂಜೂರು ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಮೊದಲ ಪಟ್ಟಿಯಲ್ಲಿ ನಿಮ್ಮ ಹಾಗೆ ಮನೆಗಳನ್ನು ಮಂಜೂರು ಮಾಡುತ್ತೇವೆ ಎಂದು ಸುಮಾರು ಐದು ವರ್ಷಗಳ ಹಿಂದೆ ಪಾಯವನ್ನು ನಿರ್ಮಿಸಿಕೊಂಡಿರುವ ಫಲಾನುಭವಿ ವಾಜಿದ್ ಅಲಿ ರವರು ಮನೆಯ ಮೊದಲ ಹಂತದ ಅಪಾಯವನ್ನು ಸ್ವಂತ ಹಣದಿಂದ ನಿರ್ಮಾಣ ಮಾಡಿಕೊಂಡಿದ್ದಾರೆ ಇದುವರೆಗೂ ಸಹ ಮನೆಯನ್ನು ಮಂಜೂರು ಮಾಡಿಲ್ಲ ಆದೇಶ ಪತ್ರವನ್ನು ಸಹ ನೀಡಿಲ್ಲ ಈ ರೀತಿ ಒಂದು ಕಡೆಯಾದರೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿನ ಸಿಬ್ಬಂದಿ ಕಾರ್ಯದರ್ಶಿ ಪಿಡಿಓ ಸಹ ಯಾರು ಬಂದು ಜಿಪಿಎಸ್ ಮಾಡದಿರುವುದು ವಿಷಾದನೀಯ ಸಂಗತಿಯಾಗಿದೆ.
ವಾಜಿದ್ ಅಲಿ ಹೇಳುವ ಪ್ರಕಾರ ಸುಮಾರು ಮೂವತ್ತೆರಡು ವರ್ಷಗಳ ಹಿಂದೆ ತನ್ನ ತಂದೆಯ ಕಾಲದಲ್ಲಿ ಗ್ರಾಮಕ್ಕೆ 4 ಮನೆಗಳು ಸರ್ಕಾರದಿಂದ ಮಂಜೂರಾಗಿದೆ ಅದನ್ನು ಬಿಟ್ಟರೆ ಇದುವರೆಗೂ ನಮ್ಮ ಗ್ರಾಮಕ್ಕೆ ನೀಡಿಲ್ಲ ಎಂದು ಮುಕ್ತಕಂಠದಿಂದ ಹೇಳುತ್ತಾರೆ ಪಿಡಿಓಗಳ ಬಳಿ ತಮ್ಮ ಗ್ರಾಮಕ್ಕೆ ಭೇಟಿ ನೀಡಿ ಎಂದು ಹಲವಾರು ಬಾರಿ ಹೇಳಿದರೂ ಸಹ ಅವರು ತಮ್ಮದೇ ದಾಟಿಯಲ್ಲಿ ಓಲೈಕೆ ಮಾತುಗಳನ್ನಾಡುತ್ತಾರೆ ವಿನಹ ನಮ್ಮ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.
ದನದ ಕೊಟ್ಟಿಗೆ ಸುಮಾರು ಹತ್ತು ಸಾವಿರ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ ಹಣವು ಮಾತ್ರ ಬಿಟ್ಟರೆ ಉಳಿದ ಹಣ ನಮ್ಮ ಖಾತೆಗೆ ಪಂಚಾಯತಿ ವತಿಯಿಂದ ನೀಡಿರುವುದಿಲ್ಲ ಪಂಚಾಯಿತಿಯಲ್ಲಿ ಹೋಗಿ ಕೇಳಿದರೆ ನಿಮಗೆ ಇಂದು ನಾಳೆ ಎಂದು ಸುಮಾರು ವರ್ಷಗಳಿಂದ ದಿನಗಳನ್ನು ಕಳೆಯುತ್ತಿದ್ದಾರೆ ವಿನಹ ಹಣವನ್ನೂ ನೀಡಿಲ್ಲ ಎಂದು ಫಲಾನುಭವಿ ಹೇಳುತ್ತಾರೆ.
ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ ಹಲವಾರು ವರ್ಷಗಳಿಂದ ಕುಡಿಯುವ ನೀರಿಗೆ ಹಾಹಾಕಾರ ವಾಗಿದ್ದು ಕಳೆದ ಮೂರು ವರ್ಷಗಳ ಹಿಂದೆ ಕಿಟ್ಟು ನಿಂತಿದ್ದ ಕೊಳವೆಬಾವಿಯನ್ನು ಸರಿಪಡಿಸಿದ್ದಾರೆ ಈ ಕೊಳವೆಬಾವಿಯಿಂದ ಸುವಾಸನೆಯಿಂದ ಕೂಡಿದ ನೀರು ಬರುತ್ತದೆ ಕೆಲವು ವಾಸನೆ ಇರುವ ನೀರನ್ನೇ ಕುಡಿದು ನಾವು ಬದುಕುತ್ತಿದ್ದೇವೆ ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸದೇ ಇದ್ದಾರೆ.
ಚರಂಡಿಗಳು ಸರಿಯಾಗಿ ನಿರ್ಮಾಣ ಮಾಡಿರುವುದಿಲ್ಲ ಮಳೆಯು ಯಥೇಚ್ಛವಾಗಿ ಬಿದ್ದರೆ ನಮ್ಮ ಗುಡಿಸಲು ಮನೆಗಳಲ್ಲಿ ತುಂಬಿಹೋಗುತ್ತದೆ ಈ ಬಗ್ಗೆ ಪಂಚಾಯಿತಿಯಲ್ಲಿ ಹಲವಾರು ಬಾರಿ ಹೇಳಿದರೂ ಸಹ ಗಮನ ಹರಿಸದೇ ಇರುವುದು ನಮ್ಮ ನೋವು ಯಾರಬಳಿ ಹೇಳಿಕೊಳ್ಳುವುದು ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ನಮ್ಮ ಗ್ರಾಮದಲ್ಲಿ ಸುಮಾರು 21 ಮನೆಗಳ ಅವಶ್ಯಕತೆ ಇದೆ ಯಾರಿಗೂ ಸಹ ಮನೆಗಳು ಇರುವುದಿಲ್ಲ ಎಲ್ಲಾ ಗುಡಿಸಲು ಮನೆಗಳು ಮತ್ತು ತನ್ನ ಕೈಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಒಂದು ಲಕ್ಷ ರೂಪಾಯಿಗಳನ್ನು ವಾರದ ಕಂತಿನಲ್ಲಿ ಎತ್ತಿಕೊಂಡು ಸಿಮೆಂಟ್ ಇಟ್ಟಿಗೆ ಯಲ್ಲಿ ಸ್ವಲ್ಪ ಮಟ್ಟಿಗೆ ಮನೆಯನ್ನು ಇಬ್ಬರು ಮಾತ್ರ ನಿರ್ಮಿಸಿಕೊಂಡಿದ್ದೇವೆ ಈ ಮನೆಗಳು ಸಿಮೆಂಟ್ ಗೆಯಲ್ಲಿ ನಿರ್ಮಿಸಿಕೊಂಡಿದ್ದೇವೆ ಇವುಗಳು ಪೂರ್ತಿ ಮಾಡಿಕೊಳ್ಳಲು ಸಹ ಆಗುತ್ತಿಲ್ಲ ಸುಣ್ಣ-ಬಣ್ಣ ಬಳಿದು ಮತ್ತು ನಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಸ್ಥಳೀಯ ನಿವಾಸಿಗಳಾದ ಮುಜಾಹೀದ್, ಅನ್ವರ್, ತನ್ವೀರ್, ಬಾಶು ಸಾಬಿ,ಶಾಕೀರಾ, ರಾಜಸಾಬಿ, ರೈಶು, ಅಮೀರ್ ಸಾಬ್, ಅಸ್ಲಾಂ, ಮಹಬೂಬ್ ಸಾಬಿ, ವಾಜಿದ್, ರಮೀ ಜಾಬಿ, ತಾಜುನ್, ಗುಡಿಸಲುಗಳಲ್ಲಿ ಜೀವನ ನಡೆಸುತ್ತಿರುವ ಬಡ ನಿವಾಸಿಗಳು.
ಕೊಡಿಪಲ್ಲಿ ಗ್ರಾಮ ಗುಡಿಸಲು ತುಂಬಿರುವ ಗ್ರಾಮವಾಗಿದೆ ಈ ಗ್ರಾಮವು ಗುಡಿಸಲು ಮುಕ್ತ ಗ್ರಾಮ ವಾಗಲು ಸ್ಥಳೀಯ ಶಾಸಕರು ಗಮನಹರಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯಕ್ಕೆ ಬಿಸಿ ಮುಟ್ಟಿಸಿ ಸ್ಥಳೀಯ ನಿವಾಸಿಗಳಿಗೆ ಮನೆ ನೀಡುವಲ್ಲಿ ಮುಂದಾಗುವರೇ ಕಾದುನೋಡಬೇಕಾಗಿದೆ?