ಕೋಲಾರ, ನೋoದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ದಸ್ತಾವೇಜು ನೋಂದಣಿ ಮತ್ತಿತರ ಸೇವೆಗಳಿಗೆ ಹಾಲಿ ಬಳಕೆಯಲ್ಲಿರುವ ಕಾವೇರಿ ೧ ತಂತ್ರಾoಶ ಆಧಾರಿತ ನೋಂದಣಿಯ ಬದಲಿಗೆ ಕಾವೇರಿ ೨ ತಂತ್ರಾoಶ ಆಧಾರಿತ ನೋಂದಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಏಪ್ರಿಲ್ ೧೭ ರಂದು ಕೋಲಾರ ತಾಲ್ಲೂಕಿನಲ್ಲಿ, ಏಪ್ರಿಲ್ ೧೮ ರಂದು ಮಾಲೂರು ತಾಲ್ಲೂಕಿನಲ್ಲಿ, ಏಪ್ರಿಲ್ ೧೯ ರಂದು ಬಂಗಾರಪೇಟೆ ತಾಲ್ಲೂಕಿನಲ್ಲಿ, ಏಪ್ರಿಲ್ ೨೦ ರಂದು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹಾಗೂ ಏಪ್ರಿಲ್ ೨೧ ರಂದು ಮುಳಬಾಗಿಲು ತಾಲ್ಲೂಕಿನಲ್ಲಿ ತಂತ್ರಾoಶದ ಅನುಷ್ಟಾನಗೊಳಿಸಲಾಗುವುದು. ಹೆಚ್ಚಿನ ವಿವರಗಳಿಗೆ ಜಾಲತಾಣ https://kaveri.karnataka.gov.in ಅಥವಾ https ://igr.karnataka. gov.in ನ್ನು ಹಾಗೂ ಸಹಾಯವಾಣಿ ೦೮೦-೬೮೨೬೫೩೧೬ನ್ನು ಸಂಪರ್ಕಿಸಬಹುದಾಗಿದೆ ಎಂದು ಕೋಲಾರ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.