ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಜೆ.ಡಿ.ಎಸ್ ಸೇರ್ಪಡೆ-ಕೆ.ಎಂ.ಅನoತಕೀರ್ತಿ

ಕೋಲಾರ,ಗಾಂಧಿನಗರದ ಯುವ ಮುಖಂಡ ಕೆ.ಎಂ.ಅನoತಕೀರ್ತಿ ಇಂದು ಜೆ.ಡಿ.ಎಸ್.ಪಕ್ಷದ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆ.ಡಿ.ಎಸ್ ಸೇರ್ಪಡೆಗೊಂಡರು.
ಕರ್ನಾಟಕ ವಿಧಾನಸಭಾ ಚುನಾವಣೆ ೨೦೨೩ರ ವೇಳೆ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ರಾಜ್ಯದ ಚುಕ್ಕಾಣಿ ಹಿಡಿಯಬೇಕೆಂಬ ಹಣಾಹಣಿಯಲ್ಲಿ
ಪಕ್ಷಾಂತರಿಗಳು, ಹಣದ ಕುಳಗಳಿಗೆ, ಕೋಮುವಾದಿಗಳಿಗೆ, ದಲಿತ ದ್ರೋಹಿಗಳಿಗೆ ಮಣೆ ಹಾಕಿದ್ದಾರೆ.
ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಸ್ವರ್ಧಿಸಿ ಗೆಲ್ಲುವ ಸಾಮರ್ಥ್ಯವಿರುವವರಿದ್ದರೂ ಸಹ ದಲಿತರ ಮೀಸಲಾತಿಯನ್ನು ಕದ್ದವ, ಸತತ ಏಳು ಬಾರಿ ಗೆದ್ದಿದ್ದ ಪರಿಶಿಷ್ಟ ಜಾತಿಯ ಕೆ.ಹೆಚ್ ಮುನಿಯಪ್ಪ ನವರನ್ನು ಸೋಲಿಸಲು ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಸೇರಿ ತನ್ನ ಹಣ ಬಲ, ತೋಳ್ಬಲವನ್ನು ಬಳಸಿ ಕೆ.ಹೆಚ್ ಮುನಿಯಪ್ಪ ನವರನ್ನು ಸೋಲಿಸುವಲ್ಲೂ ಯಶಸ್ವಿಯಾದ, ದಲಿತ ಹೋರಾಟಗಾರರನ್ನು, ದಲಿತರನ್ನು ತಾನು ತೊಡುವ ಲೇ ಲೇಕರ್ ಶೂಗೆ ಹೋಲಿಸಿ ಅವಮಾನಿಸಿದ ಹಾಗೂ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸರ್ಕಾರವನ್ನು ಬೀಳಿಸಲು ಮುಳಬಾಗಿಲಿನ ಶಾಸಕ ಹೆಚ್.ನಾಗೇಶರನ್ನ ಕರೆದುಕೊಂಡು ಹೋಗಿ ಯಡಿಯೂರಪ್ಪನ ಬಳಿ ಬಿಟ್ಟು ಸರ್ಕಾರ ಬೀಳಿಸಲು ಕಾರಣ ಕರ್ತನಾದ ಕೊತ್ತೂರು ಮಂಜುನಾಥ್‌ಗೆ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿರುವುದನ್ನು ಖಂಡಿಸಿ ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Leave a Reply

Your email address will not be published. Required fields are marked *