ಕಾಂಗ್ರೆಸ್ ಜೆಡಿಎಸ್ ನಿರ್ಲಕ್ಷಿಸಿ ಬಿಜೆಪಿಯನ್ನು ಬೆಂಬಲಿಸಿನಾಲ್ಕು ದಶಕಗಳಲ್ಲಿ ಮಾವಿನ ತಿರುಳು ಘಟಕವನ್ನು ಸ್ಥಾಪಿಸಿಲ್ಲಾ ಇದೇನಾ ಇಲ್ಲಿನ ಅಭಿವೃದ್ಧಿ? ಮಾಜಿ ಸಚಿವೆ ಪುರಂದರೇಶ್ವರಿ

ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸ ರೆಡ್ಡಿ ಪರ ಮತಯಾಚನೆ ಮಾಡಲು ಗೌನಿಪಲ್ಲಿಗೆ ಆಗಮಿಸಿದ ಮಾಜಿ ಸಚಿವೆ ಪುರಂದರೇಶ್ವರಿ ರವರು ಮಾತನಾಡಿ ೪ ದಶಕಗಳಿಂದ ಇಲ್ಲಿನ ಮಾಜಿ ಸ್ಪೀಕರ್ ರವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾ ಇಲ್ಲಿ ನ ರಸ್ತೆಗಳು ಹದಗೆಟ್ಟಿವೆ ಅಭಿವೃದ್ಧಿಯಲ್ಲಿ ಮರೀಚಿಕೆಯಾಗಿದೆ ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕಾಗಿದೆ ಎಂದು ಕರೆ ನೀಡಿದರು.
ಇಲ್ಲಿನ ಮಾಜಿ ಸ್ಪೀಕರ್ ಅವರು ಅಭಿವೃದ್ಧಿಯನ್ನು ಪಡಿಸುವಲ್ಲಿ ಹಿಂದೇಟು ಹಾಕಿದ್ದಾರೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯನ್ನು ಸಹ ಕೈಗೊಂಬೆಯಾಗಿ ಆಡಿಸಬಲ್ಲಂತಹ ಅಧಿಕಾರವುಳ್ಳ ಮಾಜಿ ಶಾಸಕ ಕೆಆರ್ ರಮೇಶ್ ಕುಮಾರ್ ರವರು ಅಭಿವೃದ್ಧಿಗೆ ಒತ್ತು ನೀಡದೆ ಈ ಕ್ಷೇತ್ರವನ್ನು ಕಡೆಗಣಿಸಿದ್ದಾರೆ.
ಮಾವಿನ ನಗರಿಯಾಗಿರುವ ಈ ಕ್ಷೇತ್ರದಲ್ಲಿ ಕನಿಷ್ಠಪಕ್ಷ ಮಾವುನ ತಿರುಳು ಘಟಕವನ್ನು ಸಹ ತೆರೆಯದೆ ಇರುವುದು ವಿಷಾಧಕರ ಘಟನೆಯಾಗಿದೆ.
ಒಂದು ಬಾರಿ ಕಾಂಗ್ರೆಸ್ ಮತ್ತೊಂದು ಬಾರಿ ಜೆಡಿಎಸ್ ಅಧಿಕಾರ ವಹಿಸಿಕೊಂಡು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುದಿಲ್ಲ ಆದರೆ ಬಿಜೆಪಿಯನ್ನು ಬೆಂಬಲಿಸಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಸಾಗಿಸಿ ಎಂದು ಮನವಿ ಮಾಡಿದರು.
ಈ ಕ್ಷೇತ್ರದಿಂದ ಬೇರೆ ಕಡೆಗೆ ಇಲ್ಲಿನ ನಿರುದ್ಯಗಳು ಉದ್ಯೋಗವನ್ನು ಆರಿಸಿ ಹೋಗುವಂತಾಗಿದೆ ಉದ್ಯೋಗವನ್ನು ಕೊಡಿಸುವಲ್ಲಿ ಸ್ಥಳೀಯ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಖಾನೆಗಳನ್ನು ತೆರೆಯಬಹುದಿತ್ತು ಆದರೆ ಏನು ಮಾಡಿಲ್ಲ ಇಂತಹ ಅಭ್ಯರ್ಥಿಗಳಿಗೆ ಮತವನ್ನು ನೀಡದೆ ನಿರ್ಲಕ್ಷಿಸಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಮೇ ೧೦ನೇ ತಾರೀಕು ನಡೆಯುವ ಮತದಾನದಂದು ಬಿಜೆಪಿ ಅಭ್ಯರ್ಥಿಯ ಪರ ಮತವನ್ನು ಚಲಾಯಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ್ಕ ವೈಯನಾರಾಯಣಸ್ವಾಮಿ, ಅತ್ತಿ ಕುಂಟೆ ರಾಜಶೇಖರ ರೆಡ್ಡಿ ರಾಜೇಂದ್ರ ಪ್ರಸಾದ್ ಸೇರಿದಂತೆ ಗುಂಜೂರು ಅಭಿಮಾನಿ ಬಳಗದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *