ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನೇಕ ಸೌಲಭ್ಯಗಳನ್ನು ತಲುಪಿಸುವುದೇ ನನ್ನ ಗುರಿ :ಶಾಸಕ ಕೆ.ಆರ್.ರಮೇಶ್‌ಕುಮಾರ್
ಶ್ರೀನಿವಾಸಪುರ : ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದೇ ನಮ್ಮ ಜವಾಬ್ದಾರಿ ಮುಂದಿನ ದಿನಗಳಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದರೆ ಇನ್ನು ಅನೇಕ ರೀತಿಯ ಸೌಲಭ್ಯಗಳನ್ನು ಬಡವರಿಗೆ ತಂದು ಕೊಡುತ್ತೇನೆ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.
ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾದ ಮಸೀದಿ ಬಳಿ ಭಾನುವಾರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಶ್ರೀನಿವಾಸಪುರದ ಜಾಕಿರ್ ಹುಸೇನ್ ಮೊಹಲ್ಲಾ ಮತ್ತು ಇಂದ್ರಾನಗರಕ್ಕೆ ಸ್ಲಂ ಬೋರ್ಡ್ ನಿಂದ ಬಡವರಿಗೆ ೧೫೦ ಮನೆಗಳನ್ನು ತಂದಿದ್ದು, ಅದರಲ್ಲಿ ಕೆಲ ಬಡವರು ಅರ್ಧಂಬರ್ಧ ಮನೆಗಳನ್ನು ಕಟ್ಟಿದ್ದು, ಇನ್ನು ಕೆಲವರು ಸಂಪೂರ್ಣ ಮನೆಯನ್ನು ಕಟ್ಟಿದ್ದಾರೆ. ಮನೆಗಳನ್ನು ಕಟ್ಟಿರುವಂತಹ ಎಲ್ಲರಿಗೂ ಲೇಬರ್ ಡಿಪಾರ್ಟ್ಮೆಂಟ್ ನಿಂದ ಒಂದುವರೇ ಕೋಟಿ ಹಣವನ್ನು ತಂದುಕೊಟ್ಟಿದ್ದೀನಿ. ಹಾಗೂ ಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ಸಹಾಯ ಮಾಡಿದ್ದೇನೆ. ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದೇ ನಮ್ಮ ಜವಾಬ್ದಾರಿ ಎಂದರು.ಈ ಸಮಯದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಜಿ.ಪಂ.ಮಾಜಿ ಸದಸ್ಯರಾದ ಮ್ಯಾಕಲರಾಯಣಸ್ವಾಮಿ, ಪುರಸಭೆ ಸದಸ್ಯರಾದ ಅನೀಸ್, ಭಾಸ್ಕರ್, ಮುನಿರಾಜು, ಉನಕಿಲಿ ನಾಗರಾಜ್, ತಜಮುಲ್, ಮುಖಂಡರಾದ ಎನ್.ಜಿ.ಬ್ಯಾಟಪ್ಪ, ಅಕ್ಬರ್ ಷರೀಫ್, ನವಾಜ್, ರಹಮತ್, ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜುನಾಥ್‌ರೆಡ್ಡಿ, ಅಹಮದ್ ಸೈಯದ್, ಮುಹೀನ್ , ವಸೀಮ್, ನರಸಿಂಹಮೂರ್ತಿ, ಬಾಬಾ , ನದೀಮ್, ಸಿಬಗತ್ ಉಲ್ಲಾ, ಅತಾವುಲ್ಲಾ, ಜಬಿ ಇದ್ದರು.