ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ೨೦೨೩ : ಚುನಾವಣಾ ಆಯೋಗ ವೀಕ್ಷಕರ (ಪೊಲೀಸ್) ಕ್ಯಾಂಪ್ ಕಚೇರಿ ಆರಂಭ


ಕೋಲಾರ, ಕರ್ನಾಟಕ ವಿಧಾನಸಭೆ ಚುನಾವಣೆಗಳು-೨೦೨೩ರ ಸಂಬoಧ ಭಾರತ ಚುನಾವಣಾ ಆಯೋಗವು ಕೋಲಾರ ಜಿಲ್ಲೆಯ ಆರು ವಿಧಾನಸಭಾ ಮತಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರನ್ನಾಗಿ ಶ್ರೀ ರಾಜೇಶ್‌ಕುಮಾರ್, ಐಪಿಎಸ್, ಎಡಿಜಿಪಿ, ಒರಿಸ್ಸಾ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಶ್ರೀಯುತರು ಚುನಾವಣಾ ದಿನಾಂಕದವರೆಗೆ ಪೊಲೀಸ್ ಅಧೀಕ್ಷಕರ ಕಚೇರಿ “ಅವಲೋಕನ” ಸಭಾಂಗಣದಲ್ಲಿ ತೆರೆಯಲಾದ ಕ್ಯಾಂಪ್‌ರೂoನಲ್ಲಿ ಪ್ರತಿದಿನ ಸಂಜೆ ೪.೩೦ ರಿಂದ ೫.೩೦ ರವರೆಗೆ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಸಾರ್ವಜನಿಕರು ಚುನಾವಣೆ ಸಂಬoಧ ದೂರು ಅಥವಾ ಸಲಹೆಗಳನ್ನು ನೀಡಲು ಅವರ ಕಚೇರಿಯನ್ನು ಹಾಗೂ ಮೊಬೈಲ್ ಸಂ: ೯೧೪೧೦೩೫೨೧೭ ಮತ್ತು ಸಂಪರ್ಕಾಧಿಕಾರಿ ವೀರೇಶ್ ೯೪೮೦೮೦೨೬೧೦ ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟ್‌ರಾಜಾ ರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *