ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಚುನಾವಣಾ ಆಯೋಗ ಅಭಿಸೂಚನೆ ಹೊರಡಿಸಲಾಗಿರುವ ದಿನಾಂಕ 13.4.2023ರಿಂದ ದಿನಾಂಕ 20 4 2023 ರವರೆಗೆ ನಾಮಪತ್ರ ಸ್ವೀಕೃತಿ, ದಿನಾಂಕ 21 4 2023 ರಂದು ನಾಮಪತ್ರ ಪರಿಶೀಲನೆ, ದಿನಾಂಕ 24 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ ವಾಗಿರುತ್ತದೆ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ ಕೋಲಾರ ಮೊಬೈಲ್ ನಂಬರ್ 9480 870001 ಹಾಗೂ ತಹಸೀಲ್ದಾರ್ ಶ್ರೀನಿವಾಸಪುರ ಮೊಬೈಲ್ ನಂಬರ್ 9663670217 ರವರನ್ನು ಚುನಾವಣಾ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ
ನಂಬರ್ 144- ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಶ್ರೀನಿವಾಸಪುರ ಕಸಬಾ ನೆಲವಂಕಿ ರಾಯಲ್ ಪಾಡು, ಯಲದೂರು ರೋಣೂರು ಹಾಗೂ ಕೋಲಾರ ತಾಲೂಕಿನ ಹೋಳೂರು ಮತ್ತು ಸುಗಟೂರು ಹೋಬಳಿಗಳು ಸೇರುತ್ತವೆ.
ಈ ಕ್ಷೇತ್ರದಲ್ಲಿ ಒಟ್ಟು 289 ಮತಗಳಿದ್ದು ಈ ಪೈಕಿ ಸೂಕ್ಷ್ಮ 69 ಸಾಮಾನ್ಯ 211 ವರ್ಲ ನರೇಬಲ್ 9 ಮತಕಟ್ಟೆಗಳಿರುತ್ತವೆ
ಗಂಡು107216, ಹೆಣ್ಣು108701, ಇತರೆ 7, ಒಟ್ಟು215924 ಮತದಾರರು ಇರುತ್ತಾರೆ.
ಲಿಂಗಾನುಪಾತ 1000:1013 ಇರುತ್ತದೆ ವಿಕಲಚೇತನ ಮತದಾರರು ಗಂಡು 1033, ಹೆಣ್ಣು755, ಇತರೆ1, ಒಟ್ಟು1789, ಚುನಾವಣಾ ಆಯೋಗ ನಿರ್ದೇಶನದಂತೆ ಈ ಬಾರಿ ವಿಕಲಚೇತನ ಹಾಗೂ ಹಿರಿಯ ನಾಗರಿಕರು 80+ ಮತದಾರರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅನುವು ಮಾಡಿಕೊಡಲಾಗಿದೆ. ಇದರಂತೆ ಹಿರಿಯ ನಾಗರಿಕರು ಗಂಡು 2369, ಹೆಣ್ಣು 2819 ಒಟ್ಟು 5188 ಮತದಾರರಿರುತ್ತಾರೆ ಯುವ ಮತದಾರರು 6010 ಇರುತ್ತಾರೆ .
ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ನಮ್ಮ ಕ್ಷೇತ್ರಕ್ಕೆ ಒಟ್ಟು 289 ಮತಕಟ್ಟೆ ಅಧ್ಯಕ್ಷ ಅಧಿಕಾರಿಗಳು 289 ಸಹಾಯಕ ಮತಕಟ್ಟೆ ಅಧ್ಯಕ್ಷ ಅಧಿಕಾರಿಗಳು ಹಾಗೂ 578 ಮತಗಟ್ಟೆ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
ಮತಕಟ್ಟೆ ಅಧಿಕಾರಿಗಳಿಗೆ ಎರಡು ಹಂತದ ತರಬೇತಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀನಿವಾಸಪುರ ಇಲ್ಲಿ ಏರ್ಪಡಿಸಲಾಗಿದೆ ನೀತಿ ಸಮಿತಿ ಜಾರಿ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು 29 ಸೆಕ್ಟರ್ ಅಧಿಕಾರಿಗಳನ್ನು ಹಾಗೂ ಆರು ತಂಡಗಳನ್ನು ಎಸ್ ಎಸ್ ಟಿ / ಎಂ ಸಿ ಎಂ ಸಿ ತಂಡಗಳನ್ನು ಸಹ ನೇಮಕಾತಿ ಮಾಡಲಾಗಿದೆ ಈ ಸಂಬಂಧ ಪ್ರಸ್ತುತ ಸೋಮಾಯಜಲಹಳ್ಳಿ, ಹಕ್ಕಿಪಿಕ್ಕಿ ಕಾಲೋನಿ ಮತ್ತು ಹೊಸ ಹುಡ್ಯ ಮೂರು ಚಕ್ ಪೋಸ್ಟ್ಗಳನ್ನು ತೆರೆಯಲಾಗಿದೆ .
ಮಾಸ್ತಿಂಗ್ ಮತ್ತು ಡಿ ಮಾಸ್ಟರ್ ರಿಂಗ್ ಸ್ಥಳವನ್ನಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶ್ರೀನಿವಾಸಪುರ ಇಲ್ಲಿ ಏರ್ಪಡಿಸಲಾಗಿದೆ
ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ತೆರೆಯಲಾಗಿದ್ದು ನಾಮಪತ್ರಗಳ ಚುನಾವಣೆ ಅಧಿಕಾರಿಗಳ ಕಚೇರಿಯಿಂದ ಪಡೆಯಬಹುದಾಗಿರುತ್ತದೆ ಹಾಗೂ ನಿಗದಿತ ಅವಧಿಯಲ್ಲಿ ಮಾತ್ರ ನಾಮಪತ್ರ ಸಲ್ಲಿಸಬಹುದಾಗಿರುತ್ತದೆ.
ನೀತಿ ಸಂಹಿತೆ ಯು ದಿನಾಂಕ 29.03.2023 ರಿಂದಲೇ ಜಾರಿಗೆ ಬಂದಿದ್ದು ಚುನಾವಣಾ ಪ್ರಚಾರಗಳ ಕಾರ್ಯಕ್ರಮಗಳನ್ನು ನಡೆಸಲು 48 ಗಂಟೆ ಮುಂಚಿತವಾಗಿ ಚುನಾವಣೆ ಅಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯಬೇಕಾಗಿರುತ್ತದೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಂಟಿಂಗ್ಸ್ ಪ್ಲೆಕ್ಸ್ ಅಳವಡಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ಕಿಮ್ಮತ್ತು ಪಾವತಿಸಿ ಅನುಮತಿ ಪಡೆಯಬೇಕಾಗಿರುತ್ತದೆ.
ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬಹುದಾಗಿರುತ್ತದೆ ತದನಂತರ ಮೈಕ್ರೋ ಸ್ಟಿಕರ್ಸ್ ಹಾಗೂ ಡಿಜೆ ಅಳವಡಿಸಲು ಆರಕ್ಷಕ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿರುತ್ತದೆ ಕಾರ್ಯಕ್ರಮ ನಡೆಸಲು ಸ್ಥಳದ ಮಾಲೀಕರಿಂದ ಒಪ್ಪಿಗೆ ಪತ್ರ ಸರ್ಕಾರಿ ಜಾಗದಲ್ಲಿ ಹಾಗಿದ್ದರೆ ಸಂಬಂಧಪಟ್ಟ ಅಧಿಕಾರಿಂದ ಅನುಮತಿ ಪಡೆದಿರಬೇಕಾಗಿರುತ್ತದೆ ಪ್ರಚಾರಕ್ಕೆ ಬಳಸುವ ಕರಪತ್ರಗಳನ್ನು ಮುದ್ರಿಸುವ ಸಮಯದಲ್ಲಿ ಕರಪತ್ರಗಳ ಮುದ್ರೆಸುವ ಒಟ್ಟು ಸಂಖ್ಯೆ ಮತ್ತು ಮುದ್ರನಾಲಯದ ವಿವರಗಳನ್ನು ನಮೂದಿಸಬೇಕಾಗಿರುತ್ತದೆ
ಚುನಾವಣಾ ಪ್ರಚಾರಕ್ಕಾಗಿ ಧಾರ್ಮಿಕ ಸಂಸ್ಥೆಗಳನ್ನು ಉಪಯೋಗಿಸುವಂತಿಲ್ಲ ಧರ್ಮ ಜಾತಿ ಉಪಯೋಗಿಸಿಕೊಂಡು ಪ್ರಚಾರ ಮಾಡುವಂತಿಲ್ಲ ಹಾಗೂ ಇದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವಂತಿಲ್ಲ ಮತದಾರರಿಗೆ ಯಾವುದೇ ಅಮಿಷನಗಳು ನೀಡುವಂತಿಲ್ಲ ಒಬ್ಬ ಅಭ್ಯರ್ಥಿಯು ಚುನಾವಣಾ ಸಮಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಚುನಾವಣಾ ಆಯೋಗದಿಂದ ನಿಗದಿಪಡಿಸಿರುವ ವೆಚ್ಚವನ್ನು ನೀಡುವಂತಿಲ್ಲ
ಚುನಾವಣಾ ಅಕ್ರಮಗಳು ನಡೆದದಲ್ಲಿ ಜಿಲ್ಲಾಧಿಕಾರಿಗಳಿಂದ ನೇಮಿಸಲಾಗಿರುವ ಕಣ್ಗಾವಲು ಪಡೆ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಬಹುದಾಗಿರುತ್ತದೆ.
ಮತಕಟ್ಟೆ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವುದು ನಿಷೇಧಿಸಲಾಗಿದೆ ಹಾಗೂ ಮತದಾನ ಮುಗಿಯಲು 48 ಗಂಟೆ ಮೊದಲೇ ಬಹಿರಂಗ ಪ್ರಚಾರ ಮುಗಿಸಬೇಕಾಗಿರುತ್ತದೆ ಹಾಗೂ ಮತದಾರರಲ್ಲದವರು ಕ್ಷೇತ್ರದ ವನ್ನು ತೊರೆಯಬೇಕಾಗಿರುತ್ತದೆ ಸರ್ಕಾರಿ ನೌಕರರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.