ಕರ್ನಾಟಕ ಟಿಪ್ಪು ಸೆಕ್ಯೂಲರ್ ಸೇವೆ ರಾಜ್ಯಾಧ್ಯಕ್ಷ ಆಸೀಫ್ ಸಿಎಂಆರ್ ಶ್ರೀನಾಥ್‌ಗೆ ಬೆಂಬಲ

ಕೋಲಾರ, ಜೆಡಿಎಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರನ್ನು ಬೆಂಬಲಿಸಲು ಕರ್ನಾಟಕ ಟಿಪ್ಪು ಸೆಕ್ಯೂಲರ್ ಸೇವೆ ರಾಜ್ಯಾಧ್ಯಕ್ಷ ಆಸೀಫ್ ಹಾಗೂ ಅವರ ತಂಡ ಸೋಮವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಆಸೀಫ್, ರಾಜ್ಯದಲ್ಲಿ ಆಡಳಿತ ನಡೆಸುತ್ತಾ ಇದ್ದ ಬಿಜೆಪಿ ಸರಕಾರವು ಮುಸ್ಲಿಂ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದ್ದರು. ಅಂತಹ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿ ಇದ್ದ ಕಾಂಗ್ರೆಸ್ ಕೂಡ ನಮ್ಮಗಳ ರಕ್ಷಣೆಗೆ ನಿಲ್ಲಲಿಲ್ಲ ಇವತ್ತು ಅಲ್ಪಸಂಖ್ಯಾತರ ರಕ್ಷಣೆ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯವಿದ್ದು ಇಡೀ ರಾಜ್ಯಾದ್ಯಂತ ಸಂಘಟನೆಯೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದೆ ಎಂದರು.
ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ, ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಬಾಳು ಸಮಪಾಲು ತತ್ವದಡಿ ನಂಬಿಕೆಯಿಟ್ಟು ಆಡಳಿತ ನೀಡಿರುವ ಪಕ್ಷ ಅದು ಮಾಜಿ ಪಿಎಂ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷ ಮಾತ್ರ ಇವತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಪಕ್ಷ ಬದ್ದವಾಗಿ ಇದ್ದು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವoತೆ ಮನವಿ ಮಾಡಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರ ಧಾರ್ಮಿಕ ನಂಬಿಕೆಗಳ ಮೇಲೆ ಸವಾರಿ ನಡೆದಿದೆ. ಕೋಮು ಸೌಹಾರ್ದದಿಂದ ಕೂಡಿ ಬಾಳುತ್ತಿರುವ ಅಲ್ಪಸಂಖ್ಯಾತರು ಹಿಂದುಳಿದ ದಲಿತರ ಒಗ್ಗಟ್ಟು ಮುರಿಯುವ ಹುನ್ನಾರ ನಡೆಸಲಾಗುತ್ತಿದೆ ಜೆಡಿಎಸ್ ಪಕ್ಷದ ಆಡಳಿತದಿಂದ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸೌಲಭ್ಯ ನೀಡಲಾಗಿದ್ದು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಉತ್ತಮ ಜನಪರ ಆಡಳಿತ ನೀಡಲಿದ್ದು ಬರುವ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವoತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಣಕನಹಳ್ಳಿ ನಟರಾಜ್, ಬಾಬು ಮೌನಿ, ಸುಧಾಕರ್, ಟಿಪ್ಪು ಸೆಕ್ಯೂಲರ್ ಸೇನೆ ಜಿಲ್ಲಾ ಅಧ್ಯಕ್ಷ ನವಾಜ್, ಸತೀಶ್, ಉಮರ್ ಉಲ್ಲಾ ಖಾನ್, ಅಫ್ಸರ್, ಬಕ್ರತ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *