ಒಂದು ತಿಂಗಳ ಒಳಗಾಗಿ ಗ್ರಾಮದ ಸರಕಾರಿ ಶಾಲೆಯನ್ನು ಶ್ರಮದಾನದ ಮೂಲಕ ಸುಂದರವಾಗಿಸುವುದೇ ನನಗೆ ನೀವು ನೀಡುವ ಕೊಡುಗೆ : ಎಸ್ಪಿ ಡಿ.ದೇವರಾಜ್

ಕೋಲಾರ: ಪುಟ್ಟ ಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ  ಅರ್ಥಪೂರ್ಣವಾಗಿ ಆಚರಿಸಿದ್ದೀರಿ, ಒಂದು ತಿಂಗಳ ಒಳಗಾಗಿ ಗ್ರಾಮದ ಸರಕಾರಿ ಶಾಲೆಯನ್ನು ಶ್ರಮದಾನದ ಮೂಲಕ ಸುಂದರವಾಗಿಸುವುದೇ ನನಗೆ ನೀವು ನೀಡುವ ಕೊಡುಗೆ ಎಂದು ಎಸ್ಪಿ ಡಿ.ದೇವರಾಜ್ ಹೇಳಿದರು.

ತಾಲೂಕಿನ ಬೆಟ್ಟಹೊಸಪುರ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪದವಿ ಕಾಲೇಜು ವಿದ್ಯಾರ್ಥಿಗಳು ಕೋಲಾರದಲ್ಲಿ ಶ್ರಮದಾನ ಮಾಡಿದಂತೆ ನಿಮ್ಮ ಗ್ರಾಮದ ಯುವಕರು ಶ್ರಮದಾನ ಮಾಡಿ ಸುಂದರವಾಗಿಸಿದರೆ ಅಲ್ಲಿ ಹೋಗುವ ಮಕ್ಕಳಿಗೂ ಅಕ್ಷರ ಕಲಿಯಲು ಆಕರ್ಷಣೆಯಾಗುತ್ತದೆ. ನೈರ್ಮಲ್ಯೀಕರಣ ಅಲ್ಲಿಂದಲೇ ಆರಂಭವಾದರೆ ಪ್ರತಿಯೊಂದು ಹಂತದಲ್ಲೂ ಪ್ರಜ್ಞೆವಹಿಸಿ ಕ್ರಮಬದ್ಧವಾಗಿ ಓದುತ್ತಾರೆ. ಅದರಿಂದ ಗುರಿ ಸಾಧನೆಗೆ ಸಹಕಾರಿಯಾಗಲಿದೆ. ಒಂದು ತಿಂಗಳಲ್ಲಿ ಗ್ರಾಮಕ್ಕೆ ಬರುತ್ತೇನೆ, ಅಷ್ಟರೊಳಗೆ ಸುಂದವಾಗಿಸಿ ಸುಣ್ಣಬಣ್ಣ, ಮತ್ತೆ ನಾನು ಗಿಡ ನೆಡುವ ಕಾರ್ಯವೇ ನೀವು ನನಗೆ ನೀಡುವ ಉಡುಗೊರೆ ಎಂದರು.

ನಾವು ಸಹ ವೇಮಗಲ್ ಪೊಲೀಸ್ ಠಾಣೆಯನ್ನು ದೇವಾಲಯದಂತೆ ನವೀಕರಣಗೊಳಿಸಿದ್ದೇವೆ.

ನೊಂದವರು ಮುಕ್ತವಾಗಿ ನ್ಯಾಯ ಕೇಳಲು ಬರುವಂತಹ ವಾತಾವರಣ ನಿರ್ಮಾಣವಾಗಬೇಕು. ನಿಟ್ಟಿನಲ್ಲೇ ನಾನು ಅದನ್ನು ನವೀಕರಣಗೊಳಿಸಲು ನಾನು ಸೂಚಿಸಿದ್ದೆ. ಇಡೀ ಜಿಲ್ಲೆಯಲ್ಲೇ ಬೆಸ್ಟ್ ಪೊಲೀಸ್ ಠಾಣೆಯಾಗಿದೆ ಈಗ ಅದನ್ನು ನೋಡಿಕೊಂಡು ಬನ್ನಿ. ಶಾಲೆಯನ್ನು ಉತ್ತಮವಾಗಿರಿಸಿಕೊಂಡರೆ ವಿದ್ಯಾರ್ಥಿಗಳು ಸರಿದಾರಿಯಲ್ಲಿ ಸಾಗಲು ಸಾಧ್ಯ ಎಂದು ತಿಳಿಸಿದರು.

ಆಟೋ ಚಾಲಕರಿಗೆ ಸಮವಸ್ತ್ರ ನೀಡಿರುವುದು ಶ್ಲಾಘನೀಯ. ಆದರೆ ನರಸಾಪುರ ಆಟೋ ನಿಲ್ದಾಣದಲ್ಲಿ ಶಿಸ್ತು ನಿರ್ವಹಿಸದೇ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿರುವ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಪರಿಚಿತ ವ್ಯಕ್ತಿಗಳು ಬಂದರೆ ಎಚ್ಚರವಹಿಸಿ, ಇಲ್ಲವಾದರೆ ಆಟೋಗಳನ್ನು ಜಫ್ತಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವೇಮಗಲ್ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶಿವರಾಜ್ ಮಾತನಾಡಿ, ಎಲ್ಲಾದರೂ ಇರು ಎಂತಾದರೂ ಇರು ಎಂದೆoದಿಗೂ ಕನ್ನಡವಾಗಿರು ಎಂಬoತೆ ಕನ್ನಡ ರಾಜ್ಯೋತ್ಸವ ಆಚರಿಸಿ ಭಾಷೆಯ ಜಾಗೃತಿ ಮೂಡಿಸುತ್ತಿದ್ದೀರಿ, ಇದೇ ರೀತಿ ಕನ್ನಡದ ಹಬ್ಬ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಘಟಕದ ಅಧ್ಯಕ್ಷ ಜಗನ್ ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ, ಸತೀಶ್, ಶಿಕ್ಷಕ ಮುನಿರಾಜು, ಸದಾನಂದ್, ಮುನಿಯಪ್ಪ, ಮುನಿರಾಜು, ವಕೀಲ ರಾಮು, ಚಂದ್ರಪ್ಪ, ಜಿ.ವೆಂಕಟೇಶ್ ಮುಂತಾದವರಿದ್ದರು.

Leave a Reply

Your email address will not be published. Required fields are marked *