ಐದು ವರ್ಷದ ಬಾಲಕನ ಅಪಹರಣ ಮಾಡಿದ ೧ ಘಂಟೆಯಲ್ಲಿ ಕೋಲಾರ ಗ್ರಾಮಾಂತರ ಠಾಣಾ ಪೊಲೀಸ್, ಶ್ರೀನಿವಾಸಪುರ ಹಾಗೂ ಸೋಮಯಾಜಲಹಳ್ಳಿ ಓಪಿ ಪೊಲೀಸರ ಕಾರ್ಯವೈಕರಿ ಎಸ್,ಪಿ ನಾರಾಯಣ್ ಶ್ಲಾಘನೆ.

ಕೋಲಾರ, ಕೋಲಾರದಲ್ಲಿ ಐದು ವರ್ಷದ ಬಾಲಕನನ್ನು ಅಪಹರಣ ಮಾಡಿದ ಆರೋಪಿಗಳನ್ನು ಕೇವಲ ಒಂದು ಗಂಟೆಯಲ್ಲಿ ಬಂಧಿಸಿ ಪ್ರಕರಣವನ್ನು ಮಿಂಚಿನ ವೇಗದಲ್ಲಿ ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಜಿಲ್ಲೆಯಲ್ಲಡೆ ಮೆಚ್ಚುಗೆ ಪಾತ್ರರಾಗಿದ್ದಾರೆ. ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಲೋಕೇಶ್ ಎಂಬುವವರ ಮಗ ಯಶ್ವಿತ್ ಗೌಡನನ್ನು ಸಂಜೆ ೫.೧೫ ರ ಸುಮಾರಿಗೆ ಅಪಹರಣ ಮಾಡಲಾಗಿದ್ದು. ಶಾಲೆಯಿಂದ ಮನೆಗೆ ಬರುವ ವೇಳೆಯಲ್ಲಿ ಮನೆಯ ಬಳಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಪಹರಣ ಮಾಡಿದ್ದರು.

ಸುಪಾರಿ ನೀಡಿ ಅಪಹರಣ ಮಾಡಿಸಿರುವ ಬಗ್ಗೆ ಶಂಕೆ :
ಸುಪಾರಿ ನೀಡಿ ಅಪಹರಣ ಮಾಡಲಾಗಿದೆ ಎನ್ನಲಾಗಿರಿವ ಇಟ್ಟಿಗೆ ಫ್ಯಾಕ್ಟರಿ ಹಾಗೂ ಎಕ್ಸಿಡಿ ಬ್ಯಾಟರಿ ಡೀಲರ್​ಶೀಪ್​ ಹೊಂದಿರುವ ಲೋಕೇಶ್​ರನ್ನು ಹೆದರಿಸುವ ನಿಟ್ಟಿನಲ್ಲಿ ಆತನ ಮಗ ಐದು ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ತಕ್ಷಣವೇ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು, ಶ್ರೀನಿವಾಸಪುರ ಹಾಗೂ ಸೋಮಯಾಜಲಹಳ್ಳಿ ಒಪಿ ( ಹೊರ ಠಾಣೆ)ಯ ಗಡಿಯ ಆಂದ್ರ ಪ್ರದೇಶದ ಪೊಲೀಸರನ್ನು ಅಪಹರಣ ಪ್ರಕರಣ ಕುರಿತು ಕಾರ್ಯಪ್ರವೃತ್ತರಾಗಿ ಮಿಂಚಿನ ದಾಳಿ ಮಾಡಿದರು​ ಈ ವೇಳೆ ಅಪಹರಣಾಕಾರರು ಕಿಡ್ನಾಪ್​ ಮಾಡಿಕೊಂಡು ಶ್ರೀನಿವಾಸಪುರ ರಸ್ತೆಯಲ್ಲಿ ಹೋಗಿರುವ ಮಾಹಿತಿ ಮಿಂಚಿನoತೆ ಹರಿಯಿತು.

ಸಿನಿಮೀಯ ರೀತಿಯಲ್ಲಿ ಅಪಹರಣಕಾರರ ಬಂಧನ :
ಖಚಿತ ಮಾಹಿತಿ ಮೇರೆಗೆ ಅಪಹರಣಕಾರರ ಹಿಂಬಾಲಿಸಿದ ಪೊಲೀಸರು, ತಕ್ಷಣ ಶ್ರೀನಿವಾಸಪುರ ಪೊಲೀಸ್ರಿಗೆ ಮಾಹಿತಿ ನೀಡಿದ​ ನಂತರ ಶ್ರೀನಿವಾಸಪುರದ ಪಿಎಸ್​ಐ ಈಶ್ವರ್​, ಎಎಸ್​ಐ ಎಂ.ಡಿ.ನಾರಾಯಣಪ್ಪ, ಕೋಲಾರ ಗ್ರಾಮಾಂತರ ಠಾಣಾ ಪೊಲೀಸ್ ಸಿಪಿಐ ಲೋಕೇಶ್​ ಕುಮಾರ್​ ಎಲ್ಲರ ತಂಡಗಳಾಗಿ ಅಪಹರಣಕಾರರ ಬೇಟೆಯಾಡಿದರು. ಈ ವೇಳೆ ಅಪಹರಣಾಕಾರರು ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಪಲ್ಲಿ ಬಳಿ ಹೋಗುತ್ತಿರುವ ಮಾಹಿತಿ ಹಿನ್ನೆಲೆ ಅಪಹರಣಾಕಾರರನ್ನು ಸೋಮಯಾಜಲಹಳ್ಳಿ ಹೊರ ಠಾಣೆ ಬಳಿಯ ಪೋಲೀಸರು ಬಂಧಿಸಿದ್ದಾರೆ.ಅಪಹರಣಕಾರರು ಪಲ್ಸರ್ 5099 ಗಾಡಿ ನಂಬರ್ ಪ್ಲೇಟ್ ಅನ್ನು ಸ್ಕೆಚ್ ಪಿನ್ ಮೂಲಕ 6888 ಎಂದು ತಿದ್ದಿಕೊಂಡು ತನ್ನ ಚಾಣಕ್ಯತನವನ್ನು ತೋರಿದ್ದಾರೆ ಆದರೆ ಬೆನ್ನು ಬಿದ್ದ ಪೊಲೀಸರು ಈ ಗಾಡಿ ನಂಬರ್ ಸಮೇತ ಹಿಡಿಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಮಗುವನ್ನು ಪೋಷಕರ ಮಡಿಲಿಗೆ ಒಪ್ಪಿಸಿ ಅಪಹರಣಕಾರರನ್ನು ಬಂಧಿಸಿದ ನಂತರ ಅಪಹರಣಕ್ಕೆ ಬಳಸಿದ್ದ ಬೈಕ್​​ನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಅಪಹರಣಾಕಾರರನ್ನು ಬೇತಮಂಗಲದ ವೆಂಕಟೇಶ್ ಹಾಗೂ ಅರಹಳ್ಳಿಯ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಸದ್ಯ ಅರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆರೋಪಿಗಳ ಹಿಂದಿನ ಉದ್ದೇಶವೇನು, ಇವರ ಹಿಂದೆ ಯಾರಿದ್ದಾರೆ ಎನ್ನುವ ಮಾಹಿತಿ ಬೇದಿಸಲು ಮುಂದಾಗಿದ್ದಾರೆ. ಮಿಂಚಿನ ಕಾರ್ಯಾಚರಣೆ ಮಾಡಿದ ಕೋಲಾರ ಪೊಲೀಸರಿಗೆ ಯಶ್ವಿತ್ ಗೌಡ ಕುಟುಂಬಸ್ಥರು ಹಾಗೂ ಕೋಲಾರದ ಜಿಲ್ಲೆಯ ಸಾರ್ವಜನಿಕರಿಂದ ಪ್ರಶಂಸೆಗಳ ಸುರಿಮಳೆ ಸುರಿಸಿದ್ದಾರೆ. ಪೊಲೀಸ್​ ಸಿಬ್ಬಂದಿಯ ಕಾರ್ಯವೈಕರಿಯನ್ನು ಕೋಲಾರ ಎಸ್ಪಿ ನಾರಾಯಣ್​ ರವರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *