ಶ್ರೀನಿವಾಸಪುರ ತಾಲೂಕಿನಲ್ಲಿ ತನ್ನದೇ ಆದಂತಹ ಅಭಿಮಾನಿ ಬಳಗವನ್ನು ನಿಯೋಜಿಸಿಕೊಂಡಿರುವ ಬಿಜೆಪಿ ಪಕ್ಷದ ವತಿಯಿಂದ ಶ್ರೀನಿವಾಸಪುರ ತಾಲೂಕಿನಲ್ಲಿ ಹಲವಾರು ರೀತಿಯ ಜನಪರ ಕಾರ್ಯಕ್ರಮಗಳನ್ನು ನೀಡುವಲ್ಲಿ ಜನಾನು ರಾಗಿ ಆಗಿರುವ ಯುವ ಮುಖಂಡ sln ಮಂಜುನಾಥ್ ರವರು ಜೆಡಿಎಸ್ ಪಕ್ಷದ ವರಿಷ್ಠರು ಹಾಗೂ ಮಾಜಿ ಮುಖ್ಯಮಂತ್ರಿಗಳು ಆಗಿರುವ ಎಚ್ ಡಿ ಕುಮಾರಸ್ವಾಮಿ ರವರ ಮತ್ತು ಕೋಲಾರ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ಆಗಿರುವ ಜಿಕೆ ವೆಂಕಟಶಿವಾರೆಡ್ಡಿರವರ ಸೌಹಾರ್ದತೆ ಭೇಟಿಯನ್ನು ಮಾಡಿದ್ದಾರೆ.
ಜನಪರವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ ಕೆ ವೆಂಕಟಶಿವಾರೆಡ್ಡಿ ರವರು ಬೆಂಗಳೂರಿನ ಜಕ್ಕೂರು ಏರೋಡ್ರಮ್ ಸಮೀಪ ಎಸ್ ಎಲ್ ಎನ್ ಮಂಜುನಾಥ್ ರವರು ಆತ್ಮೀಯವಾಗಿ ಸೌಹಾರ್ದತೆಯಾಗಿ ಭೇಟಿಯಾಗಿದ್ದಾರೆ.
ಎಸ್ಎಲ್ಎನ್ ಮಂಜುನಾಥ್ ರವರು ಯಾವುದೇ ರೀತಿಯಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಎಸ್ ಎಲ್ ಎನ್ ಮಂಜುನಾಥ್ ರವರು ಶ್ರೀನಿವಾಸಪುರ ತಾಲೂಕಿನಲ್ಲಿ ಬಿಜೆಪಿ ಪಕ್ಷದ ಮುಖಂಡರು ಆಗಿದ್ದು ಮತ್ತು ಹಲವಾರು ರೀತಿಯ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇವರು ಒಂದು ಸಮುದಾಯದ ಮುಖಂಡರಾಗಿದ್ದು ಎಲ್ಲ ಜನಾಂಗದವರ ಜೊತೆಯಲ್ಲಿ ಅನೂ ನ್ಯವಾಗಿ ಯುವಜನತೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ, ಕಷ್ಟಪಟ್ಟು ಮೇಲೆ ಬಂದಿರುವ ಇವರು ಶ್ರೀನಿವಾಸಪುರ ತಾಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳುವಲ್ಲಿ ನಿ ಸ್ಸೀಮರಾಗಿದ್ದಾರೆ.
ಎಸ್ ಎಲ್ ಎನ್ ಮಂಜುನಾಥ್ ರವರು ಜೆಡಿಎಸ್ ಪಕ್ಷಕ್ಕೆ ಬರುವುದಾದರೆ ನಾವು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ಹೇಳಿದರಲ್ಲದೆ ಎಸ್ ಎಲ್ ಎನ್ ಮಂಜುನಾಥ್ ರವರ ಸಂಪೂರ್ಣ ಸಹಕಾರ ಮತ್ತು ಬೆಂಬಲ ನಮ್ಮ ಜೆಡಿಎಸ್ ಪಕ್ಷಕ್ಕೆ ದೊರೆಯುತ್ತದೆ ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಮಾಜಿ ಎಂಎಲ್ಸಿ ಯಾದ ಆರ್ ಚೌಡರೆಡ್ಡಿ, ವಕೀಲ ಮಾರುತಿ ರೆಡ್ಡಿ ಹಾಗೂ ಹಲವರು ಯುವ ಮುಖಂಡರು ಸಹ ಹಾಜರಿದ್ದರು.