ಶ್ರೀನಿವಾಸಪುರ ತಾಲೂಕಿನ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಿಕೆ ವೆಂಕಟಶಿವಾರೆಡ್ಡಿ 21 ಸುತ್ತುಗಳ ಮತ ಎಣಿಕೆಯಲ್ಲಿ 95463 ಮತಗಳನ್ನು ಪಡೆದಿದ್ದರು ಕಾಂಗ್ರೆಸ್ ಅಭ್ಯರ್ಥಿ ಕೆ ಆರ್ ರಮೇಶ್ ಕುಮಾರ್ 85020 ಮತಗಳನ್ನು ಪಡೆದಿದ್ದರು ಈ ಗೆಲುವಿನ ಅಂತರದಲ್ಲಿ ಜಿಕೆ ವೆಂಕಟಶಿವಾರೆಡ್ಡಿರವರು 10443 ಮತಗಳ ಪಡೆದು ಗೆಲುವಿನ ನಗೆ ಬೀರಿದ್ದಾರೆ ಒಟ್ಟು ಮತಗಳು 191297 ಆಗಿದ್ದ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸ ರೆಡ್ಡಿ 6408 ಮತಗಳನ್ನು ಪಡೆದರೆ ಎ ಎ ಪಿ ಅಭ್ಯರ್ಥಿ ಡಾಕ್ಟರ್ ವೈವಿ ವೆಂಕಟಚಲ 2086 ಮತಗಳನ್ನು ಪಡೆದಿದ್ದು,678 ನೋಟ ಮತಗಳನ್ನು ಮತದಾರರು ಚಲಾಯಿಸಿದ್ದಾರೆ.
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ರವರು 94254 ಮತಗಳನ್ನು ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ ಆದಿ ನಾರಾಯಣ 67980 ಮತಗಳನ್ನು ಪಡೆದು ಸಮೃದ್ಧಿ ಮಂಜುನಾಥ್ ರವರು 20 ಸುತ್ತುಗಳ ಮತ ಎಣಿಕೆಯಲ್ಲಿ 26268 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ ಬಿಜೆಪಿ ಅಭ್ಯರ್ಥಿ ಶ್ರೀಗೆಹಳ್ಳಿ ಸುಂದರ್ ರಾಜ್ ರವರು 8806 ಮತಗಳನ್ನು ಪಡೆದು ಕೊಂಡಿದ್ದರು ಒಟ್ಟು ಮತಗಳು 176144 ಮತಗಳು ನೋಟ ಮತಗಳು 922 ಮತಗಳು ಮತದಾರರು ಚಲಾಯಿಸಿದ್ದಾರೆ.
ಕೆಜಿಎಫ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೂಪಕಲ ಎಂ 81569 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿಯಾಗಿ ಅಶ್ವಿನಿ ಸಂಪಂಗಿ ರವರು 31102 ಮತಗಳನ್ನು ಪಡೆದರು ಈ ಮತಗಳಲ್ಲಿ 50467 ಮತಗಳ ಅಂತರದಿಂದ ಜಯಶೀಲರಾಗಿ ರೂಪಕಲರವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ ಆರ್ಪಿಐ ಪಕ್ಷದ ರಾಜೇಂದ್ರನ್ ರವರು 29795 ಪಡೆದುಕೊಂಡಿದ್ದಾರೆ ಜೆಡಿಎಸ್ ಪಕ್ಷದ ರಮೇಶ್ ಬಾಬು1343 ಮತ ಪಡೆದು ಒಟ್ಟು 147887 ಮತಗಳು ಇದ್ದರೆ ನೋಟ 1383 ಮತಗಳನ್ನು ಚಲಾಯಿಸಿದ್ದರು 17 ಸುತ್ತುಗಳಲ್ಲಿ ಈ ಪ್ರಕ್ರಿಯೆ ನಡೆದಿತ್ತು.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಸ್ ಎನ್ ನಾರಾಯಣಸ್ವಾಮಿ ರವರು 77292 ಮತಗಳನ್ನು ಪಡೆದರೆ ಜೆಡಿಎಸ್ ಪಕ್ಷದ ಮಲ್ಲೇಶ್ ಬಾಬುರವರು 69170 ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷದ ಎಸ್ ಎನ್ ನಾರಾಯಣಸ್ವಾಮಿ ರವರು 8122 ಮತಗಳ ಅಂತರದಿಂದ ವಿಜಯ ಪತಾಕೆಯನ್ನು ಹಾ ರಿಸಿದ್ದಾರೆ ಬಿಜೆಪಿ ಅಭ್ಯರ್ಥಿ ಎಂ ನಾರಾಯಣಸ್ವಾಮಿ ರವರು 8972 ಪಡೆದು ನೋಟ 1223 ಮತ ಚಲಾವಣೆ ಆಗಿದೆ ಒಟ್ಟು 161050 ಮತಗಳನ್ನು ಚಲಾಯಿಸಿದ್ದರು ಈ ಎಲ್ಲಾ ಮತಗಳು 19 ಸುತ್ತುಗಳಲ್ಲಿನ ಮತಗಳಾಗಿದ್ದವು.
ಮಾಲೂರ್ ವಿಧಾನಸಭಾ ಕ್ಷೇತ್ರದ ಕೆ ವೈ ನಂಜೇಗೌಡ 50955 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ 50707 ಮತಗಳನ್ನು ಪಡೆದುಕೊಂಡಿದ್ದರೆ ಕೆ ವೈ ನಂಜೇಗೌಡ ರವರು 248 ಮತಗಳ ಅಂತರದಿಂದ ಎರಡನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಲು ಸಜ್ಜಾಗಿದ್ದಾರೆ ಸ್ವತಂತ್ರ ಅಭ್ಯರ್ಥಿಯಾಗಿ ಹೂಡಿ ವಿಜಯ್ ಕುಮಾರ್ ರವರು 49362 ಮತಗಳನ್ನು ಪಡೆದುಕೊಂಡು. ಜೆಡಿಎಸ್ ಅಭ್ಯರ್ಥಿ ಜೆ ಇ ರಾಮೇಗೌಡ 17627 ಪಡೆದು ನೋಟ 647 ಚಲಾವಣೆ ಆಗಿದ್ದರೆ ಒಟ್ಟು174428 ಮತಗಳು 19 ಸುತ್ತುಗಳ ಮತ ಎಣಿಕೆಯಲ್ಲಿ ಚಲಾವಣೆಯಾಗಿದ್ದವು.
ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್ 83026 ಮತಗಳನ್ನು ಪಡೆದರೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ರವರು 50525 ಮತಗಳನ್ನು ಪಡೆದರು ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ 50288 ಮತಗಳನ್ನು 21 ಸುತ್ತುಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ರವರು 32501 ಮತಗಳ ಅಂತರದಿಂದ ಜಯಶೀಲರಾಗಿ ವಿಜಯಪತಾಕೆಯನ್ನು ಹಾರಿಸಿದರು ನೋಟ 989 ಮತಗಳು ಚಲಾವಣೆಯಾಗಿದ್ದರೆ ಒಟ್ಟು ಮತಗಳು 188631 ಮತಗಳು 21 ಸುತ್ತುಗಳ ಮತ ಎಣಿಕೆ ವೇಳೆಗೆ ಚಲಾವಣೆಯಾಗಿದ್ದವು ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ 4 ಸ್ಥಾನಗಳನ್ನು ಪಡೆದುಕೊಂಡು ಜೆಡಿಎಸ್ ಪಕ್ಷವು ಎರಡು ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ.