ಕೋಲಾರ:- ನಗರದ ಹೃದಯ ಭಾಗದಲ್ಲಿರುವ ಉಪವಿಭಾಗಧಿಕಾರಿಗಳ ಕಚೇರಿಯನ್ನು ದ್ವಂಸಗೊಳಿಸಿ ಸಿ.ಇ.ಒ ನಿವಾಸ ನಿರ್ಮಿಸುವ ತಿರ್ಮಾನ ಕೈಬಿಡಬೇಕೆಂದು ರೈತ ಸಂಘದಿoದ ಉಪ ವಿಭಾಗಧಿಕಾರಿಗಳ ಮೂಳಕ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು.
ನಗರದ ಸುತ್ತ ಮುತ್ತ ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಅದನ್ನು ಪತ್ತೆ ಹಚ್ಚಿ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗದೆ ನಗರ ಹೃದಯ ಭಾಗದಲ್ಲಿರುವ ಎ.ಸಿ ಕಚೇರಿಯನ್ನು ದ್ವಂಸ ಮಾಡಲು ಹೋರಟಿರುವ ತಿರ್ಮಾನದ ವಿರುದ್ದ ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವoತಹ ಕೋಲಾರ ಉಪವಿಭಾಗಾಕಾರಿಗಳ ಕಚೇರಿಯನ್ನು ಧ್ವಂಸಗೊಳಿಸುವ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಂಡಿರುವುದು ಸಾವಿರಾರು ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಈಗಾಗಲೇ ಜಿಲ್ಲಾಕಾರಿಗಳ ಕಚೇರಿ ನಗರದ ಹೊರವಲಯಕ್ಕೆ ವರ್ಗಾವಣೆ ಆಗಿರುವುದರಿಂದ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೆ ಬರಲು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಬರಬೇಕಾದ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಉಪವಿಭಾಗಾಕಾರಿಗಳ ಕಚೇರಿಯನ್ನು ವರ್ಗಾವಣೆ ಮಾಡಿದರೆ ಆರು ತಾಲೂಕುಗಳ ಜನರಿಗೆ ತೀವ್ರ ತೊಂದರೆಯಾಗಲಿದೆ ಕೂಡಲೇ ಉಪವಿಭಾಗಾಕಾರಿಗಳ ಕಚೇರಿಯನ್ನು ಧ್ವಂಸಗೊಳಿಸುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಕೇಸುಗಳು ಬಾಕಿಯಿರುವ ಪಟ್ಟಿಯಲ್ಲಿ ಕೋಲಾರ ಉಪವಿಭಾಗಾಕಾರಿಗಳ ಕಚೇರಿಯು ೩ನೇ ಸ್ಥಾನದಲ್ಲಿದ್ದುö, ೫ ಸಾವಿರಕ್ಕೂ ಹೆಚ್ಚಿನ ಕೇಸುಗಳು ಎಸಿ ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿವೆ. ಹೀಗಾಗಿ ವಾರದಲ್ಲಿ ಮೂರು ದಿನ ಕೋರ್ಟ್ ತೆಗೆದುಕೊಳ್ಳುವಂತಹ ಪರಿಸ್ಥಿತಿಯಿದ್ದುö, ಎಸಿ ಕಚೇರಿಯನ್ನು ಮಿನಿ ವಿಧಾನಸೌಧ ಅಥವಾ ಜಿಲ್ಲಾಕಾರಿಗಳ ಕಚೇರಿಗೆ ಸ್ಥಳಾಂತರ ಮಾಡಿದರೆ ಜನರಿಗೆ ತೀವ್ರ ಅನಾನೂಕೂಲವಾಗಲಿದೆ. ಹೀಗಾಗಿ ಕೂಡಲೇ ಜಿಪಂಗೆ ನೀಡಿರುವ ಜಾಗವನ್ನು ಹಿಂಪಡೆದು ಐತಿಹಾಸಿಕ ಹಿನ್ನೆಲೆ ಹೊಂದಿರುವ ಎಸಿ ಕಚೇರಿಯನ್ನು ಪುನರುಜ್ಜೀವನಗೊಳಿಸಿಉಳಿಸಿಕೊಳ್ಳಬೇಕಿದೆ ಎಂದರು
ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಈಗಾಗಲೇ ಜಿಲ್ಲಾಕಾರಿಗಳ ನಿವಾಸದ ಪಕ್ಕದಲ್ಲಿಯೇ ನಿವಾಸದವಿದೆ. ಇದರೊಂದಿಗೆ ಮುಳಬಾಗಿಲು ರಸ್ತೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗಾಗಿ ಜಾಗವನ್ನು ನೀಡಲಾಗಿದೆ. ಸಿಇಒ ಒಬ್ಬರ ಅನುಕೂಲಕ್ಕಾಗಿ ಸಾವಿರಾರು ಜನರಿಗೆ ತೊಂದರೆ ನೀಡುವುದು ಸರಿಯಲ್ಲö. ಅಗತ್ಯವೆನಿಸಿದರೆ ಸಿಇಒ ಸದ್ಯ ವಾಸವಿರುವ ಮನೆಯನ್ನು ಕೆಡವಿ ಮರು ನಿರ್ಮಾಣ ಮಾಡಿಕೊಳ್ಳಲಿ. ಯಾವುದೇ ಕಾರಣಕ್ಕೂ ಎಸಿ ಕಚೇರಿಯನ್ನು ತೆರವುಗೊಳಿಸಬಾರದೆಂದು ಒತ್ತಾಯಿಸುತ್ತೇವೆ.
ಅದಾಗಿಯೂ ಎಸಿ ಕಚೇರಿಯ ಧ್ವಂಸ ಕಾರ್ಯಕ್ಕೆ ಅಕಾರಿಗಳು ಮುಂದಾದರೆ ಪ್ರಗತಿಪರ ಸಂಘಟನೆoಗಳೆಲ್ಲವೂ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ನೀಡುತ್ತಿದ್ದೇವೆ.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗದಿಕಾರಿಗಳಾದ ವೆಂಕಟಲಕ್ಷಿö ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ನಳಿನಿ.ವಿ, ಮಂಗಸoದ್ರ ತಿಮ್ಮಣ್ಣ. ಕುವಣ್ಣ, ಆನಂದ್ರೆಡ್ಡಿ, ಯಾರಂಘಟ್ಟ ಗೀರೀಶ್, ಸಂದೀಪ್, ಸಂದೀಪ್ ಗೌಡ, ನವೀನ್, ಚಂದ್ರಪ್ಪ , ಆಶೋಕ್, ವೆಂಕಟೇಶಪ್ಪ, ಮುಂತಾದವಿದ್ದರು.