ಈ ಭಾರಿಯ ನಿರ್ದಾರ ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಮತದಾರರಿಗೆ ಕರೆ.ಕಾಂಗ್ರೇಸ್- ಜೆಡಿಎಸ್ ಕಂಟಕ ತಿರಸ್ಕರಿಸಿ . ಮುಳಬಾಗಿಲು ದೋಸೆ ಕೊಂಡಾಡಿದ ಮೋದಿ.

ಕೋಲಾರ, ಅಂದಿನ ಆಡಳಿತದ ಕಾಂಗ್ರೇಸ್ ಪ್ರತಿ ಯೋಜನೆಯಲ್ಲೂ ಶೇ.೮೫ರಷ್ಟು ಕಮಿಷನ್ ಹೊಡೆಯುತ್ತಿದ್ದು ಹಾಗೇಯೇ ಕಾಂಗ್ರೆಸ್ ರಾಜರ ಪರಿವಾರ ರೈತರಿಗೆ ಮೋಸ ಮಾಡಿಕೊಂಡು ಬರುತ್ತಿತ್ತು. ಕೇಂದ್ರದಿoದ ೧ ರೂಪಾಯಿ ಕಳುಹಿಸಿದರೆ, ರೈತರಿಗೆ ೧೫ ಪೈಸೆ ತಲುಪುತ್ತೆ ಎಂದು ಆ ಪಕ್ಷದ ಪ್ರಧಾನಿಗಳೇ ಹೇಳಿದ್ದರು. ಆದರೆ ಭ್ರಷ್ಟಾಚಾರದ ಉಪದೇಶ ಮಾಡುವುದನ್ನು ಇಂದಿಗೂ ಬಿಟ್ಟಿಲ್ಲ. ಈ ಬಾರಿ ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಬದಿಗೂತ್ತಿ ಏಕೆಂದರೆ ಈ ಪಕ್ಷಗಳು ಅಭಿವೃದ್ದಿಗೆ ಕಂಟಕ ಎಂದು ಪ್ರಧಾನಿ ನರೇಂದ್ರ ಮೋದಿ ರವರು ಮತದಾರರಿಗೆ ಕರೆಕೊಟ್ಟರು.


ಕೋಲಾರದ ಕೆಂದಟ್ಟಿ ಬಳಿ ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರದಲ್ಲಿ ಪ್ರದಾನಿ ನರೇದ್ರ ಮೋದಿರವರು ಮಾತನಾಡಿದ ಭಾಷಣವನ್ನು ಕನ್ನಡಕ್ಕೆ ಗೋ ಮದುಸೂದನ್ ರವರು ಅನುವಾದ ಮಾಡಿದರು ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಭದ್ರಕೋಟೆ ಕೋಲಾರ ಆಗಿದ್ದರಿಂದ ಮತದಾರರ ಮತಗಳನ್ನು ಸೆಳೆಯಲು ಅದರoತೆ ಜನರನ್ನು ಆಕರ್ಷಿಸಲು ಅಬ್ಬರದ ಹಾಗು ನಯವಾಗಿ ಭಾಷಣ ಮಾಡಿ ಮತಯಾಚನೆ ಮಾಡುತ್ತ ಜೆಡಿಎಸ್,ಕಾಂಗ್ರೇಸ್ ಈ ಎರಡೂ ಪಕ್ಷಗಳ ಮೇಲೆ ತಮ್ಮ ಟೀಕಾ ಪ್ರಹಾರವನ್ನು ಜರಿದರು.
ತಮ್ಮ ಭಾಷಣದಲ್ಲಿ ನೇರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿ ಅತಂತ್ರ ಜನಾದೇಶಕ್ಕೆ ಅವಕಾಶ ಕೊಡ ಬೇಡಿ ಬಿಜೆಪಿಗೆ ಸ್ಪಷ್ಟ ಬಹುಮತ ಕೊಡುವಂತೆ ಮತದಾರರಿಗೆ ಕರೆ ನೀಡಿದರು.


ಕಾಂಗ್ರೇಸ್ ಭ್ರಷ್ಟಚಾರ ರಹಿತ ಯೋಜನೆ ನೀಡಲು ಸಾಧ್ಯವಿಲ್ಲ. ಸಾವಿರಾರು ಕೋಟಿಗಳ ಹಗರಣದ ಆರೋಪ ಹೊಂದಿರುವ ಕಾಂಗ್ರೆಸ್ ನಾಯಕರು ಇಂದಿಗೂ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಪರೋಕ್ಷವಾಗಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಹೆಸರುಗಳು ಹೇಳದೆ ಟೀಕಿಸಿದರು.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವ ಜನರನ್ನು ನೋಡಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿದ್ದೆ ಬರವುದಿಲ್ಲಾ. ಕರ್ನಾಟಕದ ಅಬಿವೃದ್ದಿಗೆ ಕಂಟಕ ಪ್ರಾಯವಾಗಿದೆ. ಈ ಎರಡೂ ಪಕ್ಷಗಳು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿವೆ. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳನ್ನು ಕರ್ನಾಟಕದ ಜನರು ಸ್ವಚ್ಚಮಾಡಲು ನಿರ್ಧರಿಸಿದ್ದಾರೆ. ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ತರಲು ಕರುನಾಡಿನ ಜನರು ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.


ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದರೆ ಕಾಂಗ್ರೆಸ್‍ಗೆ ಕಷ್ಟವಾಗುತ್ತಿದೆ. ನನ್ನ ಈ ಹೋರಾಟ ತಡೆದುಕೊಳ್ಳಲು ಆಗುತ್ತಿಲ್ಲ. ಮೊದಲು ನನಗೆ ಬೈಯುತ್ತಿದ್ದರು. ಈಗ ನಿಮ್ಮ ಸಮಾದಿಗೆ ಹಳ್ಳ ತೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಾವು ಮತ್ತು ಹಾವಿನ ವಿಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ನನ್ನ ಹೋಲಿಕೆಯನ್ನು ಹಾವಿನೊಂದಿಗೆ ಮಾಡುತ್ತಿದ್ದಾರೆ. ನನಗೆ ಇದರ ಬಗ್ಗೆ ಬೇಸರವಿಲ್ಲ ಎನ್ನುತ್ತಲೇ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ವಿರುದ್ಧ ಹರಿ ಹಾಯ್ದರು.
ಹಾವು ಪರಮೇಶ್ವರನ ಕೊರಳಲ್ಲಿರುವ ದೇವರು. ನನಗೆ ಈ ದೇಶದ ಜನರೇ ಈಶ್ವರ ಸ್ವರೂಪರು ನಾನು ಜನರ ಕೊರಳಲ್ಲಿರುವ ಹಾವಾಗಲು ಯಾವ ಬೇಸರವೂ ಇಲ್ಲ. ಚುನಾವಣೆ ಸಮಯದಲ್ಲಿ ಇಂತಹ ಮಾತನ್ನು ಕರ್ನಾಟಕದ ಜನತೆ ಸಹಿಸಲ್ಲ. ಈ ಬಗ್ಗೆ ಜನರು ಮೇ೧೦ರಂದು ಬಿಜೆಪಿ ಪರ ಮತ ಹಾಕುವ ಮೂಲಕ ಕಾಂಗ್ರೆಸ್‍ಗೆ ತಕ್ಕ ಗುಣ ಪಾಠ ಕಲಿಸಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಿನ ಚುನಾವಣೆ ವೇಳೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಮೂಲಕ ಜನರ ಬಳಿ ಬರುತ್ತಿದೆ. ೨೦೦೫ರಲ್ಲಿ ಪ್ರತಿ ಮನೆಗೆ ೨೦೦೯ರೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೆ ಎಂದು ಪ್ರನಾಳಿಕೆ ನೀಡಿದ್ದರು. ಆದರೆ, ೨೦೧೪ರವರೆಗೂ ಕಾಂಗ್ರೆಸ್‍ನಿoದ ವಿದ್ಯುತ್ ಹಳ್ಳಿಗಳಿಗೆ ನೀಡಲು ಸಾಧ್ಯವಾಗಲಿಲ್ಲ. ೨೦೧೪ರಲ್ಲಿ ನಮ್ಮ ಸರ್ಕಾರ ಬಂದ ನಂತರ ಕಾಂಗ್ರೆಸ್ ಯಾವುದೇ ಕೆಲಸ ಮಾಡಿರುವುದಿಲ್ಲವೋ ಆ ಕೆಲಸ ನಮ್ಮ ಗಮನಕ್ಕೆ ಬಂತು. ನಾವು ಅಧಿಕಾರಕ್ಕೆ ಬಂದ ಸಾವಿರ ದಿನಗಳಲ್ಲಿ ೧೮ ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಿದೆವು ಎಂಬ ಸಂದೇಶ ಜನತೆಗೆ ತಿಳಿಸಿದರು. ಕಾಂಗ್ರೆಸ್ ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡುತ್ತದೆ ಜನರು ನಂಬಬೇಡಿ ಎಂದು ಕಿವಿಮಾತು ಹೇಳಿದರು
೨೦೦೪ರಲ್ಲಿ ರೈತರಿಗಾಗಿ ಹಲವಾರು ಯೋಜನೆ ನೀಡುವ ಭರವಸೆ ನೀಡಿ ದಶಕಗಳಾದರೂ ಭರವಸೆಗಳು ಈಡೇರಿಸಲಿಲ್ಲ. ನಮ್ಮ ಸರ್ಕಾರ ಪಿಎಂ ಕಿಸಾನ್ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ. ಕಾಂಗ್ರೆಸ್ ನೀಡಿದ ಗ್ಯಾರಂಟಿಯನ್ನು ಬಿಜೆಪಿ ಸರ್ಕಾರ ಸಂಪೂರ್ಣ ಮಾಡಿ ಕೇಂದ್ರದ ಪಿಎಂ ಕಿಸಾನ್ ಯೋಜನೆಯ ಆರು ಸಾವಿರ ಜೊತೆಗೆ ರಾಜ್ಯ ಸರ್ಕಾರ ಸಹ ನಾಲ್ಕು ಸಾವಿರ ನೀಡುತ್ತಿದೆ ಒಟ್ಟು ಹತ್ತು ಸಾವಿರ ರೈತರಿಗೆ ನೀಡುತ್ತಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಜನತೆಯ ಮುಂದಿಟ್ಟರು.
ಕಾoಗ್ರೆಸ್ ಎಂದಿಗೂ ರೈತರ ಬಗ್ಗೆ ಯೋಚನೆ ಮಾಡಿಲ್ಲ. ನಮ್ಮ ಸರ್ಕಾರ ಬಿತ್ತನೆ ಬೀಜದಿಂದ ಹಿಡಿದು ಕೃಷಿ ಮಾರುಕಟ್ಟೆಯವರೆಗೂ ನಾವು ಯೋಚನೆ ಮಾಡುತ್ತೇವೆ. ಇದರ ಜೊತೆಯಲ್ಲಿ ನೇಕಾರಿಕೆ ಟೆಕ್ಸಟೈಲ್ ಪಾರ್ಕ್, ರೈತರ ಪರ ಕೋಲ್ಡ ಸ್ಟೋರೇಜ, ಫುಡ್ ಪಾರ್ಕ‍ಗಳನ್ನು ಎಲ್ಲಾ ಕಡೆ ಪ್ರಾರಂಭ ಮಾಡುಲಿದ್ದೇವೆ. ಇದರಿಂದ ರಾಜ್ಯದ ಎಲ್ಲಾ ಜನರಿಗೆ,ರೈತರಿಗೆ, ಉಪಯೋಗ ಆಗಲಿದೆ. ಕಾಂಗ್ರೆಸ್ ಎಸ್ಸಿ-ಎಸ್ಟಿ ಮತ್ತು ಮಹಿಳೆಯರಿಗೆ ,ಹಿಂದುಳಿದ ವರ್ಗಗಳಿಗೆ,ಅನ್ಯಾಯ ಮಾಡಿಕೋಂಡು ಬಂದಿದೆ.


ನೀವು ನಮಗೆ ನೀಡಿದ ನಿಮ್ಮ ಒಂದು ವೋಟಿನ ಮೂಲಕ ಗ್ಯಾಸ್ ಸಂಪರ್ಕ, ಶೌಚಾಲಯ, ಮನೆಗಳನ್ನು ನೀಡಿದ್ದೇವೆ. ಹಿಂದುಳಿದ ವರ್ಗಕ್ಕೆ ಸೇರಿದ ೧೦ ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಿಸಿ ಕೊಟ್ಟಿದ್ದೇವೆ. ಎರಡೂವರೆ ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಕೋವಿಡ್ ಸಮಯದಲ್ಲಿ ೮೦ ಕೋಟಿ ಜನರಿಗೆ ಉಚಿತ ರೇಷನ್ ನೀಡಿ ಜನಪರ ವಾಗಿ ಕೆಲಸ ಮಾಡಿದ್ದೇವೆಂದು ಹೇಳಿದರು.
ಕರ್ನಾಟಕದ ಈ ಚುನಾವಣೆ ಎಂಎಲಎ, ಮಂತ್ರಿ, ಸಿಎಂ ಮಾಡುವುದು ಮಾತ್ರ ಅಲ್ಲ. ಮುಂದಿನ ೨೫ ವರ್ಷ ಭಾರತದಲ್ಲಿ ನಂ೧ ಕರ್ನಾಟಕ ಆಗಬೇಕಿದೆ. ಈ ಚುನಾವಣೆಯಲ್ಲಿ ನೀವು ಬಿಜೆಪಿ ಪರವಾಗಿ ಮತ ಹಾಕಬೇಕಿದೆ. ರಾಜ್ಯದಲ್ಲಿ ಅಸ್ಥಿರ ಸರ್ಕಾರಕ್ಕೆ ಅವಕಾಶ ಕೊಟ್ಟರೆ ಸರ್ಕಾರ ನೆಡೆಸಲು ಕಠಿಣ ಪರಿಸ್ಥಿತಿ ನೀವು ನೋಡಿದ್ದೀರಾ. ಕರ್ನಾಟಕವನ್ನು ಅಸ್ಥಿರ ಸರ್ಕಾರದಿಂದ ರಕ್ಷಿಸಬೇಕಿದೆ ಸುಭದ್ರ ಸರ್ಕಾರಕ್ಕೆ
ಡಬಲ್ ಇಂಜಿನ್ ಸರ್ಕಾರವಿದ್ದರೇ ಸಾಕಷ್ಟು ಅಭಿವೃದ್ಧಿಯಾಗುತ್ತದೆ.
ಕೇಂದ್ರದಲ್ಲಿರುವ ಪ್ರಬಲವಾದ ಬಿಜೆಪಿ ಡಬಲ್ ಇಂಜಿನ್ ತರಹ ಕರ್ನಾಟಕದಲ್ಲೂ ಗಟ್ಟಿಯಾದ ಇಂಜಿನ್ ಅದಿಕಾರಕ್ಕೆ ತರಬೇಕು. ಕಾಂಗ್ರೆಸ್‌ನoತಹ ಗುಜರಿ ಇಂಜಿನ್‌ನಿoದ ದೇಶ ಅಭಿವೃದ್ಧಿಯಾಗುವುದಿಲ್ಲ. ದಶಕದಿಂದ ನೆನೆಗುದಿಗೆ ಬಿದ್ದಿದ್ದ ಎಲ್ಲ ಕೆಲಸಗಳನ್ನು ಬಿಜೆಪಿ ಮಾಡಿದೆ. ಬಿಜೆಪಿಗೆ ನೀಡುವ ನಿಮ್ಮ ಒಂದು ಮತದಿಂದ ಸಾಕಷ್ಟು ಬದಲಾವಣೆ ಆಗಲಿದೆ.
ಸ್ಪಷ್ಟ ಬಹುಮತದ ಸರ್ಕಾರ ಅದಿಕಾರಕ್ಕೆ ಬಂದರೆ ಬದಲಾವಣೆ ಕಾಣಬಹುದು. ನಮ್ಮ ದೇಶದ ಆರ್ಥಿಕತೆಗೆ ಸಾಕಷ್ಟು ಉತ್ತೇಜನ ಸಿಕ್ಕಿದ್ದು ಕೊರೊನಾ ಅಂತಹ ಕಾಲದಲ್ಲಿ ನಾವು ಮಾಡಿದ ಕಾರ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ದೇಶದ ವ್ಯಾಕ್ಸಿನೇಷನ್ ಭಾರತದ ಸಾಮಥ್ರ‍್ಯ ಜಗತ್ತಿಗೆ ಸಾರಿದೆ ಎಂದು ಬಣ್ಣಿಸಿದರು
ಕೋಲಾರ ಜಿಲ್ಲೆಯ ಮುಳಬಾಗಿಲಿನ ದೋಸೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ ಎಂದು ಕೊಂಡಾಡಿದರು
ಈ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಸಿಎಂ ಸದಾನಂದಗೌಡರು ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ, ಸಚಿವ ಸುದಾಕರ್,ಸಂಸದ ಮುನಿಸ್ವಾಮಿ, ಜಿಲ್ಲಾದ್ಯಕ್ಷ ವೇಣುಗೋಪಾಲ್,ವರ್ತೂರು ಪ್ರಕಾಶ್, ಶ್ರೀನಿವಾಸಪುರ ಅಬ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿ, ಕೆಜಿಎಪ್ ಸಂಪoಗಿ, ರೋಣೂರು ಚಂದ್ರಶೇಕರ್, ಮಾಲೂರು ಮಂಜುನಾಥ ಗೌಡ, ಬಂಗಾರಪೇಟೆ ನಾರಾಯಣಸ್ವಾಮಿ, ಕೆಜಿಎಪ್ ಅಶ್ವಿನಿ, ಮುಳಬಾಗಿಲು ಶೀಗೆಹಳ್ಲಿ ಸುಂದರ್ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದರು. ಇದೇ ವೇಳೆ ಮೋದಿರವರಿಗೆ ಕಂಬಳಿ ಹೊದಿಸಿ ಬುದ್ಧನ ಪ್ರತಿಮೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಾವೇಶದ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಆಭ್ಯರ್ಥಿಗಳ ಪರ ನರೇಂದ್ರ ಮೋದಿ ಅವರು ಮತಯಾಚನೆ ಮಾಡಿದರು. ಪ್ರಧಾನಿಗಳು ಕನ್ನಡದಲ್ಲಿಯೇ ಮಾತು ಆರಂಭಿಸುತ್ತಿದ್ದoತೆ ಅಭಿಮಾನಿಗಳು ಜೋರಾಗಿ ಕೂಗುವ ಮೂಲಕ ಸಂತೋಷ ಹೊರ ಹಾಕಿದರು. ಮೋದಿ ಮೋದಿಎಂದು ಕೂಗುತ್ತಾ ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *