ಶ್ರೀನಿವಾಸಪುರ, ತಾಲ್ಲೂಕಿನ ಹೊರವಲಯದ ಮದನಪಲ್ಲಿ – ಚಿಂತಾಮಣಿ ಮಾರ್ಗದ ತಾಡಿಗೋಳ್ ಕ್ರಾಸ್ ಸಮೀಪ ಪೊಲೀಸ್ ಇಲಾಖೆಯಿಂದ ಭರ್ಜರಿ ದಾಳಿ ನಡೆದಿದೆ.
ಕೋಲಾರ ಅಡಿಷನಲ್ ಎಸ್ ಪಿ ಭಾಸ್ಕರ್ ಬಿ ವಿ ರವರ ನೇತೃತ್ವದ ತಂಡ ತಾಡಿಗೋಳ್ ಕ್ರಾಸ್ ಸಮೀದ ಕ್ಲಬ್ ಒಂದರಲ್ಲಿ ಆಂಧ್ರ ಹಾಗೂ ಇನ್ನಿತರೆ ಮೂಲದ ಜೂಜುಕೋರರು ಇಸ್ಪೀಟ್ ದಂದೆಯನ್ನು ರಾಜಾರೋಷವಾಗಿ ಮಾಡುತ್ತಿದ್ದು ಖಚಿತ ಮಾಹಿತಿ ಮೇರೆಗೆ ವುಮೆನ್ ಸೆಲ್ ನ ನೀರಿಕ್ಷಕ ಬೈರ ರವರ ಸಿಬ್ಬಂದಿ ಹಾಗೂ ಶ್ರೀನಿವಾಸಪುರ ಪೊಲೀಸ್ ಸಿಬ್ಬಂದಿ ಭಾನುವಾರ ರಾತ್ರಿ ದಾಳಿ ನಡೆಸಿ ಲಕ್ಷಗಟ್ಟಲೆ ಬೆಲೆ ಬಾಳುವ 13 ಇಶಾರಾಮಿ ಕಾರುಗಳು, 70 ಮೊಬೈಲ್ ಫೋನ್ ಗಳು, ಹಾಗೂ 57 ಜೂಜುಕೋರರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಈ ಸಂಬಂಧ ನ್ಯಾಯಾಲಯದ ಆದೇಶದ ಮೇರೆಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯ ನೀರಿಕ್ಷಕ ಜೆ ಸಿ ನಾರಾಯಣಸ್ವಾಮಿ ಹಾಗೂ ಗೌನಿಪಲ್ಲಿ ಠಾಣೆಯ ಉಪ ನೀರಿಕ್ಷಕ ರಾಮು ರವರ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.