ಇದು ನನ್ನ ಕೊನೆಯ ಚುನಾವಣೆ, ಜನರ ಆಶೀರ್ವಾದ ನನ್ನ ಮೇಲೆ ಇದೆ : ಜಿ ಕೆ ವೆಂಕಟಶಿವಾರೆಡ್ಡಿ ಕುರುಡುಮಲೆ ವಿನಾಯಕ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ಶ್ರೀ ಶನೇಶ್ವರ, ದರ್ಗಾ, ದರ್ಶನ ನಂತರ ನಾಮಪತ್ರ ಸಲ್ಲಿಕೆ

ಶ್ರೀನಿವಾಸಪುರ, ಜಿಕೆ ವೆಂಕಟಶಿವಾರೆಡ್ಡಿರವರು ನಾಮಪತ್ರ ಸಲ್ಲಿಕೆಗೆ ಮುಂಚೆ ಮುಳಬಾಗಿಲು ಶ್ರೀ ಕುರುಡುಮಲೆ ವಿನಾಯಕ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಆನಂತರ ಶ್ರೀನಿವಾಸಪುರ ತಾಲೂಕಿನ ರೋಣೂರು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ರ‍್ಶನ ಪಡೆದು ಅನಂತರ ಶ್ರೀನಿವಾಸಪುರ ಅವರ ವಲಯದ ಪುಂಗನೂರು ಕ್ರಾಸ್ ಬಳಿ ಶ್ರೀ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ರ‍್ಶನ ಪಡೆದು ಆಶರ‍್ವಚನ ಪಡೆದ ನಂತರ ಶ್ರೀನಿವಾಸಪುರ ಮುಳಬಾಗಿಲು ರಸ್ತೆಯಲ್ಲಿರುವ ರ‍್ಗಾ ಭೇಟಿ ನೀಡಿ ಅಲ್ಲಿ ರ‍್ಶನ ಪಡೆದು ಮುಸ್ಲಿಂ ಬಾಂಧವರಿಂದ ಸನ್ಮಾನ ಪಡೆದ ನಂತರ ಶ್ರೀನಿವಾಸಪುರ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾ ಕಚೇರಿಯಲ್ಲಿ ಶನಿವಾರ ಜೆಡಿಎಸ್ ಪಕ್ಷದವತಿಯಿಂದ ಜಿ.ಕೆ.ವೆಂಕಟಶಿವಾರೆಡ್ಡಿ ನಾಮಪತ್ರ ಸಲ್ಲಿಸಿ ಮಾತನಾಡಿದರು.
ನಾನು ಈ ಭಾರಿ ಗೆಲ್ಲುವುದು ನಿಶ್ಚಿತ . ಅದರಲ್ಲಿ ಯಾವುದೇ ಸಂಶಯವಿಲ್ಲ. ಜನರು ನನ್ನ ಕೈಹಡಿಯುತ್ತಾರೆ. ಎಂಬ ನಂಬಿಕೆ ನನಲ್ಲಿ ಇದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ರಾಜಕೀಯಕ್ಕೆ ಬಂದ ದಿನಗಳಿಂದಲೂ ಎಲ್ಲಾ ಸಮುದಾಯದವರಿಗೂ ನಾನು ಗೆದ್ದರೂ, ಸೋತರೂ ಜನರ ಕಷ್ಟಕ್ಕೆ ಹಗಲಿರಲು ಶ್ರಮಿಸುತ್ತೇನೆ. ಜನರು ನನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ನನ್ನಲ್ಲಿ ಇದೆ ಎಂದು ಸ್ಪಷ್ಟಪಡಿಸಿದರು.
ಜಿಡಿಎಸ್ ಪಕ್ಷದವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ಮುಖಾಂತರ ನಾಮಪತ್ರ ಸಲ್ಲಿಸಿದರು. ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸೆಭೆ ಉಪಾಧ್ಯಕ್ಷೆ ಆಯೀಶನಯಾಜ್, ಸದಸ್ಯ ಬಿ.ವಿ.ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್, ಮುನಿಯಪ್ಪ ಹಾಗೂ ಅಪಾರ ಕಾರ್ಯಕರ್ತರು ಸಾಥ್ ನೀಡಿದರು.

Leave a Reply

Your email address will not be published. Required fields are marked *