ಅಬಕಾರಿ ನಿರೀಕ್ಷಕ ರೋಹಿತ್ ನೇತೃತ್ವದಲ್ಲಿ ದಾಳಿ.730 ಗ್ರಾಂ ಒಣ ಗಾಂಜಾ ವಶ.ಇಬ್ಬರ ಬಂಧನ

ಶ್ರೀನಿವಾಸಪುರ, ದಿನಾಂಕ ೨೩.೦೭ ೨೦೨೩ ರಂದು ಸಂಜೆ ಶ್ರೀನಿವಾಸಪುರ ನಗರದ ಜಗಜೀವನ್ ರಾಮ್ ಪಾಳ್ಯ ಮುಳಬಾಗಿಲು ರಸ್ತೆಯ ದರ್ಗಾ ಬಳಿ ದಾಳಿ ಮಾಡಿ ಸಲ್ಮಾನ್ ಎಂಬುವರುTATA ACE tempo ವಾಹನದಲ್ಲಿ ೪೩೦ gm ಒಣ ಗಾಂಜ ಹಾಗೂ ಮೊಹಮ್ಮದ್ ಹುಸೇನ್ ಸಾಬ್ ಎಂಬುವವರು TVS ೫೦ ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ೩೦೦ gm ಒಣಗಿದ ಗಾಂಜಾ ವನ್ನು ಗಿರಾಕಿಗಳಿಗೆ ಮರಾಟಕ್ಕಾಗಿ ಸಾಗಾಟ ಮಾಡುತ್ತಿದ್ದದ್ದನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ NDPS ಕಾಯ್ದೆ ೧೯೮೫ ರಡಿ ೨ ಪ್ರತ್ಯೇಕ
ಪ್ರಕರಣಗಳನ್ನು ದಾಖಲಿಸಲಾಗಿದೆ, ದಾಳಿಯಲ್ಲಿ ರೋಹಿತ್ ಬಿ ಎಸ್ ಅಬಕಾರಿ ನಿರೀಕ್ಷಕರು, ಶ್ರೀನಿವಾಸಪುರ ವಲಯ ಹಾಗೂ ಪುಷ್ಪ ಅಬಕಾರಿ ನಿರೀಕ್ಷಕರು ಕೋಲಾರ ಉಪ ವಿಭಾಗ ರವರು ಮತ್ತು ಸಿಬ್ಬಂದಿಗಳಾದ ಮಂಜುನಾಥ್ ರಾಘವೇಂದ್ರ ಶಿವಾನಂದ್ ಈಶ್ವರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *