ಶ್ರೀನಿವಾಸಪುರ : ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಬೇಕು.ಮಾನವತೆಯಿಂದ ದೈವತ್ವದ ಕಡೆಗೆ ಕರೆದೊಯ್ಯುವ ಮಾರ್ಗವೇ ಸಂಸ್ಕೃತಿ,ಸತ್ಯ ಮತ್ತು ಶಾಂತಿ ಸಕಲರ ಬಾಳಿಗೆ ಅಗತ್ಯವೆಂದು ಸತ್ಸಂಗದ ತಾಲೂಕು ಅಧ್ಯಕ್ಷ ಸತ್ಯಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಶಂಕರಮಠದಲ್ಲಿ ಶುಕ್ರವಾರ ದತ್ತನವರಾತ್ರಿಗಳ ಅಂಗವಾಗಿ ದತ್ತಾತ್ರೇಯ ಚರಿತ್ರೆ ಪಾರಾಯಣ ಹಾಗೂ ಉಪನ್ಯಾಸವನ್ನು ನೀಡಿ ಮಾತನಾಡಿದರು.
ಗುರುಗಳು ಭಗವಂತನ ಪ್ರತಿರೂಪವೇ ಆಗಿರುತ್ತಾರೆ. ಗುರುಗಳ ಕೃಪೆಯಿಂದಲೇ ಮಾನವರಿಗೆ ಭಗವಂತನ ಅನುಗ್ರಹ ಲಭಿಸುತ್ತದೆ. ಆದ್ದರಿಂದ ಭಗವಂತನಿಗೆ ತೋರುವ ಗೌರವವನ್ನು ಗುರುಗಳಿಗೂ ತೋರಬೇಕು . ಹೀಗೆ ನಾವು ನಿಜವಾದ ಗುರುಗಳಿಗೆ ಶರಣಾದರೆ , ಭಗವಂತನಿಗೆ ಶರಣಾದಂತಯೇ ಎಂದರು.
ಸತ್ಸಂಗದ ನಿರ್ದೇಶಕಿ ಮಂಗಳ ಸತ್ಯಮೂರ್ತಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಾನವ ಕೆಲಸ ಕಾರ್ಯಗಳ ನಿಮಿತ್ತ ಸದಾ ಯೋಚನೆಗಳೊಂದಿಗೆ ಮಗ್ನನಾಗಿದ್ದು , ಯೋಚನೆಗಳಿಂದ ಆರೋಗ್ಯದಲ್ಲಿ ಏರುಪೇರಾಗಿ ಬಳುಲುತ್ತಿದ್ದಾನೆ ಹಾಗು ಏಕಾಗ್ರತೆ ಇಲ್ಲದೆ ಮನಸ್ಸಿಗೆ ಶಾಂತಿ,ನೆಮ್ಮದಿ ಇಲ್ಲದೆ, ಏನು ಮಾಡುಬೇಕೆನ್ನುವ ಸ್ಥಿತಿಯಲ್ಲಿದ್ದಾನೆ ಎಂದರು.ಇದಕ್ಕೆ ಪರಿಹಾರವಾಗಿ ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೂಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ದತ್ತಾತ್ರೇಯ ನವರಾತ್ರಿ ಅಂಗವಾಗಿ ದತ್ತಾತೇಯ ಚರಿತ್ರೆ ಪಾರಾಯಣವನ್ನು ಮಾಡಿ ಶುಕ್ರವಾರ ಅನಘಾ ಅಷ್ಟಮಿ ಅಂಗವಾಗಿ ಅನಘ ಸಹಿತ ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಂಕರಮಠದ ವ್ಯವಸ್ಥಾಪಕ ಡಿ.ಆರ್.ಶ್ರೀನಿವಾಸ್, ಸದಸ್ಯರಾದ ಜಿ.ಕೃಷ್ಣ, ಜೆ.ಕೆ.ಮಂಜುನಾಥ್, ಅರ್ಚಕ ಸುಬ್ರಮಣ್ಯಶರ್ಮ, ನಾಗೇಂದ್ರಶರ್ಮ, ಸತ್ಸಂಗ ಬಳಗದ ಸದಸ್ಯರು, ಶಂಕರ ಸೇವಾ ಸಮಿತಿ ಸದಸ್ಯರು ಇದ್ದರು.